ಕಲಬುರಗಿ : 545 ಪಿಎಸ್‌ಐ ನೇಮಕಾತಿ ಅಕ್ರಮದ ಜಾಲ ಬಗೆದಷ್ಟೂ ಬಯಲಾಗ್ತಾನೆ ಇದೆ.ಕಿಂಗ್‌ಪಿನ್‌ಗಳು ಸಾಕ್ಷ್ಯನಾಶಪಡಿಸಲು ಮೊಬೈಲ್ ಫೋನ್‌ಗಳನ್ನೇ ಡ್ಯಾಮೇಜ್ ಮಾಡಿ ಡ್ಯಾಂಗಳಲ್ಲಿ ಎಸೆದಿದ್ದಾರೆ. ಆದ್ರೂ ಕಳ್ಳರು ಚಾಪೆ ಕೆಳಗೆ ನುಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಸುಳ್ತಾರೆ ಎಂಬಂತೆ ಸಿಐಡಿ ತಂಡ ಪರೀಕ್ಷೆ ಅಕ್ರಮವನ್ನು ಬೇಧಿಸ್ತಿದ್ದಾರೆ. ಈ ಮಧ್ಯೆ ತಿಂಗಳಿನಿಂದ ತಲೆಮರೆಸಿಕೊಂಡಿರೋ ಶಾಂತಿಬಾಯಿಗಾಗಿ ತಲಾಶ್ ನಡೆಸ್ತಿದಾರೆ.
ಪ್ರಾಮಾಣಿಕವಾಗಿ ಪಿಎಸ್‌ಐ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳ ಜೊತೆ ಚೆಲ್ಲಾಟ ಆಡಿರೋ ಕಿಂಗ್ ಪಿನ್‌ಗಳು ಮೊಬೈಲ್‌ಗಳನ್ನೇ ಒಡೆದು, ಡ್ಯಾಂನಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದಾರೆ. ಆದ್ರೂ ಅಕ್ರಮದ ಜಾಡು ಹಿಡಿದ ಸಿಐಡಿ ತಂಡ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಅವಿತಿದ್ದ ದಿವ್ಯಾ ಹಾಗರಗಿ ಸಿಐಡಿ ಎಂಟ್ರಿ ಕೊಡ್ತಿದ್ದಂತೆ ತನ್ನ ಮೊಬೈಲ್ ಒಡೆದು ನಾಶ ಪಡಿಸಿದ್ದಾಳೆ. ಅಷ್ಟಾದ್ರೂ ಹಾಗರಗಿ ಅಕ್ರಮಕ್ಕೆ ಬಳಸಿದ್ದ ಮತ್ತೊಂದು ಮೊಬೈಲ್ ಪತ್ತೆ ಹಚ್ಚುವಲ್ಲಿ CID ಯಶಸ್ವಿಯಾಗಿದ್ದು, ಅಕ್ರಮದ ಕುರಿತ ಮಹತ್ವದ ಮಾಹಿತಿ ಕಲೆ ಹಾಕಿದೆ.
ಇನ್ನು ಬಹುತೇಕ ಆರೋಪಿಗಳು ಸಿಐಡಿ ಬಲೆಗೆ ಬಿದ್ರೂ ಈವರೆಗೆ ಆರ್‌ಡಿ ಪಾಟೀಲ್ ಸಹಾಯದಿಂದ ಪಿಎಸ್‌ಐ ಪರೀಕ್ಷೆ ಪಾಸಾಗಿರೋ ಶಾಂತಿಬಾಯಿ ಮಾತ್ರ ಸಿಐಡಿ ಬಲೆಗೆ ಬಿದ್ದಿಲ್ಲ.. ಈಗಾಗಲೇ ಸಿಐಡಿ ಟೀಂ ರಾಜ್ಯವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧೆಡೆ ತಲಾಶ್ ನಡೆಸ್ತಿದಾರೆ.. ಆದರೂ, ಶಾಂತಿಬಾಯಿಯ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.. ಹೀಗಾಗಿ ಶಾಂತಿಬಾಯಿ ಬಂಧನ ವಿಚಾರ ಸಿಐಡಿಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನು ಪರೀಕ್ಷೆ ಅಕ್ರಮದಡಿ 7 ದಿನ ಸಿಐಡಿ ಕಸ್ಟಡಿಯಲ್ಲಿದ್ದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರಿಯನ್ನು ಸಿಐಡಿ ತಂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಒಟ್ನಲ್ಲಿ ಪರೀಕ್ಷೆ ಅಕ್ರಮ ಜಾಲಾಡ್ತಿರೋ ಸಿಐಡಿ ತಂಡಕ್ಕೆ ಅಕ್ರಮದ ಹೊಸ ಮಾರ್ಗಗಗಳು ಪತ್ತೆಯಾಗುತ್ತಿವೆ. ಏನೇ ಆದ್ರೂ ಸರ್ಕಾರ ನೊಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕಿದೆ.