Wednesday, January 22, 2025

ಮುತಾಲಿಕ್​​ ಒಬ್ಬ ದೇಶದ್ರೋಹಿ ಅವನನ್ನು ಪಾಕಿಸ್ತಾನಕ್ಕೆ ಕಳುಹಿಸಿ : ಮಸೂದ್

ಮಂಗಳೂರು : ಪ್ರಮೋದ್ ಮುತಾಲಿಕ್​​ ಓರ್ವ ದೇಶದ್ರೋಹಿಯಾಗಿದ್ದು, ಅವರದ್ದು ರಾಮ ಸೇನೆ ಅಲ್ಲ, ರಾವಣ ಸೇನೆಯಾಗಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್ ಮಹಮ್ಮದ್ ಮಸೂದ್ ಹೇಳಿದ್ದಾರೆ.

ರಾಜ್ಯದಲ್ಲಿ ಲೌಡ್ ಸ್ಪೀಕರ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಆದೇಶ ಹಿನ್ನಲೆ ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ನಿಯಂತ್ರಣಕ್ಕೆ ಮುಸ್ಲಿಂ ಕಮಿಟಿ ಆದೇಶ ಹೊರಡಿಸಿದೆ. ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಸ್ವಾಗತಿಸುತ್ತೇವೆ ಎಂದರು.

ಇನ್ನು ಕುದ್ರೋಳಿಯ ಜಾಮೀಯ ಮಸೀದಿಯಲ್ಲಿ ಐದು ಹೊತ್ತು ನಮಾಝ್​​​ನಲ್ಲೂ ಮೈಕ್ ಬಳಕೆ ಮಾಡೋದಿಲ್ಲ ಮಸೀದಿ ಅಧ್ಯಕ್ಷನಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಬೇರೆ ಎಲ್ಲಾ ಮಸೀದಿಗಳಿಗೆ ಮೈಕ್ ಸೌಂಡ್ ಕಡಿಮೆ ಮಾಡಲು ಸೂಚನೆ ನೀಡಿದ್ದಾರೆ.

ಯಾರಾದರೂ ಮಸೀದಿಗೆ ತೊಂದರೆ ನೀಡಲು ಬಂದರೆ ಅವರಿಗೆ ಒಳ್ಳೆಯ ದನದ ಹಾಲನ್ನು ಕಾಯಿಸಿ ಕೊಡಿ ಅವರ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಬೇಡಿ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದನೆ ನೀಡಿ ಎಂದರು.

ಅಷ್ಟೇ ಅಲ್ಲದೇ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಓರ್ವ ದೇಶದ್ರೋಹಿಯಾಗಿದ್ದಾರೆ. ಹನುಮಂತ ಇರುವ ಸೇನೆ ರಾಮಸೇನೆಯಾಗಿದೆ. ಆದರೆ‌, ಕೋಮುವಾದಿ ಮುತಾಲಿಕ್​​ನದ್ದು ರಾವಣ ಸೇನೆಯಾಗಿದೆ. ಅವನನ್ನು ಪಾಕಿಸ್ಥಾನಕ್ಕೆ ಕಳುಹಿಸಬೇಕು. ಅವರು ಕಛೇರಿಗೆ ಬಂದಾಗ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಖುರ್ಚಿಯಿಂದ ಎದ್ದು ನಿಂತಿದ್ದಾರೆ. ಆದರೆ, ನಾವು ಎರಡು ಸಲ ಹೋದಾಗಲೂ ನಮಗೆ ಸಮಯ ನೀಡಿಲ್ಲ. ಮಾತನಾಡೋಕೂ ಗಂಟೆ ಗಟ್ಟಲೆ ಕಾಯಿಸಿದ್ದಾರೆ ಇದನ್ನು ನಮ್ಮ ಮುಸ್ಲಿಂ ಕಮಿಟಿ ವಿರೋಧಿಸುತ್ತದೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES