ಮಂಡ್ಯ: ಮದುವೆ ಧಾರೆ ಮುಗಿಸಿ ಮದು ಮಗಳು ಬಿ ಕಾಂ ಪರೀಕ್ಷೆಗೆ ಹಾಜರಾದ ಅಪರೂಪದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಎಸ್.ಟಿ.ಜಿ.ಕಾಲೇಜಿನಲ್ಲಿ ಗುರುವಾರ ನಡೆದಿದೆ.
ಐಶ್ವರ್ಯ ಪ್ರಥಮ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದು. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದವರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ. ಮದುವೇ ದಿನವೇ ಪ್ರಥಮ ವರ್ಷದ ಪದವಿ ಪರೀಕ್ಷೆ ನಿಗದಿಯಾಗಿದ್ದರಿಂದ ತಾಳಿ ಕಟ್ಟಿಧಾರೆಯೆರೆದ ತಕ್ಷಣ ಕಲ್ಯಾಣ ಮಂಟದಿಂದ ವಿದ್ಯಾರ್ಥಿನಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ.
ವಿಳಂಬವಾಗಿ ಹಾಜರಾಗುತ್ತಿರುವುದಕ್ಕೆ ಪರೀಕ್ಷೆಗೆ ಅವಕಾಶ ನೀಡುತ್ತಾರೋ ಇಲ್ಲವೋ ಎಂಬ ಅನುಮಾನದಿಂದಲೇ ಬಂದ ವಿದ್ಯಾರ್ಥಿನಿಗೆ ಕಾಲೇಜು ಆಡಳಿತ ಮಂಡಳಿದವರು ಮತ್ತು ಪೋಷಕರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದರಿಂದ ವಿದ್ಯಾಭ್ಯಾಸವು ಮುಖ್ಯ, ದಾಂಪತ್ಯ ಜೀವನವೂ ಮುಖ್ಯ ಎಂದು ಸಾಬೀತುಪಡಿಸುವ ಮೂಲಕ ಮಂಡ್ಯದ ವಿದ್ಯಾರ್ಥಿನಿ ಮಾದರಿಯಾಗಿದ್ದಾರೆ.