Sunday, December 22, 2024

ಹಿಂದಿ ಚಿತ್ರರಂಗದ​ ವಿರುದ್ಧ ಪ್ರಿನ್ಸ್ ಮಹೇಶ್​ ಬಾಬು ಸಮರ..!

ಮಹೇಶ್​ ಬಾಬು ಟಾಲಿವುಡ್​ನ​ ಪ್ರಿನ್ಸ್ ಅಂತಲೇ ಫೇಮಸ್​. ಪವರ್​ಫುಲ್​ ಡೈಲಾಗ್ಸ್. ಖಡಕ್​ ಲುಕ್​ಗೆ ಫಿದಾ ಆಗದ ಅಭಿಮಾನಿಗಳೇ ಇಲ್ಲ. ಬರೀ ತೆಲುಗು ಮಾತ್ರವಲ್ಲ. ಹೊರ ರಾಜ್ಯಗಳಲ್ಲೂ ಮಹೇಶ್​ ಬಾಬುಗೆ ದೊಡ್ಡಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಪ್ರಭಾಸ್, ವಿಜಯ್ ದೇವರಕೊಂಡ ಮುಂತಾದ ನಟರಿಗೆ ಹಿಂದಿಯಿಂದ ಆಫರ್ಸ್ ಬರುತ್ತಿವೆ. ಹಾಗಾದರೆ, ಮಹೇಶ್‌ ಬಾಬುಗೆ ಆಫರ್ಸ್‌ ಬರುತ್ತಿಲ್ಲವೇ..? ಅದಕ್ಕೆ ಮಹೇಶ್ ಬಾಬು ಕೂಡ ಉತ್ತರ ನೀಡುತ್ತಲೇ ಬಂದಿದ್ದರು. ಆದರೆ ಈ ಬಾರಿ ಖಡಕ್ ಆಗಿ ರಿಪ್ಲೈ ಕೊಟ್ಟಿದ್ದಾರೆ.

ಬಾಲಿವುಡ್ ಆಫರ್​ಗಳ ಬಗ್ಗೆ ಮಹೇಶ್ ಬಾಬು ಬಹಿರಂಗಪಡಿಸಿದ್ದಾರೆ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್ಸ್ ಬಂದಿವೆ. ಆದರೆ ಅವರು ನನ್ನನ್ನು ನಿಭಾಯಿಸುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ನನ್ನನ್ನು ನಿಭಾಯಿಸಲು ಸಾಧ್ಯವಾಗದ ಚಿತ್ರರಂಗಕ್ಕೆ ಹೋಗಿ ನನ್ನ ಕೆಲಸದ ಸಮಯವನ್ನು ವ್ಯರ್ಥ ಮಾಡಲು ನನಗೆ ಇಷ್ಟವಿಲ್ಲ. ನನಗೆ ದಕ್ಷಿಣ ಭಾರತದಲ್ಲಿ ಅಪಾರವಾದ ಗೌರವ, ಜನಪ್ರಿಯತೆ ಸಿಕ್ಕಿದೆ. ಹಾಗಾಗಿ, ನಾನು ಇಲ್ಲೇ ಸಿನಿಮಾ ಮಾಡುತ್ತೇನೆ ಅವುಗಳನ್ನು ಎಲ್ಲರೂ ನೋಡುತ್ತಾರೆ. ಈ ಮೂಲಕ ಮಹೇಶ್​ ಬಾಬು ತಮ್ಮ ಭಾಷಾ ಪ್ರೇಮ ಮೆರೆದಿದ್ದಾರೆ.

ಇನ್ನು, ಸಿನಿಮಾವೊಂದಕ್ಕೆ ಬರೋಬ್ಬರಿ 60 ಕೋಟಿ ರೂಪಾಯಿ ಸಂಭಾವನೆ ಪಡೆಯತ್ತಿದ್ದ ಮಹೇಶ್​ ಬಾಬು, ಇದೀಗ ಮತ್ತೆ ಸಂಭಾವನೆ ಏರಿಸಿಕೊಂಡಿದ್ದಾರೆ. ಒಂದು ಚಿತ್ರಕ್ಕೆ ಮಹೇಶ್ ಬಾಬು 80 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಈ ಮೂಲಕ ಬಾಲಿವುಡ್​ನ ಅಕ್ಷಯ್ ಕುಮಾರ್, ಅಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್​ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿರೋ ಮಹೇಶ್​ ಬಾಬು, ಬಿಡುಗಡೆಗೆ ತಯಾರಿಯಲ್ಲಿದ್ದಾರೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು, ಮಹೇಶ್ ಬಾಬು ಬಾಲಿವುಡ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಮಹೇಶ್ ಬಾಬು ತಾನು ಎಂದಿಗೂ ಬಾಲಿವುಡ್ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES