ಧಾರವಾಡ : ವಾರಣಾಸಿ ನ್ಯಾಯಾಲಯ ಆದೇಶ ಕೊಟ್ಟಿದ್ದು ಅತ್ಯಂತ ಸಮರ್ಪಕ ಇದೆ. ಕಳೆದ ಹತ್ತಾರು ವರ್ಷಗಳಿಂದ ಕಾಶಿ ವಿಶ್ವನಾಥ ಗೊಡೆ ಮೇಲೆ ಇರುವ ವಿಗ್ರಹಗಳಿಗೆ ಪೂಜೆ ಮಾಡುತ್ತ ಬಂದಿದ್ದರು ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಲಾಯಂ ಸಮಯದಲ್ಲಿ ಮುಸ್ಲಿಂ ಒಲೈಕೆಗಾಗಿ ಅದನ್ನ ತಡೆದಿದ್ರು ಅರ್ಚಕರು ಹಾಗೂ ಮಹಿಳೆಯರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ರು. ಕೋರ್ಟ್ ಅದನ್ನ ಸರ್ವೆ ಮಾಡಿ 17 ರ ಒಳಗೆ ವರದಿ ಕೊಡಬೇಕು ಎಂದಿದೆ. ಇದನ್ನು ಸ್ವಾಗತ ಮಾಡ್ತೆವೆ ಅಲ್ಲಿ ಸರ್ವೆ ಮಾಡಲು ಅಡ್ಡಿ ಮಾಡುವುದನ್ನ ನೋಡಿದರೆ ದಾದಾಗಿರಿ ಮಾಡುವಂತೆ ಕಾಣುತ್ತೆ ಇದು ಕಾಶಿ ದೇವಸ್ಥಾನ ಎಂದರು.
ಅದುವಲ್ಲದೇ, ಔರಂಗಜೇಬನ ಸಮಯದಲ್ಲಿ ಒಡೆದು ಮಸೀದಿ ಕಟ್ಡಿದ್ದರು. ಅಲ್ಲಿ ಬಸವಣ್ಣ ಇದ್ದಾನೆ, ಈಶ್ವರ ಲಿಂಗ ಅಲ್ಲಿ ಇತ್ತು ಎಂದು ಇದೇ ಸಾಕ್ಷಿ. ಜ್ಞಾನ ವ್ಯಾಪಿ ಮಸೀದಿ ಎಂದು ಇದೆ, ಈ ರೀತಿ ಹೆಸರು ಎಲ್ಲೂ ಸಿಗಲಿಕ್ಕಿಲ್ಲ. ಆ ಇಡಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಸತ್ಯ. ಕೊರ್ಟ್ ಸರ್ವೆ ಅವಕಾಶ ಸಿಕ್ಕಿದೆ,ಈಗ ತಡೆದರೆ ಒಡೆದು ಒಳಗೆ ಹೋಗಬೇಕು. ಪೊಲೀಸ್ ಇಲಾಖೆ ಸಹಕಾರ ತಗೊಬೇಕು ಎಂದಿದೆ. ಒಳಗೆ ಬಾಂಬ್ ಇವೆಯಾ, ಇತಿಹಾಸ ಒಪ್ಪಿಕೊಳ್ಳಬೇಕು. ಇದೇ ರೀತಿ ಮಾಡಿನೇ ರಾಮ ಮಂದಿರ ನಮ್ಮ ಕೈಗೆ ಬಂದಿದೆ ಅದೇ ಮಾದರಿಯಲ್ಲಿ ಈ ಮಸೀದಿ ಹಿಂದೂಗಳದ್ದೇ ನೀವು ಸ್ನೇಹದಿಂದ ಬಿಟ್ಟು ಕೊಟ್ಟರೆ ನಮ್ಮ ನಿಮ್ಮಲ್ಲಿ ಬಾಂಧವ್ಯ ಇರಲಿದೆ ಎಂದು ಹೇಳಿದರು.
ಇನ್ನೂ, ಸಾವಿರಾರು ದೇವಸ್ಥಾನ ಕೆಡವಿ ಮಸೀದಿ ಕಟ್ಟಲಾಗಿದೆ. 47 ರ ಮುಂಚೆ ದೇವಸ್ಥಾನ ಮಸೀದಿ ಇರಬೇಕು ಎಂದು ಇದೆ. ರಾಜೀವ್ ಗಾಂಧಿ ಇದನ್ನ ಮುಸ್ಲಿಂ ಒಲೈಕೆಗಾಗಿ ಮಾಡಿದ್ದು. ದೇವಸ್ಥಾನಗಳ ನಾಡು ಇದು, ಅದನ್ನ ನಾವು ವಾಪಸ್ ಪಡೆಯಬೇಕು ಎಂದರು.