Wednesday, January 22, 2025

‘ಕೆಜಿಎಫ್’ ಸಕ್ಸಸ್​​ ಬಗ್ಗೆ ಆರ್​ಜಿವಿ ಟ್ವೀಟ್ ಸೆನ್ಸೇಷನ್

ನರಾಚಿ ರಕ್ತಚರಿತ್ರೆಗೆ ಗುನ್ನ ಇಟ್ಟು, ವರ್ಲ್ಡ್ ವೈಡ್​  ವೈಲೆನ್ಸ್ ಕ್ರಿಯೇಟ್​ ಮಾಡಿರೋ ಸಿನಿಮಾ ಕೆಜಿಎಫ್ ಚಾಪ್ಟರ್-2.  ರಾಕಿಭಾಯ್​ ಸುನಾಮಿ ಸುಂಟರಗಾಳಿಗೆ ಎದುರಾಳಿ ಚಿತ್ರಗಳೆಲ್ಲಾ ಧೂಳಿಪಟ ಆಗಿವೆ. ಹೆಜ್ಜೆ ಹೆಜ್ಜೆಗೂ ಹಿಸ್ಟರಿ ಕ್ರಿಯೇಟ್​ ಮಾಡ್ತಾ ಬದಲಾವಣೆಯ ಬಿರುಗಾಳಿಗೆ ನಾಂದಿ ಹಾಡ್ತಿದೆ ಕೆಜಿಎಫ್. ಇದೀಗ ನಮ್ಮ ಮಾಸ್ಟರ್​ಪೀಸ್ ಸಕ್ಸಸ್ ಕುರಿತು ಟಾಲಿವುಡ್ ​ ಡೈರೆಕ್ಟರ್​ ರಾಮ್​ಗೋಪಾಲ್​  ವರ್ಮಾ ಮಾಡಿರೋ ಟ್ವೀಟ್ ಸಖತ್ ಸೆನ್ಸೇಷನ್ ಆಗಿದೆ.

  • ‘ಕೆಜಿಎಫ್’ ಸಕ್ಸಸ್​​ ಬಗ್ಗೆ ಆರ್​ಜಿವಿ ಟ್ವೀಟ್ ಸೆನ್ಸೇಷನ್
  • ಸಿನಿದುನಿಯಾಗೆ ಆರ್​ಜಿವಿ ಕೊಟ್ಟ ಹೇಳಿಕೆ ವೈರಲ್..!
  • KGF ಕ್ಯಾಪ್ಟನ್​ನಿಂದ ಕೋಟಿ ಕೋಟಿ ನಷ್ಟವಾಗಿದ್ಯಾರಿಗೆ..?
  • ಆಚಾರ್ಯ, ಸರ್ಕಾರು ವಾರಿ ಪಾಟ ನಿರೀಕ್ಷೆ ಹುಸಿ..!

ವರ್ಲ್ಡ್​ವೈಡ್​ ರೂಲ್ ಮಾಡ್ತಿರೋ ಕೆಜಿಎಫ್ ಸಿನಿಮಾ ಬಗ್ಗೆ ಇಡೀ ವಿಶ್ವವೇ ಹುಬ್ಬೇರಿಸಿದೆ. ಇಡೀ  ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾ ಕಡೆ ಕಣ್ಣರಳಿಸಿ  ನೋಡುವಂತೆ ಮಾಡಿದೆ. ಯಶ್ ಆಕ್ಟಿಂಗ್​ ಗತ್ತು, ನೀಲ್ ಮೇಕಿಂಗ್​ ಗಮ್ಮತ್ತಿಗೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. ಆದ್ರೆ ಅಸಲಿಗೆ ವಿಷ್ಯ ಏನಪ್ಪಾ ಆಂದ್ರೆ, ಕೆಜಿಎಫ್ ಮಾಡಿರೋ ಕಲೆಕ್ಷನ್ಸ್, ಸಾಲು ಸಾಲು ರೆಕಾರ್ಡ್​ಗಳು ಕೆಲವರ ಕೆಂಗಣ್ಣಿಗೂ ಗುರಿಯಾಗಿವೆ.

ಕನ್ನಡ ಚಿತ್ರವೊಂದು ಸಾವಿರ ಕೋಟಿ ಬಾಕ್ಸ್​ ಆಫೀಸ್ ಕಲೆಕ್ಷನ್​ ಮಾಡುತ್ತೆ ಅಂತ ಯಾರೂ ಕನಸು ಮನಸಲ್ಲೂ ಊಹಿಸಿರಲಿಲ್ಲ. ಮಾಸ್ಟರ್​ ಮೈಂಡ್​ ನೀಲ್ ಮೇಕಿಂಗ್​ ಸ್ಟೈಲ್​ಗೆ ಹಾಲಿವುಡ್​ ಕೂಡ ಥಂಡಾ ಹೊಡೆದಿದೆ. ಅದ್ರೆ, ಸದಾ ಕಾಂಟ್ರವರ್ಸಿ ಕಮೆಂಟ್​ ಮಾಡ್ತಾ  ಒಂದಿಲ್ಲೊಂದು ಸುದ್ದಿಯಲ್ಲಿರೋ ಆರ್​ಜಿವಿ  ಟ್ವೀಟ್​ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಜಿಎಫ್ ಒಂದು ದೊಡ್ಡ ಮರವಿದ್ದಂತೆ. ಅದರ ನೆರಳಿನಲ್ಲಿ ಬೇರೆ ಯಾವ ಸಿನಿಮಾಗಳು ಬೆಳೆಯುತ್ತಿಲ್ಲ ಅಂತ ಸರಣಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಬೇರೆ ಸ್ಟಾರ್ಸ್​ಗೆ ಎಫೆಕ್ಟ್.. ವರ್ಮಾ ಟ್ವೀಟ್ ಪರ್ಫೆಕ್ಟ್ : 

ಖ್ಯಾತ ನಿರ್ದೇಶಕ ವರ್ಮಾರ ಟ್ವೀಟ್​ನಲ್ಲಿ ಸತ್ಯವಿದೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಕಾರಣ ಇತ್ತೀಚೆಗೆ ಬರ್ತಿರೋ ಎಲ್ಲಾ ಸ್ಟಾರ್​ಗಳ ಸಿನಿಮಾಗಳು ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ. ಅದ್ರಲ್ಲೂ ಸೂಪರ್ ಸ್ಟಾರ್ ಮಹೇಶ್ ಬಾಬು, ಮೆಗಾಸ್ಟಾರ್ ಚಿರಂಜೀವಿ ಅಂತಹ ದಿಗ್ಗಜರ ಚಿತ್ರಗಳೇ ಪ್ರೇಕ್ಷಕರ ನಿರೀಕ್ಷೆಯ ರೇಂಜ್​ಗಿಲ್ಲ.

ಯಾವುದೇ ಸಿನಿಮಾ ಬಂದ್ರೂ ಜನ ಅದನ್ನ ಕೆಜಿಎಫ್​ಗೆ ಹೋಲಿಸಿ ನೋಡಲು ಮುಂದಾಗ್ತಿದ್ದಾರೆ. ಬಹುಶಃ ಅದೇ ಈಗ ಬಂದಿರೋ ಬಹುದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ತೆರೆಕಂಡ ಪ್ರಿನ್ಸ್​ ನಟನೆಯ ಸರ್ಕಾರು ವಾರಿ ಪಾಟ ಹಾಗೂ ಚಿರು ಅಭಿನಯದ ಆಚಾರ್ಯಗೆ ಬಹುದೊಡ್ಡ ಹೊಡೆತ ಬಿತ್ತು. ಇದು ನಿಜಕ್ಕೂ ಆರ್​ಜಿವಿ ಟ್ವೀಟ್​ನ ತಾತ್ಪರ್ಯ ಅಂದ್ರೆ ತಪ್ಪಾಗಲ್ಲ.

ನೀಲ್​ಗೆ ವೀರಪ್ಪನ್​ ಎಂದ ರಾಮ್ ಗೋಪಾಲ್ ವರ್ಮಾ :

ಅತಿ ಹೆಚ್ಚು ಸಕ್ಸಸ್ ಸಿನಿಮಾ ಕೊಟ್ಟು ಭಾರ​ತೀಯ ಚಿತ್ರರಂಗದಲ್ಲೆ ದೊಡ್ಡ ಹೆಸ್ರು ಮಾಡಿರೋ ಆರ್​ಜಿವಿ, ಇತ್ತೀಚೆಗೆ ಅವರಿವರ ಕಾಲು ಎಳಿಯೋದ್ರಲ್ಲೇ ಬ್ಯುಸಿ ಆಗಿದ್ದಾರೆ. ಇದೀಗ ವರ್ಮಾಗೆ ಕೆಜಿಎಫ್ ಗೆಲುವನ್ನು ಸಹಿಸೋಕೆ ಆಗ್ತಿಲ್ಲ. ಈ ಹಿಂದೆ ಕೆಜಿಎಫ್ ಚಿತ್ರದಿಂದ ಭಾರತೀಯ ಚಿತ್ರರಂಗಕ್ಕೆ ಕೋಟಿ ಕೋಟಿ ನಷ್ಟ ಆಗಿದೆ ಅಂತ ಆರೋಪಿಸಿದ್ದಲ್ದೆ, ನೀಲ್ ಚಿತ್ರರಂಗದ ವೀರಪ್ಪನ್​ ಎಂದಿದ್ರು. ಈಗ ಮತ್ತೊಮ್ಮೆ ಕೆಜಿಎಫ್ ಕರಾಳ ನೆರಳು ಸ್ಟಾರ್​ ನಿರ್ದೇಶಕರನ್ನು ಬರಿದು ಮಾಡ್ತಿದೆ ಅಂತಾ ಆರೋಪಿಸಿದ್ದಾರೆ.

ಕೆಜಿಎಫ್ ಸಿನಿಮಾ  ಟೆಕ್ನಿಕಲಿ ಹೊಸ ಟ್ರೆಂಡ್​ ಮಾಡಿರೋದಂತೂ ಸತ್ಯ.  ಪ್ರತಿಯೊಬ್ರೂ ನೀಲ್​ ತರಹ ಸಿನಿಮಾ ಮಾಡ್ಬೇಕು ಅಂದುಕೊಳ್ತಾರೆ. ಇದೀಗ ಎಲ್ಲಾ ಡೈರೆಕ್ಟರ್​ಗಳು  ನೀಲ್ ಪ್ಯಾಟ್ರನ್ ಆಫ್ ಮೇಕಿಂಗ್​ನ​ ಹಿಂದೆ ಬಿದ್ದಿದ್ದಾರೆ.  ಅದ್ರೆ ಈ ಸಾಹಸದಲ್ಲಿ ಬೇರೆ ಸಿನಿಮಾಗಳಿಗೂ ಕೋಟಿ ಕೋಟಿ ಹಣ ನಷ್ಟವಾಗತ್ತೆ ಅನ್ನೋದು ಆರ್​ಜಿವಿ ಆರೋಪ. ಎಲ್ಲವನ್ನೂ ನುಂಗಿ ಹಾಕೋ ದೊಡ್ಡ ಮರಳಿನಂತೆ ಕೆಜಿಎಫ್ 2 ಸಿನಿಮಾ ಕಾಣ್ತಿದೆ ಅಂತ ಟ್ವೀಟ್ ಮಾಡಿದ್ದಾರೆ.

ಜಬರ್ದಸ್ತ್​ ಸ್ಟೋರಿ, ಅದ್ಧೂರಿ ಕ್ಲೈಮ್ಯಾಕ್ಸ್​, ರಾಕಿ ವೈಲೆನ್ಸ್​, ಆರ್ಟ್​ ವರ್ಕ್​, ರಿಚ್​ ಮೇಕಿಂಗ್​, ಸಿನಿಮಾಟೋಗ್ರಫಿ, ಹೀಗೆ ಪ್ರತಿ ವಿಭಾಗದಲ್ಲೂ ಚಿಂದಿ ಉಡಾಯಿಸಿರೋ ಕೆಜಿಎಫ್-2 ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದೆ. ನೂರು ಇನ್ನೂರು ಕೋಟಿ ದೋಚೋ ಬಗ್ಗೆ ಯೋಚಿಸ್ತಿದ್ದ ಸಿನಿಮಾಗಳು ಕೆಜಿಎಫ್ ಸಿನಿಮಾದಿಂದ ಮತ್ತಷ್ಟು ಎಫರ್ಟ್​ ಹಾಕೋ ಬಗ್ಗೆ ಥಿಂಕ್ ಮಾಡ್ತಿವೆ. ಜನರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಒಟ್ಟಿನಲ್ಲಿ ಆರ್​ಜಿವಿ ಮಾಡಿರೋ ಟ್ವೀಟ್​ ಸದ್ಯ ಸಖತ್ ಸದ್ದು ಮಾಡ್ತಿದೆ.

ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES