Monday, December 23, 2024

ಮಕ್ಕಳ ಜೊತೆ ರಾಕಿಭಾಯ್ ಘರ್ಜನೆ : ವಿಡಿಯೋ ವೈರಲ್​​

ಬೆಂಗಳೂರು : ಬಿಡುಗಡೆಯಾಗಿ 25ಕ್ಕೂ ಹೆಚ್ಚು ದಿನಗಳು ಕಳೆದರೂ ‘ಕೆಜಿಎಫ್: ಚಾಪ್ಟರ್ 2’ ಹವಾ ಮಾತ್ರ ಕಡಿಮೆಯಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ವಿಶ್ವದಾದ್ಯಂತ 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಈ ಗೆಲುವಿನಿಂದ ನಿರಾಳರಾಗಿರುವ ಯಶ್​ ಫ್ಯಾಮಿಲಿ ಜೊತೆ ಹೆಚ್ಚೆಚ್ಚು ಸಮಯ ಕಳೆಯುತ್ತಿದ್ದಾರೆ ಇತ್ತೀಚೆಗಷ್ಟೆ ಕುಟುಂಬ ಸಮೇತ ಗೋವಾಗೆ ಹೋಗಿ ಬಂದಿದ್ದರು. ಯಶ್​ ಮಕ್ಕಳೊಂದಿಗೆ ಒಂದು ಪೋಸ್ಟ್​ ಮಾಡಿದ್ದು ಅದರಲ್ಲಿ ಯಶ್​ ಮಗ ಐ ಆ್ಯಮ್​ ಎ​ ಬಿಗ್​ ಡೈನೋಸರಸ್​ ಎನ್ನುತ್ತಾನೆ. ಅದಕ್ಕೆ ನಟ ಯಶ್​​ ಪ್ರತಿಕ್ರಿಯಿಸಿ ನನಗೆ ಭಯ ಆಗೋಯ್ತು ಎಂದು ಹುಲಿ ಘರ್ಜನೆ ಮಾಡುತ್ತಾರೆ. ಆ ಧ್ವನಿಗೆ ಅವರ ಮಗ ಅಥರ್ವ ಹೆದರಿ ಓಡುತ್ತಾನೆ.

ಈ ಕ್ಷಣವನ್ನು ಐರಾ ತಂದೆಯೊಂದಿಗೆ ಎಂಜಾಯ್​ ಮಾಡಿದ್ದಾಳೆ. A ‘Wild’ start to our Wednesday! ಎಂದು ಕ್ಯಾಪ್ಷನ್​ ನೀಡಿ ಈ ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES