Wednesday, January 22, 2025

ಸರ್ಕಾರದ ಸೂಚನೆಗೆ ಬಗ್ಗಿದ ಶುಗರ್ ಫ್ಯಾಕ್ಟರಿ ಮಾಲೀಕರು..!

ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಚಿವ ಶಂಕರ್ ಪಾಟೀಲ್ ಮುನ್ನೇನಕೊಪ್ಪ ಮಹತ್ವದ ಸಭೆ‌ ನಡೆಸಿದ್ರು. ಬಾಕಿ ನೀಡುವ ಕುರಿತು ಮಹತ್ವದ ಚರ್ಚೆ ನಡೆಸಿದ ಅವರು, ಕಬ್ಬು ಬೆಳೆಗಾರರಿಗೆ ಬಾಕಿ ಬ್ಯಾಲೆನ್ಸ್ ಕೂಡಲೇ ಪಾವತಿಸಲು ಸಚಿವರು ಸಭೆಯಲ್ಲಿ ಮಾಲೀಕರಿಗೆ ಸೂಚನೆ ನೀಡಿದ್ರು.

ವರ್ಷ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಬಾಕಿ ಹಣ ನೀಡಿದ್ದಾರೆ. ಈ ವರ್ಷವೂ ಕಬ್ಬು ಕಟಾವು ನಡೆದಿದ್ದು,ರಾಜ್ಯದಲ್ಲಿ 621.93 ಮೆಟ್ರಿಕ್‌ ಟನ್ ಕಬ್ಬು ನುರಿಸಲಾಗಿದೆ. 19626.  ಕೋಟಿ ರೂ. ರೈತರಿಗೆ ಕೊಡಿಸಬೇಕಿದ್ದು, ಅದರಲ್ಲಿ 18224. ಕೋಟಿ ಈಗಾಗಲೇ ಪಾವತಿಸುವ ಕೆಲಸವನ್ನ ಈಗಾಗಲೇ ಮಾಡಲಾಗಿದೆ. ಜೊತೆಗೆ ಸರ್ಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಶೇ. 93 ರಷ್ಟು ಹಣವನ್ನ ಈಗಾಗಲೇ ನೀಡಿದ್ದಾರೆ.. ಬಾಕಿ 7% ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ. ಒಟ್ಟು 1435 ಕೋಟಿ ಬಾಕಿ ಉಳಿದಿದ್ದು, ಮಾಲೀಕರ ಸಭೆಯಲ್ಲಿ 200. ಕೋಟಿ ರೂ.ಹಣ ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ರು.

ಜೊತೆಗೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ರೈತರು ಬೀದಿಗಿಳಿಯದಂತೆ ನೋಡಿಕೊಳ್ಳಲಾಗಿದೆ. ಮೂರ್ನಾಲ್ಕು ಕಾರ್ಖಾನೆಗಳು ಶೇ.100ರಷ್ಟು ಹಣ ಸಂದಾಯ ಮಾಡಿದ್ದಾರೆ. ರಾಜ್ಯದಲ್ಲಿ ಎಥೆನಾಲ್‌ಗೆ 32 ಸಕ್ಕರೆ ಕಾರ್ಖಾನೆಗಳು ಆರಂಭಿಸಿವೆ. ಕೇಂದ್ರದಿಂದ 68 ಘಟಕಗಳು ಅನುಮತಿ ಪಡೆದಿವೆ. ಅದರಲ್ಲಿ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು 50 ಕೋಟಿ ನೀಡಲಾಗಿದೆ. ಬಾಗಲಕೋಟೆ ಕಾರ್ಖಾನೆಯನ್ನು ನಡೆಸಲು ಖಾಸಗಿಯವರು ಮುಂದೆ ಬಂದಿದ್ದಾರೆ. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ರು.

ಇನ್ನು ನಮ್ಮ ರಾಜ್ಯದ ಕಬ್ಬು ಮಹಾರಾಷ್ಟ್ರಕ್ಕೆ ಹೋಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳ ನಾಯಕರ ಕಾರ್ಖಾನೆಗಳಿದ್ದು, ನಾವು ಯಾವುದೇ ಮುಲಾಜಿಲ್ಲದೆ ರೈತರಿಗೆ ಹಣ ಪಾವತಿಸುವಂತೆ ಹೇಳಿದ್ದೇವೆ. ಒಂದು ಪಕ್ಷ ರೈತ ಸಂಘಟನೆಗಳು ಮಾಡುವ ಆರೋಪದ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಸೂಕ್ತ ಮಾಹಿತಿ ಒದಗಿಸಲಾಗುವುದು. ಯಾವುದೇ ದಾಖಲೆ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸಚಿವರು ತಿಳಿಸಿದರು.

ಒಟ್ಟಿನಲ್ಲಿ ಕಬ್ಬು ಬೆಳೆಗಾರರ ಹಿತವೇ ಮುಖ್ಯ ಎಂದು ಹೇಳಿರುವ ಸಚಿವರು ಎಷ್ಟರ ಮಟ್ಟಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ..? ಕಾದು ನೋಡಬೇಕು.

RELATED ARTICLES

Related Articles

TRENDING ARTICLES