ಬೆಳಗಾವಿ : ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ.NCP ಮುಖ್ಯಸ್ಥ ಮುಖ್ಯ ಅತಿಥಿಯಾಗಿ ಭಾಷಣ ಮಾಡುತ್ತಿದ್ದಾಗಲೇ ಪುಂಡರು ಹೀಗೆ ಘೋಷಣೆ ಕೂಗಿದ್ದಾರೆ. ಪವಾರ್ ಮಾತು ಶುರು ಮಾಡುತ್ತಿದ್ದಂತೆ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದ ಪವಾರ್, ಕೂಡಲೇ ಮಾತು ನಿಲ್ಲಿಸಿ, ನಿಮ್ಮ ಅನುಮತಿ ಪಡೆದು ಭಾಷಣ ಮಾಡುತ್ತೇನೆ ಎಂದರು.ಈ ಹಿಂದೆಯೂ MES ಪುಂಡ ಶುಭಂ ಶಳಕೆ ಈ ಹಿಂದೆಯೂ ಇಂಥಾದ್ದೇ ವಿವಾದಿತ ಪೋಸ್ಟ್ ಮಾಡಿ ಕನ್ನಡಿಗರನ್ನು ಕೆರಳಿಸಿದ್ದ.ಈ ಬೆನ್ನಲ್ಲೇ ನಾಡದ್ರೋಹಿಗಳು ಮತ್ತೆ ಬಾಲ ಬಿಚ್ಚಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಎಂಇಎಸ್, ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಿಲ್ಲ ಎನ್ನುವ ಕುಲದವರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾದ್ರೂ ಬುದ್ಧಿ ಕಲಿಯುವ ಲಕ್ಷಣ ಕಾಣುತ್ತಿಲ್ಲ.ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಲಾಭ ಪಡೆಯಲು ನಾನಾ ಕಸರತ್ತು ಮುಂದುವರೆಸಿದೆ. 18 ವರ್ಷದಿಂದ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹೀಗಿದ್ರೂ ಎಂಇಎಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿವಾದಾತ್ಮಕ ಹೇಳಿಕೆ ಹಾಗೂ ಪೋಸ್ಟ್ ಮಾಡಿ ಗಡಿಯಲ್ಲಿ ಶಾಂತಿ ಕದಡುವ ಹುನ್ನಾರ ನಡೆಸುತ್ತಿದ್ದಾರೆ. ಹೀಗಾಗಿ ಕಠಿಣ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಒಟ್ಟಾರೆ ಗಡಿ ಭಾಗದಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಎಂಇಎಸ್, ಚುನಾವಣೆ ವರ್ಷವಾಗಿರುವುದರಿಂದ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೆ ಖ್ಯಾತಿ ತೆಗೆದಿದೆ. ಇದಕ್ಕೆ ರಾಜ್ಯ ಸರ್ಕಾರ ದಿಟ್ಟ ಉತ್ತರ ನೀಡುತ್ತಾ ಕಾದುನೋಡಬೇಕು.