ಬೆಂಗಳೂರು: ಪ್ರಭಾವಿಗಳು ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಎಂಬುವುದರ ಬಗ್ಗೆ ಐಪಿಎಸ್ ಅಧಿಕಾರಿ ಡಾ. ರವೀಂದ್ರನಾಥ್ ಅವರು ತನಿಖೆ ಮಾಡುತ್ತಾ ಇದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ಡಾ. ರವೀಂದ್ರನಾಥ್ ಅವರು ನೊಂದವರಿಗೆ, ದಲಿತ, ಪರಿಶಿಷ್ಟ ಜಾತಿಯವರಿಗೆ ರಕ್ಷಣೆ ನೀಡಿ ಪ್ರಾಮಾಣಿಕ ಕೆಲಸ ಮಾಡ್ತಾ ಇದ್ರು ಆದರೆ 1097ರಲ್ಲಿ ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಎಂದರು.
ಅದುವಲ್ಲದೇ, ರವೀಂದ್ರನಾಥ ಒಂದು ವರ್ಷ ಎಂಟು ತಿಂಗಳ ಅಧಿಕಾರ ಅವಧಿ ಇದೆ. ಸರ್ಕಾರ ಅವರ ಮೇಲೆ ಒತ್ತಡ ಹೇರಿದೆ. ಪ್ರಭಾವಿಗಳು ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಅವರ ಬಗ್ಗೆ ರವೀಂದ್ರನಾಥ ತನಿಖೆ ಮಾಡ್ತಾ ಇದ್ರು ಯಾರು ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ? ಯಾರು ಫೇಕ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ ? ಇವರಿಬ್ಬರ ಮೇಲೆ ಕ್ರಮ ಆಗಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.