Thursday, December 19, 2024

ಸಚಿವಕಾಂಕ್ಷಿಗಳಿಗೆ ಚೆಕ್​ಮೇಟ್ ಇಟ್ಟ ಸಿಎಂ..!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲವೇ ಕೂಡಿ ಬರ್ತಿಲ್ಲ. ಕ್ಯಾಬಿನೆಟ್​ ಕಗ್ಗಂಟಿಗೆ ಈ ತಿಂಗಳು ತೆರೆ ಬೀಳುತ್ತೆ.. ಮುಂದಿನ ಮುಂದಿನ ತೆರೆ ಬೀಳುತ್ತೆ ಎಂದು ಚಾತಕ ಪಕ್ಷಿಗಳಂತೆ ಕಾಯ್ತಿರೋ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಬೊಮ್ಮಾಯಿ ಮತ್ತೆ ಚೆಕ್​ಮೇಟ್​ ಇಟ್ಟಿದ್ದಾರೆ.

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿರೋ‌ ಸಿಎಂ, ರಾಜ್ಯ ರಾಜಕೀಯ ಹಾಗೂ ಸಂಪುಟ ವಿಚಾರ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆಯೋ..? ಪುನಾರಚನೆಯೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ಅಮಿತ್ ಶಾರಿಂದ ಸಿಕ್ಕಿಲ್ಲ.. ಆದರೆ, ನಡ್ಡಾ ಅವ್ರ ಜೊತೆಗೆ ಮಾತನಾಡಿ ಮುಂದಿನ ಎರಡು ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದು‌ ಸಿಎಂ ಬೊಮ್ಮಯಿ ಹೇಳಿದ್ದಾರೆ.

ಸದ್ಯ ಸಿಎಂ ಕೊಟ್ಟಿರೋ ಈ ಒಂದೇ ಒಂದು ಸ್ಟೇಟ್​ಮೆಂಟ್  ಸಾಕಷ್ಟು ಪ್ರಶ್ನೆಗಳನ್ನ ಹುಟ್ಟಿ ಹಾಕಿದೆ. ಮುಂದಿನ ವಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಆಗಬಹುದು. ಸಚಿವ ಸಂಪುಟದ ಬಗ್ಗೆ ನಡ್ಡಾ ಬಳಿ ಚರ್ಚೆ ಮಾಡುವುದಾಗಿ ಅಮಿತ್​ ಶಾ ಹೇಳಿದ್ದಾರಂತೆ. ನಾನು ಯಾವುದೇ ಪಟ್ಟಿಯನ್ನ ಅಮಿತ್ ಶಾ ಅವರಿಗೆ ಕೊಟ್ಟಿಲ್ಲ. ಆದ್ರೆ ಮುಂದಿನ ವಾರ ಬಹಳ ಮುಖ್ಯವಾಗಿದೆ. ಯಾಕೆಂದ್ರ ಸ್ಥಳೀಯ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿ ಆಧಾರ ಬಗ್ಗೆ ಬದಲಾವಣೆ ಸಹ ಆಗಬಹುದು ಎಂದು ಹೇಳುವ‌ ಮೂಲಕ ಕುತೂಹಲ ಮೂಡಿಸಿದ್ದಾರೆ.

ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಮಾಡ್ತಿನಿ ಅಂತ ದೆಹಲಿಗೆ ತೆರಳಿದ ಸಿಎಂಗೆ 7ನೇ ಬಾರಿಯೂ ಅದೇ ಉತ್ತರ ಸಿಕ್ಕಿದೆ. ಒಂದು ಕಡೆ ಬೊಮ್ಮಾಯಿ ಸಂಪುಟದ ಬಗ್ಗೆ ಅಂತಿಮ‌ ಎಂದರೆ, ಇತ್ತ ಸಿಎಂ ಮುಂದಿನ ವಾರ ಬಹಳ ಮುಖ್ಯ ಎಂದಿರೋದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES