Sunday, January 5, 2025

ರಮ್ಯಾ ಬಗ್ಗೆ ನಲಪಾಡ್ ಹೇಳಿಕೆ ಸರಿಯಲ್ಲ : ಶಾಸಕ ರಿಜ್ವಾನ್‌ ಹರ್ಷದ್‌

ಬೆಂಗಳೂರು : ರಮ್ಯಾ ಒಳ್ಳೆಯ ನಟಿ , ಸಂಸದೆಯಾಗಿರೋರು ಅಂತಹದರಲ್ಲಿ ಅವರಿಗೆ ಮೆಂಟಲ್ ಸ್ಥಿತಿ ಸರಿಯಿಲ್ಲ ಎನ್ನುವ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿಕೆ ಸರಿಯಲ್ಲ ಎಂದ ಶಾಸಕ ರಿಜ್ವಾನ್‌ ಹರ್ಷದ್‌ ರಮ್ಯಾ ಪರ ಮಾತನಾಡಿದ್ದಾರೆ.

ಡಿಕೆಶಿ ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಹೇಳಿರೋದು ಪಕ್ಷದೊಳಗೆ ಕಾಲೆಳೆಯುವ ಬಗ್ಗೆ. ಆದ್ದರಿಂದ ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ರಾಜಕೀಯವೇ ಹೀಗೆ ಏನು ಮಾಡೋದು? ರಾಜಕಾರಣದಲ್ಲಿ ಬೆಳೆಯೋವಾಗ ಇದೆಲ್ಲ ಸಹಜ ಪ್ರಕ್ರಿಯೆಯಾಗಿದೆ ಎಂದರು.

ಇನ್ನು ನಾವು ಈ ರೀತಿ ಟ್ವಿಟ್‍ಗಳನ್ನು ಮಾಡುವುದನ್ನು ಬಿಡೋಣ. ಅದರ ಬದಲು ಬೆಲೆ ಏರಿಕೆ ಬಗ್ಗೆ ಟ್ವಿಟ್ ಮಾಡೋಣ. ನನ್ನ ಕಾಂಗ್ರೆಸ್ ಮಿತ್ರರಿಗೂ ನಾನು ಇದನ್ನೇ ಹೇಳುವುದು ಎಂದು ಹೇಳಿದರು.

ಅದುವಲ್ಲದೇ ಬಿಜೆಪಿ ನಮ್ಮ ಆಂತರಿಕ ಸಂಘರ್ಷದ ಬಗ್ಗೆ ಮಾತಾನಾಡುವ ಮುನ್ನಾ ಯತ್ನಾಳ್ ಬಗ್ಗೆ ಯೋಚಿಸಲಿ. 2500 ಕೋಟಿ ಕೊಟ್ಟಿದ್ದರೇ ನಾನು ಸಿಎಂ ಆಗ್ತಿದೆ ಎಂದು ಹೇಳಿದ್ದಾರೆ. ಅವರಿಗೆ ಒಂದು ನೋಟಿಸ್ ಕೊಟ್ಟಿಲ್ಲ ಇದರ ಬಗ್ಗೆ ತನಿಖೆ ಮಾಡಲಿ ಬಿಜೆಪಿ ಎಂದು ಆಗ್ರಹಿಸೋಣ ಎಂದು ಹೇಳಿದರು.

RELATED ARTICLES

Related Articles

TRENDING ARTICLES