Monday, December 23, 2024

ನಟಿ ರಮ್ಯಾ ಅವರದು ಉದ್ದಟತನದ ವರ್ತನೆ : ಆರ್. ಧ್ರುವನಾರಾಯಣ್

ಮೈಸೂರು : ಮಾಜಿ ಸಂಸದೆ ರಮ್ಯಾ ಅವರು ಅಶಿಸ್ತು, ಉದ್ದಟತನ ತೋರಿದ್ದಾರೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದ್ದಾರೆ.

ನಟಿ ರಮ್ಯಾ ಡಿಕೆಶಿ ಟ್ವಿಟರ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ನಗರಲ್ಲಿಂದು ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರ ವಿರುದ್ದ ಬಹಿರಂಗವಾಗಿ ಟ್ವಿಟ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ನಟಿ ರಮ್ಯಾರವರನ್ನ ಕರೆದು ವಿವರಣೆ ಕೇಳುತ್ತೇನೆ ಎಂದರು.

ಇನ್ನು ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳುತ್ತೇವೆ. ಮಹಮದ್ ನಲಪಾಡ್ ಆಗಲಿ, ನಾನಾಗಲಿ ಯಾರೇ ಪಕ್ಷದ ವಿರುದ್ದ ನಡೆದರೆ ಅದು ಅಶಿಸ್ತು ತೋರುವುದು ಎಂದು ಕಿಡಿಕಾರಿದರು.

ಅಷ್ಟೇಅಲ್ಲದೇ ಅವರು ಈ ಹಿಂದೆ ಪಕ್ಷದ ಸಂಸದರಾಗಿದ್ದವರು ಈ ರೀತಿ ಬಹಿರಂಗವಾಗಿ ಟ್ವಿಟ್ ಮಾಡಬಾರದಿತ್ತು. ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು, ರಾಜ್ಯ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತು. ಆದರೆ, ಪಕ್ಷದ ಚೌಕಟ್ಟನ್ನ ಮೀರಬಾರದಿತ್ತು ಎಂದು ಆರ್.ಧ್ರುವನಾರಾಯಣ್ ಹೇಳಿದರು.

RELATED ARTICLES

Related Articles

TRENDING ARTICLES