Thursday, January 23, 2025

ಗೃಹ ಸಚಿವರ ತವರಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ

ಶಿವಮೊಗ್ಗ : ಗೃಹ ಸಚಿವರ ಸ್ವಂತ ಗ್ರಾಮದಲ್ಲಿ ಇಡೀ ರಾಜ್ಯವೇ ತಲೆತಗ್ಗಿಸುವ ಘಟನೆ ನಡೆದಿದೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ. ದಲಿತ ದಂಪತಿಯನ್ನು ಥಳಿಸಿದ್ದಲ್ಲದೇ, ಪತ್ನಿಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರಂತೆ ಈ ದುಷ್ಕರ್ಮಿಗಳು.! ಸಂತ್ರಸ್ಥ ದಲಿತ ಮಹಿಳೆ, ಶಿವಮೊಗ್ಗದ ಪೊಲೀಸರಿಗೆ ನೀಡಿರುವ ದೂರು ಓದಿದರೆ ಸಾಕು, ಎಂಥವರ ಕಣ್ಣಾಲೆಗಳು ಒದ್ದೆಯಾಗುವಿದರಲ್ಲಿ ಅನುಮಾನವೇ ಇಲ್ಲ.

ಗೃಹ ಸಚಿವ ಆರಗ ಜ್ಞಾನೇಂದ್ರರವರ ತವರು ಕ್ಷೇತ್ರದಲ್ಲಿ, ಕಳ್ಳತನ ದರೋಡೆ ಪ್ರಕರಣಗಳು ನಡೆದ ಬೆನ್ನಲ್ಲೇ ಈಗ ದುಷ್ಕರ್ಮಿಗಳು ಅತ್ಯಾಚಾರ ಮಾಡುವ ಯತ್ನಕ್ಕೂ ಕೈ ಹಾಕಿದ್ದಾರೆ. ಇದನ್ನು ನೋಡುತ್ತಿದ್ದರೇ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ ಎಂಬ ಪ್ರಶ್ನೆ ( ? ) ಎದುರಾಗಿದೆ. ಸಂಜೆ ಹೊತ್ತು ಇಲ್ಲವೇ ರಾತ್ರಿ ಹೊತ್ತು ದಂಪತಿ ಬರುವ ಹೊತ್ತಿನಲ್ಲಿ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅದರಲ್ಲೂ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರವಾಗಿರುವ ಆರಗ ಗ್ರಾಮದಲ್ಲಿ ದೇವೆಂದ್ರ ಮತ್ತು ಆತನ ಸುಷ್ಮಾ ದಂಪತಿ ಬಸ್ ಇಳಿದು, ಮನೆ ಕಡೆಗೆ ತೆರಳುವ ವೇಳೆ, ಏಕಾಏಕಿ ದೇವರಗುಡಿ ನಿವಾಸಿಗಳಾದ ಸಂಪತ್, ಆದರ್ಶ ಹಾಗೂ ಪರಿಚಯವಿಲ್ಲದ ಇಬ್ಬರು, ದಂಪತಿಯನ್ನು ಅಡ್ಡಗಟ್ಟಿ ದೇವೆಂದ್ರ್​​ಗೆ ಮುಖ, ಸೊಂಟ, ಕಾಲುಗಳಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯನ್ನು ಬಿಡಿಸಲು ಹೋದ ಪತ್ನಿ ಸುಷ್ಮಾಳನ್ನು ಕೈ ಹಿಡಿದು ಎಳೆದು ನಾಲ್ಕು ಜನರು ಸೇರಿ ಪಕ್ಕದ ಪಕ್ಕದ ರಬ್ಬರ್ ಪ್ಲಾಂಟೇಷನ್​ಗೆ ಎಳೆದುಕೊಂಡು ಹೋಗಿದ್ದು, ಉಡುಪನ್ನು ಬಲವಂತವಾಗಿ ಕಿತ್ತುಹಾಕಿ ಬೆತ್ತಲೆಗೊಳಿಸಿದ್ದಾರೆ‌. ಈ ವೇಳೆ, ಸಂಪತ್ ಹಾಗೂ ಆದರ್ಶ ಮತ್ತಿಬ್ಬರು, ಸುಷ್ಮಾಳಿಗೆ ಅಸಭ್ಯವಾಗಿ ಸ್ಪರ್ಷಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿದ್ದ ದೇವೆಂದ್ರ ಕೂಗಿಕೊಂಡಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಇನ್ನು ಆರೋಪಿಗಳೆನ್ನಲಾದ ಸಂಪತ್ ಮತ್ತು ಆದರ್ಶ ಎಂಬುವವರು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪತ್ತೆಯಾಗಿದ್ದು, ತೀರ್ಥಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES