Monday, December 23, 2024

ಪವರ್ TVಯಲ್ಲಿ ಜಾಕಿ ಭಾವನಾ ಕಲರ್​ಫುಲ್ ಕನ್ನಡ

ಕೇರಳಾ ಕುಟ್ಟಿ ಜಾಕಿ ಭಾವನಾ ಸದ್ಯ ಕರುನಾಡ ಸೊಸೆ ಅನ್ನೋದೇ ಎಷ್ಟೋ ಮಂದಿಗೆ ಗೊತ್ತಿಲ್ಲ. ಇತ್ತೀಚೆಗೆ ನಮ್ಮ ಸ್ಯಾಂಡಲ್​ವುಡ್​ನಲ್ಲೇ ಬ್ಯುಸಿ ಆಗಿರೋ ಈ ಚೆಂದುಳ್ಳಿ ಚೆಲುವೆ ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಕನ್ನಡಿಗರ ಪ್ರೀತಿ, ದೊಡ್ಮನೆಯ ಅಪ್ಪು- ಶಿವಣ್ಣ ಬಗ್ಗೆ ಹೆಮ್ಮೆಯ ಮಾತುಗಳಾಡಿದ್ದಾರೆ.

  • ಪವರ್ TVಯಲ್ಲಿ ಜಾಕಿ ಭಾವನಾ ಕಲರ್​ಫುಲ್ ಕನ್ನಡ
  • ಅಪ್ಪು- ಶಿವಣ್ಣ ಬಗ್ಗೆ ಕರುನಾಡ ಸೊಸೆ ಹೇಳೋದೇನು..?
  • ‘ಪಿಂಕ್​ ನೋಟ್​’ಗಾಗಿ ಟ್ರೆಡಿಷನಲ್ ಲುಕ್​ನಲ್ಲಿ ಮಿಂಚು
  • ಅರ್ಧ ದಶಕದ ನಂತ್ರ ಮತ್ತೆ ಮಲಯಾಳಂನತ್ತ ಮುಖ

ಭಾವನಾ ಅಂದಾಕ್ಷಣ ಚಂದ್ರಮುಖಿ ಪ್ರಾಣಸಖಿ ಭಾವನಾ ನೆನಪಾಗ್ತಾರೆ, ಭಾವನಾ ಮೆನನ್ ನೆನಪಾಗ್ತಾರೆ. ಇವರಲ್ಲದೆ ಗಾಳಿಪಟ ಭಾವನಾನ ಅಂತ ಕನ್ಫ್ಯೂಸ್ ಕೂಡ ಆಗ್ತಾರೆ. ಅದೇ ಜಾಕಿ ಭಾವನಾ ಅಂದ್ಬಿಟ್ರೆ ಕೇಳೋರ ಮೈಂಡ್​ಗೆ ಮುದ್ದಾದ ಬೆಡಗಿಯ ಚಿತ್ರಣ ಸಿಕ್ಕಿಬಿಡುತ್ತೆ. ಯೆಸ್.. ಜಾಕಿ ಭಾವನಾ ಕೇರಳಾ ಮೂಲದ ಕುಟ್ಟಿ ಆದ್ರೂ, ನಮ್ಮ ಕರುನಾಡಿನ ಸೊಸೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತೇಯಿಲ್ಲ.

ನಿರ್ಮಾಪಕ ನವೀನ್​ರನ್ನ ಕೈಹಿಡಿದಿರೋ ಈ ಚೆಂದುಳ್ಳಿ ಚೆಲುವೆಯ ಅಂದ ಚೆಂದದಷ್ಟೇ ನಟನೆಯೂ ಬೊಂಬಾಟ್. ಮದ್ವೆ ನಂತ್ರ ಬಹುತೇಕ ಕನ್ನಡ ಸಿನಿಮಾಗಳನ್ನೇ ಮಾಡ್ತಿರೋ ಈ ಬಹುಭಾಷಾ ಬ್ಯೂಟಿ, ಸದ್ಯ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದೇ ಪಿಂಕ್​ ನೋಟ್. ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಟ್ವಿನ್ ಕ್ಯಾರೆಕ್ಟರ್​ನಲ್ಲಿ ಕಾಣಸಿಗಲಿದ್ದಾರಂತೆ ಭಾವನಾ.

ಇನ್ನು ಸಿನಿಮಾದ ಜೊತೆ ಕನ್ನಡ, ಕರುನಾಡು, ಇಲ್ಲಿನ ಜನ ತೋರಿಸಿರೋ ಪ್ರೀತಿಯ ಬಗ್ಗೆ ಜಾಕಿ ಭಾವನಾ ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ದೊಡ್ಮನೆಯ ಪುನೀತ್ ರಾಜ್​ಕುಮಾರ್ ಹಾಗೂ ಶಿವರಾಜ್​ಕುಮಾರ್ ಬಗ್ಗೆಯೂ ಮುಕ್ತವಾಗಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ ಕ್ಯೂಟಿ ಭಾವನಾ.

ವಿಶೇಷ ಅಂದ್ರೆ ಸುಮಾರು ಐದು ವರ್ಷದಿಂದ ಬರೀ ಕನ್ನಡ ಸಿನಿಮಾಗಳಲ್ಲೇ ನಟಿಸ್ತಿದ್ದ ಈಕೆ, ಇದೀಗ ದೊಡ್ಡದೊಂದು ಗ್ಯಾಪ್​ನ ನಂತ್ರ ಮತ್ತೆ ಮಲಯಾಳಂನತ್ತ ಮುಖ ಮಾಡ್ತಿದ್ದಾರೆ. ಪಿಂಕ್​ನೋಟ್ ಚಿತ್ರದ ಜೊತೆಗೆ ಮಲಯಾಳಂ ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರಂತೆ. ಅಲ್ಲಿಗೆ ಗಂಡನ ಮನೆ ಜೊತೆ ತವರು ಮನೆ ಕೂಡ ಮುಖ್ಯ ಅನ್ನೋದನ್ನ ಈ ಮೂಲಕ ಹೇಳತೊಡಗಿದ್ದಾರೆ ಈ ಗ್ಲಾಮರ್ ಡಾಲ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES