Monday, May 20, 2024

ಚನ್ನಪಟ್ಟಣದಲ್ಲಿ ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಳ್ಬೇಡಿ..! : ಡಿಕೆಶಿ

ಬೆಂಗಳೂರು : ಯಾರು ಏನಾದರೂ ಮಾಡಲಿ,ಜನ ನಮ್ಮ ಕಡೆ ಇದ್ದಾರೆ. ಅಧಿಕಾರ ಕೊಡದಿದ್ದರೂ ನಮ್ಮ‌ ಪ್ರೀತಿ ಅವರ ಇರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ನಮ್ಮವರು ಬೇರೆ ಪಕ್ಷಕ್ಕೆ ಸೇರಿದ್ದಾರೆ. ನಾವು ಕೆಲವರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ರಾಮನಗರದಲ್ಲಿ ಕಾಂಗ್ರೆಸ್ ಬಲಗೊಳಿಸಬೇಕು. ಅಲ್ಪಸಂಖ್ಯಾತರು, ದಲಿತರು ಹೆಚ್ಚಿದ್ದಾರೆ. ಹೀಗಾಗಿ ಪ್ರತಿ ಕ್ಷೇತ್ರದತ್ತ ಗಮನಹರಿಸಿ, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ ಎಂದರು.

ಇನ್ನು ಪಕ್ಷದ ಸದಸ್ಯತ್ವವನ್ನ ಹೆಚ್ಚು ಮಾಡಲಿದ್ದೇವೆ. ಪಕ್ಷಕ್ಕೆ ಬರುವವರು ಬಹಳ ಜನ ಅರ್ಜಿ ಹಾಕಿದ್ದಾರೆ. ಅರ್ಜಿಗಳು‌ ಬಹಳಷ್ಟು ಪೆಂಡಿಂಗ್ ಇದೆ. ಎಲ್ಲರನ್ನು ನೋಡಿಕೊಂಡು ಸೇರಿಸಿಕೊಳ್ತಿದ್ದೇವೆ ಮತ್ತು ಚನ್ನಪಟ್ಟಣದಲ್ಲಿ ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಳ್ಬೇಡಿ, ಅಲ್ಲಿನ ಜನ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಅಲ್ಲದೇ ಈಗ ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ, ಜನ ಬದಲಾವಣೆಯನ್ನ ಬಯಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ,ಜೆಡಿಎಸ್ ಮುಖಂಡರು, ಹಾಗೂ ಜಿಲ್ಲೆಯ ಹಲವರು  ನನ್ನ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಅವರೆನ್ನೆಲ್ಲಾ ಚನ್ನಪಟ್ಟಣದಲ್ಲಿ ಸೇರಿಸಿಕೊಳ್ಳುತ್ತೇವೆ. ಇನ್ನು ಜನತಾ ಸರ್ಕಾರವನ್ನ ನಾವು ನೋಡಿದ್ದೇವೆ, ಬಿಜೆಪಿ ಸರ್ಕಾರದ ಆಡಳಿತವನ್ನ ನೋಡಿದ್ದೇವೆ, ಹೀಗಾಗಿ ನಾವು ಒಂದು ಸರ್ವೆ ಮಾಡಿಸಿದ್ದೇವೆ. ಸರ್ವೆಯಲ್ಲಿ ಕಾಂಗ್ರೆಸ್ ಪರವಾದ ಒಲವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ನಾವು ಏನು ಹೇಳಲ್ಲ. ಅವರು ಕೋಮು ಸಂಘರ್ಷದ ಮೂಲಕ ಬರ್ತಿದ್ದಾರೆ ಎಂದರು.

ಯಾರು ಏನಾದರೂ ಮಾಡಲಿ,ಜನ ನಮ್ಮ ಕಡೆ ಇದ್ದಾರೆ. ಅಧಿಕಾರ ಕೊಡದಿದ್ದರೂ ನಮ್ಮ‌ ಪ್ರೀತಿ ಇರಲಿದೆ. ಬಿಜೆಪಿಯ ಹಲವು ನಾಯಕರು ಮಾತನಾಡಿದ್ದಾರೆ, ಅಣ್ಣಾ ಸ್ವಲ್ಪ ದಿನ ಇರಿ ಅಂತಿದ್ದಾರೆ. ಹೀಗಾಗಿ ಪ್ರತಿ ಮನೆಮನೆಗೆ ಭೇಟಿ ಮಾಡಿ ಪ್ರತಿಯೊಬ್ಬ ಜನರನ್ನ ತಲುಪುವ ಕೆಲಸ ಮಾಡಿ ಎಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ನಾವಂತೂ ಚುನಾವಣೆಗೆ ರೆಡಿಯಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES