Thursday, December 19, 2024

ಜರ್ನಲಿಸಂನಲ್ಲಿ ಟಗರು ಪುಟ್ಟಿ ಸ್ನಾತಕೋತ್ತರ ಪದವಿ

ಕರಾವಳಿಯ ಕೆಂಡಸಂಪಿಗೆ ಮಾನ್ವಿತಾ ಕಾಮತ್ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಡಬಲ್ ಡಿಗ್ರಿ ಮುಗಿಸೋ ಮೂಲಕ ನಾನು ನಟನೆಯಲ್ಲಷ್ಟೇ ಅಲ್ಲ, ಓದಿನಲ್ಲೂ ಬೆಸ್ಟ್ ಅಂತ ಪ್ರೂವ್ ಮಾಡಿದ್ದಾರೆ. ಇಷ್ಟಕ್ಕೂ ಟಗರು ಪುಟ್ಟಿಯ ಸ್ನಾತಕೋತ್ತರ ಪದವಿ ಯಾವ ವಿಷಯದಲ್ಲಿ..?

  • ಜರ್ನಲಿಸಂನಲ್ಲಿ ಟಗರು ಪುಟ್ಟಿ ಸ್ನಾತಕೋತ್ತರ ಪದವಿ
  • ಡಿಗ್ರಿ ನಂತ್ರ ಆರ್ಜೆ.. ಡಬಲ್ ಡಿಗ್ರಿ ಜೊತೆ ಅಭಿನಯ
  • ಕೆಂಡಸಂಪಿಗೆ, ಟಗರು ಖ್ಯಾತಿಯ ಕರಾವಳಿ ಚೆಲುವೆ
  • ರಿಲೀಸ್​ಗೆ ರೆಡಿ ಆಗಿವೆ ಮಾನ್ವಿತಾ ಮೂರು ಸಿನಿಮಾ

ಕರಾವಳಿಯ ಕಡಲ ಕಿನಾರೆಯಲ್ಲಿ ಹುಟ್ಟಿ ಬೆಳೆದ ಸ್ಯಾಂಡಲ್​ವುಡ್ ಗ್ಲಾಮರ್ ಡಾಲ್ ಮಾನ್ವಿತಾ ಕಾಮತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕೆಂಡಸಂಪಿಗೆ ಚಿತ್ರದಿಂದ ಬಣ್ಣದಲೋಕಕ್ಕೆ ಕಾಲಿಟ್ಟ ಈಕೆ ಸದ್ಯ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಸೂಪರ್ ಮಾಡೆಲ್ ಕೂಡ ಹೌದು.

ಕೆಂಡಸಂಪಿಗೆ ಸೂಪರ್ ಹಿಟ್ ಆದ ಬಳಿಕ ಎಲ್ಲರ ಮನೆ ಮಾತಾದ ಈ ಬ್ಯೂಟಿ, ಚೌಕ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ರು. ಕಾಶಿನಾಥ್ ಮಗಳಾಗಿ ಅಪ್ಪಾ ಐ ಲ್ ಯೂ ಪಾ ಅಂತ ತಮ್ಮ ಅಂದ ಚೆಂದದ ಜೊತೆ ತಂದೆ- ಮಗಳ ಬಾಂಧವ್ಯದ ಬಗ್ಗೆ ಬಲವಾದ ಸಂದೇಶ ನೀಡಿದ್ರು.

ಟಗರು ಸಿನಿಮಾದಿಂದ ಈಕೆಯ ಇಮೇಜ್ ಮತ್ತಷ್ಟು ದೊಡ್ಡದಾಯ್ತು. ಹೌದು.. ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಜೊತೆ ನಟಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ರು. ಬೋಲ್ಡ್ ಌಕ್ಟಿಂಗ್ ಸ್ಕಿಲ್ಸ್ ನೋಡಿ ಇಡೀ ಇಂಡಸ್ಟ್ರಿ ದಂಗಾಗಿದ್ದು ಸುಳ್ಳಲ್ಲ. ಅಷ್ಟರ ಮಟ್ಟಿಗೆ ಅಭಿನಯದಲ್ಲಿ ಭೇಷ್ ಅನಿಸಿಕೊಂಡ್ರು ಮಾನ್ವಿತಾ.

ವಸಿಷ್ಠ ಸಿಂಹ ಜೊತೆಗಿನ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾದ ಬಳಿಕ ಮಾನ್ವಿತಾರ ಮತ್ಯಾವ ಸಿನಿಮಾನೂ ರಿಲೀಸ್ ಆಗಲಿಲ್ಲ. ಕೊರೋನಾ ಕೂಡ ಅದಕ್ಕೆ ಕಾರಣ. ಆದ್ರೀಗ ಅವ್ರ ಮೂರು ಸಿನಿಮಾಗಳು ರಿಲೀಸ್​ಗೆ ಸಜ್ಜಾಗಿವೆ. ಯೆಸ್.. ಶಿವ 143 ಸಿನಿಮಾದಲ್ಲಿ ಮತ್ತೊಮ್ಮೆ ಸಖತ್ ಬೋಲ್ಡ್ ಅಂಡ್ ಗ್ಲಾಮರಸ್ ಆಗಿ ಕಾಣಸಿಗಲಿದ್ದಾರೆ ಮಾನ್ವಿತಾ.

ದೊಡ್ಮನೆಯ ಧೀರೇನ್ ಚೊಚ್ಚಲ ಚಿತ್ರದಲ್ಲಿ ಈಕೆ ಕಮಾಲ್ ಮಾಡಲಿದ್ದು, ಈಗಾಗ್ಲೇ ರಿಲೀಸ್ ಆಗಿರೋ ಹಾಟ್ ಸಾಂಗ್​ನಿಂದ ಪಡ್ಡೆ ಹುಡ್ಗರ ನಿದ್ದೆ ಕೆಡಿಸಿದ್ದಾರೆ. ಅಲ್ಲದೆ, ಕನ್ನಡ- ಮರಾಠಿ ದ್ವಿಭಾಷಾ ಸಿನಿಮಾ ರಾಜಸ್ತಾನ್ ಡೈರೀಸ್ ಕೂಡ ರಿಲೀಸ್​ಗೆ ಸಜ್ಜಾಗ್ತಿದೆ. ಹ್ಯಾಪಿಲಿ ಮ್ಯಾರೀಡ್ ಸಿನಿಮಾ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಒಂದರ ಹಿಂದೊಂದರಂತೆ ತೆರೆಗಪ್ಪಳಿಸಲಿವೆ.

ಇವೆಲ್ಲದರ ಜೊತೆ ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋದು ಮಾನ್ವಿತಾ ಡಬಲ್ ಡಿಗ್ರಿ ಮುಗಿಸಿ ಸರ್ಟಿಫಿಕೆಟ್ ಪಡೆದಿರೋದು. ಹೌದು.. ಜರ್ನಲಿಸಂನಲ್ಲಿ ಪದವಿಯನ್ನ ಮಂಗಳೂರಲ್ಲೇ ಪಡೆದ ಈಕೆ, ನಟನೆಗೆ ಬರೋಕೂ ಮುನ್ನ ರೇಡಿಯೋದಲ್ಲಿ ಆರ್ಜೆ ಆಗಿ ಕಾರ್ಯ ನಿರ್ವಹಿಸಿದ್ರು. ಇದೀಗ ನಟನೆ ಜೊತೆ ಜೊತೆಗೆ ಸ್ನಾತಕೋತ್ತರ ಪದವಿ ಮಾಡಿ ಮುಗಿಸಿದ್ದಾರೆ.

ಸಿಎಂಎಸ್ ಜೈನ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಮುಗಿಸಿ ಗೌನ್ ಸಮೇತ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ಮಾನ್ವಿತಾ. ಗೆಳತಿಯರೂ ಅದಕ್ಕೆ ಸಾಥ್ ನೀಡಿದ್ದು, ಫೋಟೋಸ್ ಸಖತ್ ವೈರಲ್ ಆಗ್ತಿವೆ. ಆಕೆಯ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸೋ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ. ಒಟ್ಟಾರೆ ಈ ಮೂಲಕ ತಾನು ನಟನೆಗೂ ಜೈ, ಓದಿನಲ್ಲೂ ಸೈ ಅನಿಸಿಕೊಂಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES