ಬೆಂಗಳೂರು: ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯ ದಿನಾಂಕ ನಿಗಧಿಯಾಗಿದ್ದೇ ತಡ, ಇತ್ತ ಬಿಜೆಪಿ ಪುಲ್ ಅಕ್ಟಿವ್ ಆಗಿದೆ. ಅಭ್ಯರ್ಥಿಗಳ ಅಯ್ಕೆ ಕಸರತ್ತು ನಡೆಸುತ್ತಿರೋ ಬಿಜೆಪಿ ತಯಾರಿಗೋಸ್ಕರ ನಾಳೆ ಮಹತ್ವದ ಕೋರ್ ಕಮಿಟಿ ಸಭೆ ಕರೆದಿದೆ.ಈ ಹಿನ್ನಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದಾರೆ.
ನಾಳೆ ಮಧ್ಯಾಹ್ನ 12 ಘಂಟೆಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಪ್ರಮುಖವಾಗಿ ಇತ್ತೀಜಿನ ರಾಜಕೀಯ ವಿಷಯಗಳು ಚರ್ಚೆಗೆ ಬರಲಿದ್ದು, ಅದರಲ್ಲೂ ರಾಜ್ಯಸಭಾ ಹಾಗೂ ಪರಿಷತ್ ಚುನಾವಣೆಗೆ ಯಾವ ರೀತಿ ತಯಾರಾಗಬೇಕು ಜೊತೆಗೆ ಅಭ್ಯರ್ಥಿಗಳ ಅಯ್ಕೆ ಯಾವ ರೀತಿ ಎಂಬುದರ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.
ಜೂನ್ 7 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಪಟ್ಟಿಯನ್ನ ಸಹ ಇದೇ ವೇಳೆ ಸಿದ್ಧಪಡಿಸಲಾಗುತ್ತೆ ಎನ್ನಲಾಗಿದೆ.ಇದಲ್ಲದೆ ರಾಜ್ಯಸಭಾ ಚುನಾವಣೆಗೆ ಹೈಕಮಾಂಡ್ ನಾಯಕರ ತೀರ್ಮಾನವೇ ಅಂತಿಮ. ಹೀಗಾಗಿ ಅವರು ಅಂತಿಮಗೊಳಿಸುವ ಅಭ್ಯರ್ಥಿಗಳನ್ನು ಇಲ್ಲಿಂದ ಯಾವುದೇ ತೊಂದರೆ, ಗೊಂದಲಗಳು ಇಲ್ಲದೇ ಆಯ್ಕೆ ಮಾಡಿ ಕಳುಹಿಸುವುದರ ಬಗ್ಗೆ ಕಮಿಟಿಯ ಗಮನಕ್ಕೆ ಅರುಣ್ ಸಿಂಗ್ ತರಲಿದ್ದು ಅದರಂತೆ ಅಭ್ಯರ್ಥಿಗಳ ಅಯ್ಕೆಗೆ ಸಹಮತ ವ್ಯಕ್ತಪಡಿಸಿ ಕಳಿಸಿಕೊಡಲು ತೀರ್ಮಾನ ಮಾಡಲಾಗುತ್ತೆ.