Sunday, December 22, 2024

ಚಾರ್ಮಾಡಿ ಘಾಟ್‌ನಲ್ಲಿ ದರೋಡೆ ಪ್ರಕರಣ: ಆರೋಪಿಗಳು ಅಂದರ್​​

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರನ್ನು ಪ್ರವಾಸಿಗರೇ ದರೋಡೆ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಮಧ್ಯರಾತ್ರಿ ಅಪಘಾತವಾಗಿತ್ತು. ಕಾರಿನಲ್ಲಿದ್ದವರು ಸಹಾಯ ಬಯಸುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದವರು ಸಹಾಯ ಮಾಡುವ ನೆಪದಲ್ಲಿ ಅವರನ್ನು ಹೆದರಿಸಿ ಹಣ, ಉಂಗುರ, ಚೈನ್ ಹಾಗೂ ಮೊಬೈಲ್ ದೋಚಿದ್ದರು. ಆದರೆ, ಚಾರ್ಮಾಡಿಯ ಸೌಂದರ್ಯದಲ್ಲಿ ಇದೇ ದರೋಡೆ ಮೊದಲಲ್ಲ. ಹಾಗಾಗಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಪೊಲೀಸರು ಇಲ್ಲಿ ರಾತ್ರಿ ನಿರಂತರ ಗಸ್ತು ತಿರುಗಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಆಗುಂತಕನಿಂದ ದರೋಡೆಯಾದ ಒಂದೆರಡು ಗಂಟೆಯಲ್ಲೇ ಕಾಫಿನಾಡ ಖಾಕಿಗಳು ದರೋಡೆಕೋರರನ್ನು ಬಂಧಿಸಿದ್ದಾರೆ. ಅಲ್ಲದೇ ನಿರ್ಜನ ಪ್ರದೇಶವಾದ್ದರಿಂದ ರಾತ್ರಿಯ ಸಮಯದಲ್ಲಿ ಕರೆಂಟ್ ಇಲ್ಲ. ನೆಟ್ವರ್ಕ್ ಇರುವುದಿಲ್ಲ ಹೀಗಾಗಿ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ.

ಇನ್ನು ಮಧ್ಯರಾತ್ರಿ ಸಹಾಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ. ಪೊಲೀಸ್ ಗಸ್ತು ತಿರುಗುತ್ತಿದ್ದರೂ ಇಂತಹ ಪ್ರಕರಣಗಳು ನಡೆಯುತ್ತಿವೆ. ಬಣಕಲ್‍ನಿಂದ ಚಿಕ್ಕಮಗಳೂರು ಗಡಿಯ ಅಣ್ಣಪ್ಪಸ್ವಾಮಿ ದೇಗುಲದವರೆಗೂ ಇನ್ಮುಂದೆ ಮತ್ತಸ್ಟು ಅಲರ್ಟ್ ಆಗಿ ಇರುತ್ತೇವೆ ಎಂದು ಎಸ್ಪಿ ಅಕ್ಷಯ್ ಹೇಳಿದ್ದಾರೆ.

ಒಟ್ಟಾರೆ ತರಕಾರಿ ಗಾಡಿಯವನು ಮಾಹಿತಿ ನೀಡಿದ್ದರಿಂದ ದರೋಡೆಕೋರರು ಖಾಕಿಗೆ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ, ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಸಿಸಿಟಿವಿ ಕೂಡ ಸ್ಥಗಿತಗೊಂಡಿದೆ. ಆದ್ರೆ, ಆ ಟೆಂಪೋ ಚಾಲಕನಿಂದ ಒಂದೊಳ್ಳೆ ಕೆಲಸವಾಗಿದೆ.  ನಿಜಕ್ಕೂ ಪೊಲೀಸರು ಈ ಮಾರ್ಗದಲ್ಲಿ ಹೈ ಅಲರ್ಟ್ ಘೋಷಿಸೋದು ಒಳ್ಳೆಯ ವಿಷಯವಾಗಿದೆ.

RELATED ARTICLES

Related Articles

TRENDING ARTICLES