Thursday, December 19, 2024

ಪ್ರಶಾಂತ್ ನೀಲ್ ರೇಗಿಸಿದ ರವೀನಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.ಈ ಸಕ್ಸಸ್ ಇಡೀ ತಂಡಕ್ಕೆ ಸಂತಸ ತಂದಿದೆ.

ಇಡೀ ಕೆಜಿಎಫ್ ತಂಡ ಸಂಭ್ರಮದಲ್ಲಿ ತೇಲುತ್ತಿದೆ. ಈ ನಡುವೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್ ಕ್ಯೂಟ್ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಮಿಕಾ ಸೇನ್ ಆಗಿ ಮಿಂಚಿರುವ ರವೀನಾ ಟಂಡನ್ ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ರವೀನಾ ಟಂಡನ್ ಶೇರ್ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸೂಚನೆಗಳನ್ನು ನೀಡುತ್ತಿದ್ದಾರೆ. ಆಗ ರವೀನಾ ಟಂಡನ್ ಪ್ರಶಾಂತ್ ನೀಲ್ ಅವರನ್ನು ಟೀಸ್ ಮಾಡಿದ್ದಾರೆ. ಇದನ್ನು ನೋಡಿ ಪ್ರಶಾಂತ್ ನಗುತ್ತಾ ನಿಂತಿರುವ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿ ರವೀನಾ, ನಾವೆಲ್ಲರೂ ತನ್ನ ಸ್ವೀಟ್ ಪ್ರಶಾಂತ್ ನೀಲ್ ಅವರಿಗೆ ಟೀಸ್ ಮಾಡುತ್ತಿ ರುವುದು. ಈ ಸುಂದರ ವಿಡಿಯೋಗೆ ಧನ್ಯವಾದಗಳು ಭುವನ್ ಗೌಡ ಎಂದು ಕ್ಯಾಪ್ಷನ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES