Monday, May 20, 2024

ಕರ್ನಾಟಕದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕಾರಣ ಏನು..?

ಬೆಂಗಳೂರು : ರಷ್ಯಾ-ಉಕ್ರೇನ್ ಯುದ್ಧದ ನಡುವೆ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ಕಳೆದ ಒಂದುವರೆ ತಿಂಗಳಿನಿಂದಲೇ ಅಡುಗೆ ಎಣ್ಣೆ ಬೆಲೆ ಏರಿಕೆಯಾಗುತ್ತಲ್ಲೇ ಇದೆ.

ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರ ಜೇಬು ಸುಡುತ್ತಲ್ಲೇ ಇದೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಭೂತ ಜನಸಾಮಾನ್ಯರ ಬೆನ್ನು ಬಿಡದೆ ಕಾಡುತ್ತಿದೆ. ಅಡುಗೆ ಎಣ್ಣೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಮದುವೆ ಸೀಸನ್​​ನಲ್ಲಿ ದುಬಾರಿ‌ ಬೆಲೆ ಕೊಟ್ಟೇ ಎಣ್ಣೆ ಖರೀದಿ ಮಾಡಬೇಕಾದ ಪರಿಸ್ಥಿತಿ ಬಂದು ಒದಗಿದೆ. ಈ ಬೆಲೆ ಏರಿಕೆಯಿಂದ ರೋಸಿ ಹೋದ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಯಾವಾಗ..? ಎಂದು ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಲೆ ಏರಿಕೆಗೆ ಮತ್ತೇನು ಕಾರಣ? ಎಂದು ನೋಡುವುದಾದರೆ ಉಕ್ರೇನ್ ರಷ್ಯಾ ಯುದ್ಧ ಮಾತ್ರವಲ್ಲ, ಇಂಡೋನೇಷ್ಯಾ ರಫ್ತು ಮಾಡದೇ ಇರುವುದು ಕೂಡ  ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಉಕ್ರೇನ್ ನಮ್ಮ ದೇಶಕ್ಕೆ ಶೇ.45ರಷ್ಟು ಪಾಮ್‌ ಆಯಿಲ್ ರಫ್ತು ಮಾಡುತ್ತಿತ್ತು. ಇಂಡೋನೇಷ್ಯಾ ಶೇ.37ರಷ್ಟು ಎಣ್ಣೆ ರಫ್ತು ಮಾಡುತ್ತಿತ್ತು. ಆದರೀಗ ಭಾರತಕ್ಕೆ ರಫ್ತು ಸ್ಥಗಿತ ಮಾಡಿದ ಪರಿಣಾಮ ಇನ್ನಷ್ಟು ಬೆಲೆ ಏರಿಕೆ ಸಾಧ್ಯತೆ ಇದೆ.ಇನ್ನು ಮಲೇಷ್ಯಾ ದೇಶವೂ ಕೂಡ ಕ್ರೂಡ್ ಅಯಿಲ್ ಬೆಲೆ ಏರಿಸಿ ಬೇಡಿಕೆಯಷ್ಟು ಎಣ್ಣೆ ರಫ್ತು ಮಾಡುತ್ತಿಲ್ಲ.

ಇನ್ನು ಮದುವೆ, ಜಾತ್ರೆ ಸೀಸನ್ ಕಾರಣ ಬೇಡಿಕೆಯಷ್ಟು ಸಮರ್ಪಕವಾಗಿ ಅಡುಗೆ ಎಣ್ಣೆ ಸಿಗುತ್ತಿಲ್ಲ. ಇನ್ನೊಂದು ತಿಂಗಳು ಅಡುಗೆ ಎಣ್ಣೆ ಏರಿಕೆ ಬಿಸಿ ತಪ್ಪಿದ್ದಲ್ಲ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಈ ಕೆಳಕಂಡಂತಿದೆ.

 ಯಾವ್ಯಾವ ಎಣ್ಣೆ ಎಷ್ಟೆಷ್ಟು ರೇಟ್‌ ಇದೆ..?

  • ಪಾಮ್ ಎಣ್ಣೆ 168 ರಿಂದ 175 ರೂ. ಕೆಜಿ
  • ಸನ್ ಫ್ಲವರ್ ಎಣ್ಣೆ 195 ರಿಂದ 197 ರೂ. ಕೆಜಿ
  • ಕಡಲೆ ಎಣ್ಣೆ 195 – 230 ರೂ. ಕೆಜಿ
  • ರೈಸ್ ಬ್ರೌನ್ ಎಣ್ಣೆ – 155 ರಿಂದ 160 ರೂ. ಕೆಜಿ
  • ಸೋಯಾ ರಿಫೈನ್ಡ್ ಆಯಿಲ್ – 165 ರಿಂದ 170 ರೂ. ಕೆಜಿ

ಒಟ್ಟಿನಲ್ಲಿ ಬೆಲೆ ಏರಿಕೆ ಎಂದು ಕಮ್ಮಿಯಾಗುವುದೋ ಎಂದು ಜನಸಾಮಾನ್ಯರು ಕಾಯುತ್ತಿರುವುದಂತು ನಿಜ.

RELATED ARTICLES

Related Articles

TRENDING ARTICLES