Monday, December 23, 2024

CID ತನಿಖೆಯಲ್ಲಿ ಕಿಂಗ್‌ಪಿನ್‌ ಮಂಜುನಾಥನ ಮಹಿಮೆ ಬಯಲು

ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಬಗೆದಷ್ಟೂ ಬಯಲಾಗ್ತಾನೆ ಇದೆ. ಅಕ್ರಮದ ಕಿಂಗ್‌ಪಿನ್ ಮಂಜುನಾಥನ ಮಹಿಮೆ ಕಂಡು ಸಿಐಡಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಮಂಜುನಾಥ್ ಮೇಳಕುಂದಿ ಶರಣಾಗುವುದಕ್ಕಿಂತ ಮೊದಲೇ ಆಳಂದ ತಾಲ್ಲೂಕಿನ ಅಮರ್ಜಾ ನದಿಯಲ್ಲಿ ಅಕ್ರಮಕ್ಕೆ ಬಳಿಸಿದ್ದ ಮೊಬೈಲ್, OMR ಕಾರ್ಬನ್ ಶೀಟ್ ಬಿಸಾಕಿರೋದಾಗಿ ಸಿಐಡಿ ಮುಂದೆ ಬಾಯಿಬಿಟ್ಟಿದ್ದಾನೆ. ರಾಜಕಾಲುವೆಗೆ ಕಳ್ ಮಂಜನನ್ನು ಕರೆದೊಯ್ದು ಸಿಐಡಿ ಅಧಿಕಾರಿಗಳು ಸ್ಥಳ ಮಹಜರ್ ನಡೆಸಿದ್ದಾರೆ. ಮಂಜುನಾಥ್ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ತಿಂಗಳಿನಿಂದ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಆತನ ವಿರುದ್ದ ಸಿಐಡಿ ಅರೆಸ್ಟ್ ವಾರೆಂಟ್ ಜಾರಿ ಮಾಡಿ ಹದಿನೇಳು ದಿನಗಳೆ ಕಳೆದಿದೆ.ಈ ಹಿನ್ನೆಲೆಯಲ್ಲಿ ಘೋಷಿತ ಆರೋಪಿ ಅಂತಾ ಘೋಷಿಸಲು ಕೋರ್ಟ್‌ಗೆ ಮನವಿ ಸಲ್ಲಿಸಲು ಸಿಐಡಿ ಮುಂದಾಗಿದೆ.

ಇನ್ನು ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣ ತನಿಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿಲ್ಲ.ಕೇವಲ ಕಲಬುರಗಿಗೆ ಮಾತ್ರ ಸಿಮೀತವಾಗಿ ತನಿಖೆ ನಡೆಯುತ್ತಿದೆ ಅಂತಾ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ಅಷ್ಟೆ ಅಲ್ಲದೆ ಅಕ್ರಮದಲ್ಲಿ ಭಾಗಿಯಾಗಿ ಅರೆಸ್ಟ್ ಆಗಿರುವ ಕಿಂಗ್ ಪಿನ್ ಆರ್ ಡಿ ಪಾಟೀಲ್ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನ ಬಹರಿಂಗ ಪಡೆಸ್ತೆನೆ ಅವರನ್ನ ತನಿಖೆ ಮಾಡುವ ದೈರ್ಯ ಇದೇನಾ ಅಂತಾ ಸರ್ಕಾರಕ್ಕೆ ಸವಾಲ್ ಹಾಕ್ತದ್ದಾನೆ. ಆರ್ ಡಿ ಪಾಟೀಲ್ ಹೇಳುವ ಹೆಸರು ಹೊರಬಂದ್ರೆ ಸರ್ಕಾರ ಬಿದ್ದು ಹೋಗುತ್ತೆ ಅನ್ನೋ ಭಯ ಕಾಡ್ತಿದೆಯಾ ಅಂತಾ ಪ್ರಶ್ನೆ ಮಾಡದ್ದಾರೆ. ಇಲ್ಲದೆ ಇನ್ನೂ ಘಟಾನು ಘಟಿ ಕಿಂಗ್ ಪಿನ್ ಗಳು ಅಂತಾ ಕರೆಯಿಸಿಕೊಳ್ಳವವರು ಬೆಂಗಳೂರಿನಲ್ಲೆ ಇದ್ದಾರೆ. ಬೆಂಗಳೂರಿನಲ್ಲಿರುವ ಮಹಾ ಕಿಂಗ್ ಪಿನ್ ಗಳು ಮತ್ತು ನೇಮಕಾತಿ ವಿಭಾಗ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಚಿವರ ಹೆಸರುಗಳನ್ನ ಕೇಳಿ ಬರ್ತಿದೆ ಅವರನ್ನ ಯಾರನ್ನಾದ್ರು ನೋಟಿಸ್ ಕೊಟ್ಟು ವಿಚಾರಣೆ ಗೆ ಕರೆದಿದ್ದಾರ ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಅದುವಲ್ಲದೇ, ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿ ಸಿಐಡಿ ಅಧಿಕಾರಿಗಳಿಂದ ಬಂಧಿತನಾಗಿರುವ ಕೆಎಸ್ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ನನ್ನ ಇಂದು ಸಿಐಡಿ ಅಧಿಕಾರಿಗಳು ಕಲಬುರಗಿ ಹೋರವಲಯದ ಊದನೂರ ರಸ್ತೆಗೆ ಕರೆದುಕೊಂಡು ಹೋಗಿ ಸ್ಪಾಟ್ ಮಹಜರ್ ಮಾಡಿದ್ದಾರೆ. ಊದನೂರ ರಸ್ತೆಯಲ್ಲಿ ಕಿಂಗ್ ಪಿನ್ ಆರ್ ಡಿ ಪಾಟೀಲ್ , ವೈಜನಾಥ್ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪ್ರತಿ ದಿನ ಅದೇ ಸ್ಥಳದಲ್ಲಿ ಮೀಟಿಂಗ್ ಮಾಡ್ತಿದ್ದರಂತೆ. ಹಾಗಾಗಿ ಉದನೂರು ರಸ್ತೆಗೆ ಕರೆದುಕೊಂಡು ಹೋಗಿ ಸ್ಪಾಟ್ ಮಹಜರ್ ಮುಗಿಸಿಕೊಂಡು ಬಳಿಕ ಅಕ್ಕಮಹಾದೇವಿ ನಗರದಲ್ಲಿರುವ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮನೆಗೂ ಕರೆದುಕೊಂಡು ಹೋಗಿ ಸ್ಪಾಟ್ ಮಹಜರ್ ನಡೆಸಿದ್ರು. ಇನ್ನೂ ಇವತ್ತಿಗೆ ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ವೈಜನಾಥ್ ನನ್ನ ಕೋರ್ಟ್ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಯಿತು. ಆದ್ರೆ ದುರಂತ ಅಂದ್ರೆ ಸೆಂಟ್ರಲ್ ಜೈಲ್ ನ ಜೈಲರ್ ಆಗಿರುವ ವೈಜನಾಥ್ ಪತ್ನಿ ಸುನಂದಾ ವೈಜನಾಥ್ ರೇವೂರ್ ಜೈಲಿನಲ್ಲಿ ಗಂಡನನ್ನ ಬರಮಾಡಿಕೊಂಡು ಕಂಬಿ ಹಿಂದೆ ಲಾಕ್ ಮಾಡಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕಿಂಗ್ ಪಿನ್ ಅಣ್ತಾಮ್ಮಸ್ ಜೋಡಿ ಅಂದರ್ ಆದ್ರೆ , ಮತ್ತೊಂದೆಡೆ ಗಂಡ ಹೆಂಡತಿ ಜೋಡಿ ಜೈಲು ಪಾಲಾಗಿದೆ. ಇದ್ರ ಮಧ್ಯದಲ್ಲಿ ಮತ್ತೊಂದೆಡೆ ಹೆಂಡತಿಯೆ ಗಂಡನನ್ನೆ ಜೈಲಿಗೆ ಬರಮಾಡಿಕೊಂಡಿದ್ದಾಳೆ. ಇನ್ನೋಂದೆಡೆ ಅಕ್ರಮ ಕಿಂಗ್ ಪಿನ್ ಅಣ್ಣ ಅಂದರ್ ಆಗಿದ್ದಾರೆ ತಮ್ಮ ಬಾಹರ್ ಆಗಿದ್ದಾರೆ. ಒಟ್ಟನಲ್ಲಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹಲವು ಕುಟುಂಬಗಳೆ ಭಾಗಿಯಾಗಿ ಕುಟುಂಬ ಸದಸ್ಯರ ಜೊತೆ ಇದೀಗ ಜೈಲಿನಲ್ಲಿ ಕಾಲ ಕಳೆಯೋದಕ್ಕೆ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES