Thursday, December 19, 2024

ಪುನೀತ್​ಗಾಗಿ ಬರೆದ ದಿನಕರ್ ಕಥೆ ವಿರಾಟ್ ಪಾಲು..?

ರಾಜಕುಮಾರ ಸಾರಥಿ ಸಂತೋಷ್, ರಾಜರತ್ನ ಅಪ್ಪುಗಾಗಿ ಮಾಡಿಕೊಂಡಿದ್ದ ಕಥೆ ಯುವರಾಜನ ಪಾಲಾಗಿದ್ದು ಗೊತ್ತೇಯಿದೆ. ಇದೀಗ ಮತ್ತೊಂದು ಅಪ್ಪು ಕಥೆ ಮತ್ತೊಬ್ಬ ಹೀರೋ ಮುಡಿಗೆ ಸೇರಿಕೊಳ್ತಿದೆ ಎನ್ನಲಾಗ್ತಿದೆ. ಈ ಕುರಿತ ಕನ್ಫ್ಯೂಶನ್ಸ್​ಗೆ ಕ್ಲ್ಯಾರಿಟಿ ಕೊಡ್ತಿದ್ದೀವಿ ಜಸ್ಟ್ ಹ್ಯಾವ್ ಎ ಲುಕ್.

  • ಪುನೀತ್​ಗಾಗಿ ಬರೆದ ದಿನಕರ್ ಕಥೆ ವಿರಾಟ್ ಪಾಲು..?
  • ಯುವ ರಾಜ್​ಕುಮಾರ್ ಸಿನಿಮಾ ಕೂಡ ಅಪ್ಪು ಅವ್ರದ್ದೇ
  • ದ್ವಿತ್ವ ಲುಕ್​ಟೆಸ್ಟ್ ಪೋಸ್ಟರ್, ಟೀಸರ್ ಇಲ್ಲ – ಪವನ್
  • ಸಮಾಜಕ್ಕೊಂದು ಸಂದೇಶ ನೀಡಿ ಹೋದ ರಾಜರತ್ನ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಕಾಲಿಕ ನಿಧನದಿಂದ ಸಾಕಷ್ಟು ಸಿನಿಮಾದ ಕನಸುಗಳು ಕನಸುಗಳಾಗಿಯೇ ಉಳಿದುಬಿಟ್ಟವು. ಜೇಮ್ಸ್​ ರಿಲೀಸ್​ಗಾಗಿ ನಿರ್ದೇಶಕ ಬಹದ್ದೂರ್ ಚೇತನ್ ಹಾಗೂ ಕಿಶೋರ್ ಪತ್ತಿಕೊಂಡ ಮಾಡಿದ ಸಾಹಸಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅಪ್ಪು ಅವ್ರ ಇಮೇಜ್​ನ ತಲೆಯಲ್ಲಿ ಇಟ್ಟಿಕೊಂಡು ಮಾಡಿದಂತಹ ಕಥೆಗಳು ಬೇರೆ ಹೀರೋಗಳಿಗೆ ಸರಿಹೊಂದುತ್ತವಾ ಅಥ್ವಾ ಇಲ್ವಾ ಅನ್ನೋದನ್ನ ನೋಡಿದ್ರೆ ಯಾವುದೇ ಕಾರಣಕ್ಕೂ ಮ್ಯಾಚ್ ಮಾಡೋಕೆ ಆಗಲ್ಲ. ಆದ್ರೆ ರಾಜಕುಮಾರ ಸಾರಥಿ ಸಂತೋಷ್ ಆನಂದ್​ರಾಮ್​, ಅಭಿಮಾನಿಗಳ ಒತ್ತಾಯದ ಮೇರೆಗೆ ಅಪ್ಪು ಕಥೆಯನ್ನ ಯುವರಾಜ್​ಗೆ ಮಾಡ್ತಿದ್ದಾರೆ.

ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ಯುವರಾಜ್ ಇಂಟ್ರಡ್ಯೂಸ್ ಆಗ್ತಿದ್ದು, ರೀಸೆಂಟ್ ಆಗಿ ಫೋಟೋಶೂಟ್ ಸ್ಟಿಲ್ಸ್ ಹಾಗೂ ಫಸ್ಟ್ ಲುಕ್​ನ ಲಾಂಚ್ ಮಾಡಲಾಗಿತ್ತು. ಇನ್ನು ದ್ವಿತ್ವ ಚಿತ್ರದ ಲುಕ್ ಟೆಸ್ಟ್ ಪೋಸ್ಟರ್ ಬರಲಿದೆ ಅನ್ನೋದೆಲ್ಲಾ ಸುಳ್ಳು, ನಾನದನ್ನ ಯಾರಿಗೂ ಮಾಡ್ತಿಲ್ಲ ಅನ್ನೋದನ್ನ ಲೂಸಿಯಾ ಪವನ್ ಕುಮಾರ್ ಸ್ಪಷ್ಟಪಡಿಸಿದ್ರು.

ಆದ್ರೀಗ ಜೊತೆ ಜೊತೆಯಲಿ, ಸಾರಥಿ, ನವಗ್ರಹ ಚಿತ್ರಗಳ ನಿರ್ದೇಶಕ ದಿನಕರ್ ತೂಗುದೀಪ್ ನಮ್ಮ ದೊಡ್ಮನೆಯ ಪುನೀತ್​ಗಾಗಿ ಕಳೆದ ವರ್ಷ ಒಂದು ಸಿನಿಮಾ ಅನೌನ್ಸ್ ಮಾಡಿದ್ರು. ಅಷ್ಟರಲ್ಲೇ ಅಪ್ಪು ಕಾಲವಾದ್ರು. ಇದೀಗ ದಿನಕರ್ ನಿರ್ದೇಶನದಲ್ಲಿ ಕಿಸ್ ಚಿತ್ರದ ಹೀರೋ ವಿರಾಟ್ ನಾಯಕನಟನಾಗಿ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಎಲ್ರೂ ಅದೇ ಅಪ್ಪು ಕಥೆ ವಿರಾಟ್​ಗೆ ಮಾಡಲಾಗ್ತಿದೆ ಅನ್ನೋ ಕನ್ಫ್ಯೂಶನ್​ನಲ್ಲಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಜಯಣ್ಣ- ಭೋಗಣ್ಣ ನಿರ್ಮಾಣದಲ್ಲಿ ಜಯಣ್ಣ ಫಿಲಂಸ್ ಬ್ಯಾನರ್​ನಡಿಯಲ್ಲೇ ದಿನಕರ್- ವಿರಾಟ್ ಹೊಸ ಸಿನಿಮಾ ಮೂಡಿ ಬರ್ತಿದೆ. ಅಪ್ಪು ಜೊತೆ ಸಿನಿಮಾ ಮಾಡೋಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಿದ್ದು ಇದೇ ಜಯಣ್ಣ. ಹಾಗಾಗಿ ಇದು ಪಕ್ಕಾ ಅಪ್ಪುಗಾಗಿ ತಯಾರಾದ ಕಥೆಯೇ ಎನ್ನಲಾಗ್ತಿದೆ. ಆದ್ರೆ ದಿನಕರ್ ಈ ಎಲ್ಲಾ ಅಂತೆ ಕಂತೆಗಳಿಗೆ ಫುಲ್​ಸ್ಟಾಪ್ ಇಟ್ಟಿದ್ದು, ಅದೇ ಬೇರೆ ಇದೇ ಬೇರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಪುನೀತ್ ರಾಜ್​ಕುಮಾರ್​ಗಾಗಿ ದಿನಕರ್ ಅವ್ರೇ ಸ್ವತಃ ಕಥೆ ಸಿದ್ಧ ಪಡಿಸಿದ್ರಂತೆ. ಆದ್ರೀಗ ಕಿಸ್ ಹೀರೋ ವಿರಾಟ್​ಗೆ ಮಾಡ್ತಿರೋ ಕಥೆ ರಘು ನಿಡುವಳ್ಳಿ ಬರೆದಿರೋದು ಎಂದಿದ್ದಾರೆ. ಒಟ್ಟಾರೆ ಅಪ್ಪುಗೆ ಅಪ್ಪುನೇ ಸಾಟಿ. ಅವ್ರ ಕಥೆ ಅವರಿಗಷ್ಟೇ ಅಂಕಿತ. ಅವ್ರೊಂದು ಬಣ್ಣಿಸಲಾಗದ ಭಾವತೀರದ ಲೋಕ. ಕರುನಾಡಿನ ಪಾಲಿಗೆ ಕನ್ನಡ ರತ್ನ. ಅಣ್ಣಾವ್ರ ನಂತರದ ದೇವತಾ ಮನುಷ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES