Monday, December 23, 2024

ರಸ್ತೆಗುಂಡಿಗಳಿಗೆ ಐದೇ ವರ್ಷದಲ್ಲಿ 215 ಕೋಟಿ ಸುರಿದ ಬಿಬಿಎಂಪಿ

ಬೆಂಗಳೂರು: ಸಿಲಿಕಾನ್​ ಸಿಟಿಯನ್ನು ಗುಂಡಿಮುಕ್ತ ಮಾಡೋದಕ್ಕೆ 5 ವರ್ಷಗಳಲ್ಲಿ ಬರೋಬ್ಬರಿ 215 ಕೋಟಿ ಹಣವನ್ನ ಪಾಲಿಕೆ ಖರ್ಚು ಮಾಡಿದೆ. ಆದ್ರೂ ರಸ್ತೆಗುಂಡಿಗಳು ಯಮಪಾಶದಂತೆ ಕಂಡಲ್ಲೆಲ್ಲಾ ಬಾಯ್ತೆರುಕೊಂಡೇ ಇವೆ. ಅದ್ರಲ್ಲೂ ವಾರ್ಡ್ ಗಳ ರಸ್ತೆಪರಿಸ್ಥಿತಿ ಅಯೋಮಯವಾಗಿಬಿಟ್ಟಿದೆ. ರಸ್ತೆಗಳಲ್ಲಿ ಹೋಗ್ತಿದ್ರೆ ಜೀವ ಕೈಗೆ ಬಂದಂತೆ ಆಗುತ್ತೆ. ಕಳಪೆ ಕಾಮಗಾರಿಗಳಿಗೆ ಫೇಮಸ್ ಆಗಿರೋ ಪಾಲಿಕೆ ಅಧಿಕಾರಿಗಳು, ಮಾನ ಉಳಿಸಿಕೊಳ್ಳೋಕೆ ತೇಪೆ ಕೆಲಸ ಮಾಡ್ತಾ ಇದ್ದಾರೆ. ಅಲ್ಲಲ್ಲಿ ಜಲ್ಲಿಕಲ್ಲು ಸುರಿದು, ಟಾರ್ ಹಾಕದೇ ಬಿಟ್ಟು ಬಿಟ್ಟಿದ್ದಾರೆ. ಇದು ಇನ್ನಷ್ಟು ಅವಾಂತರಗಳನ್ನ ಸೃಷ್ಠಿ ಮಾಡ್ತಾ ಇದೆ.

ವರ್ಷ              ಪೋಲಾದ ಹಣ
2017-18 ——147.8 ಕೋಟಿ
2018-19 ——49.2 ಕೋಟಿ
2019-20 ——-54.8 ಕೋಟಿ
2020-21——–16.4 ಕೋಟಿ
2021-22——–47 ಕೋಟಿ
2022 ಮೇ——14.77 ಕೋಟಿ

ಹೀಗೆ ನೂರಾರು ಕೋಟಿ ಖರ್ಚು ಮಾಡಿದ್ರೂ ಬೆಂಗಳೂರಿಗರ ಜೀವಕ್ಕೆ ಅಧಿಕಾರಿಗಳು ಗ್ಯಾರೆಂಟಿ ಕೊಡ್ತಿಲ್ಲ. ಕಳೆದ ಮೂರೇ ವರ್ಷದಲ್ಲಿ 14 ಮಂದಿ ರಸ್ತೆಗುಂಡಿಗಳಿಗೆ ಬಲಿಯಾಗಿದ್ದಾರೆ. ಕೈ, ಕಾಲು ಮುರಿದುಕೊಂಡು ಆಸ್ಪತ್ರೆ ಪಾಲಾಗಿರೋರ ಸಂಖ್ಯೆ ಆ ದೇವರಿಗೇ ಗೊತ್ತು. ಮೂರ್ನಾಲ್ಕು ದಿನದಲ್ಲಿ ಸಾವಿರಾರು ಗುಂಡಿ ಮುಚ್ಚಿದ್ದೀವಿ ಅಂತಾ ಬೊಬ್ಬೆ ಹಾಕ್ತಿರೋ ಹೊಸ ಚೀಫ್ ಕಮಿಷನರ್, ಅದ್ಯಾವ ಮೂಲೆಯನ್ನ ಮುಚ್ಚಿದ್ದಾರೋ ಗೊತ್ತಿಲ್ಲ. ಬರೋರೆಲ್ಲಾ ಲೂಟಿ ಹೊಡೆದು ಬರ್ಬಾದ್ ಮಾಡಿ ಹೋಗಿದ್ದಾಯ್ತು. ಇನ್ಮುಂದೆಯಾದ್ರೂ ಬೆಂಗಳೂರಿಗರ ಜೀವಕ್ಕೆ ಅಲ್ಪಸ್ವಲ್ಪನಾದ್ರೂ ಬೆಲೆ ಕೊಡ್ತಾರೋ ಇಲ್ವೋ ನೋಡ್ಬೇಕು.

RELATED ARTICLES

Related Articles

TRENDING ARTICLES