Wednesday, January 22, 2025

ಗೃಹ ಸಚಿವರು ಅರ್ಧ ಜ್ಞಾನದವರು ಇಲಾಖೆ ನಡೆಸಲು ಲಾಯಕ್ ಇಲ್ಲ‌‌ : ನಲಪಾಡ್

ಮಂಡ್ಯ: ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅರ್ಧ ಜ್ಞಾನ ಇರುವವರು. ಕರ್ನಾಟಕದ ಪೊಲೀಸ್ ಇಲಾಖೆಯನ್ನು ನಡೆಸಲು ಲಾಯಕ್ ಇಲ್ಲ‌‌. ಮೊದಲು ಅವರನ್ನು ಬಂಧಿಸಿ ಎಂದು ಮಂಡ್ಯದಲ್ಲಿ ರಾಜ್ಯ ಯ್ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಕಿಡಿಕಾರಿದ್ದಾರೆ.

PSI ಹಗರಣದಲ್ಲಿ ನಾಗಮಂಗಲದ ಕಾಂಗ್ರೆಸ್ ಮುಖಂಡ ಶರತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಯಾರೇ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಆಗಲೇಬೇಕು. ಇದರಲ್ಲಿ ರಾಜಿಯಾಗುವ ಮಾತೇ ಇಲ್ಲ. ನಾವು ಭ್ರಷ್ಟಚಾರ ವಿರುದ್ದ ಹೋರಾಟ ಮಾಡೇ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಯಾರೇ ಆದರೂ ಅರೆಸ್ಟ್ ಮಾಡಿ‌‌‌‌. ಅಂಗಡಿ ಇರೋದರಿಂದ  ತಾನೇ ಎಜೆಂಟ್ ಇರೋದು ಎಂದು ಗುಡುಗಿದರು.

ಅಷ್ಟೇ ಅಲ್ಲದೇ ಬಿಜೆಪಿಯ ಮಂತ್ರಿಗಳನ್ನು ಇದೇ ರೀತಿ ಸಿಐಡಿ ಅರೆಸ್ಟ್ ಮಾಡಬೇಕು. ಈ ಹಗರಣದ ಬಿಸಿನೆಸ್ ಮಾಡತ ಇರೋದು ಬಿಜೆಪಿ ಅವರು. ಬಿಜೆಪಿಯಲ್ಲಿ ಹಗರಣ ನಡೆದಿದೆ ಅಂತ ನಾಯಕರು ಒಪ್ಪಿಕೊಳ್ಳಬೇಕು ಮತ್ತು ಗೃಹ ಸಚಿವರ ಬಂಧನಕ್ಕೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES