Friday, November 22, 2024

ದೇಗುಲ ಒಡೆದು ಮಸೀದಿ ನಿರ್ಮಾಣ : ಪ್ರಮೋದ್​ ಮುತಾಲಿಕ್

ಬಾಗಲಕೋಟೆ :ಜ್ಞಾನವ್ಯಾಪಿ ಎಂಬ ಹೆಸರು ಜಗತ್ತಿನಲ್ಲಿ ಯಾವುದೇ ಮಸೀದಿಗೆ ಇಲ್ಲ ಎಂದು ಬಾದಾಮಿಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಜ್ಞಾನವ್ಯಾಪಿ ಮಸೀದಿಯೊಳಗೆ ಚಿತ್ರೀಕರಣಕ್ಕೆ ಕೋರ್ಟ್​ ಇಂದು ತೀಪು೯ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾರಣಾಸಿ ಕೋರ್ಟ್ ಇಂದು ತೀರ್ಪುನೀಡಿದ್ದು, ಮೇ 17 ರೊಳಗೆ ಮರು ಸರ್ವೇ ಮಾಡುವಂತೆ ಆದೇಶ ನೀಡಿದೆ ಎಂದರು.

ದೇಶದಲ್ಲಿ ಲಕ್ಷಾಂತರ ದೇಗುಲ ಒಡೆದು ಮಸೀದಿ ಕಟ್ಟಿರುವುದಕ್ಕೆ ಇತಿಹಾಸ ಇದೆ. ಮೊಘಲರ, ಮುಸ್ಲಿಮರ, ಸುಲ್ತಾನರ ದಾಳಿ ಸಂದಭ೯ದಲ್ಲಿ ಹಿಂದೂ ದೇಗುಲಗಳನ್ನು ಒಡೆದು ಮಸೀದಿ ಕಟ್ಟಲಾಗಿದೆ. ಆದರೆ, ದೇಗುಲ ಒಳಗಡೆ ಭಂಡಾರ ಇದೆ ಆದರೆ ಮುಸಲ್ಮಾನರು ಚಿನ್ನಾಭರಣ ಇದೆ ಅಂತ ಸುಳ್ಳು ಹೇಳುತ್ತಿದ್ದಾರೆ. ಒಂದೊಮ್ಮೆ ಚಿನ್ನ ಬೆಳ್ಳಿ ಇದ್ದರೆ ಅಲ್ಲಿ ಮಸೀದಿ ಯಾಕೆ ಕಟ್ಟುತ್ತಿದ್ದರು ಎಂದು ಪ್ರಶ್ನೆಮಾಡಿದ್ದಾರೆ.

ಇನ್ನು ಬಾದಾಮಿಯಲ್ಲಿಯೂ ಸಹ ಮಸೀದಿ ಕೆಳಗಡೆ ದೇಗುಲ ಇದೆ ಅನ್ನೋದಕ್ಕೆ ಆಧಾರ ಇದೆ. ರಾಜ್ಯದ ವಿವಿಧೆಡೆ ದಗಾ೯ದ ಒಳಗಡೆ ದೇವಸ್ಥಾನ ಸಿಕ್ಕಿವೆ. ಶೇಕಡಾ 90 ರಷ್ಟು ದೇಗುಲ ಒಡೆದು ಎಲ್ಲಿ ಮಸೀದಿ ಕಟ್ಟಿದ್ದಾರೆ. ಜ್ಞಾನವ್ಯಾಪಿಯಲ್ಲಿ ಮಸೀದಿ ಎದುರು ಬಸವಣ್ಣನ ವಿಗ್ರಹ ಇದೆ. ಮಸೀದಿ ಎದುರು ಬಸವಣ್ಣನ ವಿಗ್ರಹ ಇರಲು ಸಾಧ್ಯವಿಲ್ಲ. ಇದಕ್ಕೆ ವಿಡಿಯೋ ಮಾಡಲು ಬಿಡ್ತಿಲ್ಲ ಅಂದ್ರೆ ಒಳಗಡೆ ಏನೋ ಇದೆ ಎಂಬುದು ಅರ್ಥವಾಗುತ್ತದೆ. ಏನೂ ಇಲ್ಲ ಎಂದಾದರೆ ಪ್ರತಿಭಟನೆ ಯಾಕೆ ಮಾಡ್ತೀರಿ ( ? ) ಇದಕ್ಕೆ ಪ್ರತಿಭಟನೆ ಮಾಡೋರಿಗೆ ಗುಂಡು ಹಾರಿಸಿ ಎಂದು ಕಿಡಿಕಾರಿದರು.

ಅಷ್ಟೇ ಅಲ್ಲದೇ ಕಾಶಿ ವಿಶ್ವನಾಥ ದೇಗುಲದ ಜ್ಞಾನವ್ಯಾಪಿ ಮಸೀದಿಯಲ್ಲಿ ಸಾಕಷ್ಟು ರೂಮ್, ಮೂತಿ೯ಗಳಿದ್ದಾವೆ ಅಂತಿದ್ದಾರೆ. ಕೋರ್ಟ್​ ಆದೇಶ ಬರೋದಿದೆ, ಜೊತೆಗೆ ನ್ಯಾಯಾಲಯವು ಸಹ ವಿಡಿಯೋ ಮಾಡಲು ಅವಕಾಶ ಕೊಡಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES