Wednesday, January 22, 2025

ಸಿಲಿಕಾನ್​ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ; ಜನರಲ್ಲಿ ಆತಂಕ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಡೆಂಗ್ಯು, ಮಲೇರಿಯಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಗರದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ ಇದನ್ನು ತಡೆಗಟ್ಟಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯೂ(ಬಿಬಿಎಂಪಿ) ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈಗಾಗಲೇ ಸೊಳ್ಳೆ ಕಾಟದಿಂದ ಸಿಲಿಕಾನ್ ಸಿಟಿ ಜನರು ಹೈರಾಣರಾಗಿದ್ದು, ಈವರೆಗೆ ನಗರದಾದ್ಯಂತ 2 ಸಾವಿರಕ್ಕೂ ಹೆಚ್ಚು ಡೆಂಗ್ಯು ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಒಟ್ಟು 1,800 ಪ್ರಕರಣ ದಾಖಲಾಗಿತ್ತು. ಆದರೆ, ಈ ವರ್ಷ ಈಗಾಲೇ 2 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಕೇಸ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ನಿಂತ ನೀರಿನಲ್ಲಿ ಹೆಚ್ಚು ಲಾರ್ವಗಳು ಉತ್ಪತ್ತಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೀರು ನಿಲ್ಲದಂತೆ ಬಿಬಿಎಂಪಿ ವಿಶೇಷ ಆಯುಕ್ತ ಸೂಚನೆಯನ್ನು ನೀಡಿದ್ದಾರೆ.

ಅದುವಲ್ಲದೇ, ಶಾಲಾ ಕಾಲೇಜು ಬಳಿ ಸೊಳ್ಳೆಗಳು ಹೆಚ್ಚಾಗುತ್ತಿದೆ, ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆ ಅಕ್ಕಪಕ್ಕ ಮನೆಗಳಲ್ಲಿ ಆರೋಗ್ಯ ಸಿಬ್ಬಂದಿ ಪರಿಶೀಲನೆ ಮಾಡಬೇಕು ಹಾಗೆನೇ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಲು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ಸೂಚಿಸಿದ್ದಾರೆ. ಈಸ್ಟ್ ಝೋನ್‌ನಲ್ಲಿ ಅತಿ ಹೆಚ್ಚು ಡೆಂಗ್ಯು ಪ್ರಕರಣಗಳು ದಾಖಲಾಗಿದೆ.

ಬಿಬಿಎಂಪಿಯ 8 ವಲಯದಲ್ಲಿ ಎಷ್ಟು‌ ಡೆಂಗ್ಯು ಪ್ರಕರಣಗಳಿವೆ ಇಲ್ಲಿದೆ ಅಂಕಿ ಅಂಶ

ಬೊಮ್ಮನಹಳ್ಳಿ ಝೋನ್ – 104 ಪ್ರಕರಣ
ದಾಸರಹಳ್ಳಿ ಝೋನ್ – 38 ಪ್ರಕರಣ
ಈಸ್ಟ್ ಝೋನ್ – 653 ಪ್ರಕರಣ
ಮಹದೇವಪುರ ಝೋನ್ – 342 ಪ್ರಕರಣ
ಆರ್.ಆರ್.ನಗರ ಝೋನ್ – 122 ಪ್ರಕರಣ
ಸೌತ್ ಝೋನ್ – 170 ಪ್ರಕರಣ
ವೆಸ್ಟ್ ಝೋನ್ – 162 ಪ್ರಕರಣ
ಯಲಹಂಕ ಝೋನ್ – 202 ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES