ಬೆಂಗಳೂರು : ಜಕ್ಕೂರು ಪ್ಲಾಂಟೇಶನ್, ಅಲ್ಲಾಳಸಂದ್ರ, ಚಿಕ್ಕಬೊಮ್ಮಸಂದ್ರ ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಇಲ್ಲಿ ಸುಮಾರು 11 ನಾಲಾಗಳನ್ನ ಹಾಗೂ ಬಫರ್ ಜೋನ್ ಒತ್ತುವರಿ ಮಾಡಿ ಬಡಾವಣೆಗಳನ್ನ ನಿರ್ಮಿಸಲಾಗಿದೆ ಅಂತಾ ಬಿಡಿಎ ಹೇಳ್ತಿದೆ. ಕಳೆದ ವರ್ಷ ಜ್ಯುಡಿಶಿಯಲ್ ಲೇಔಟ್ ನ ನಿವಾಸಿಗಳು ಬಡಾವಣೆಯನ್ನ ಲೀಗಲೈಸ್ ಮಾಡೋದಕ್ಕೆ ಮನವಿ ಮಾಡಿಕೊಂಡಿದ್ರು. ಎನ್ ಜಿಟಿ ನಿಯಮಗಳ ಉಲ್ಲಂಘನೆಯಾಗಿದೆ ಅಂತಾ ಮನವಿಯನ್ನ ತಿರಸ್ಕಾರ ಮಾಡಿದೆ.
ಜಕ್ಕೂರು ಪ್ಲಾಂಟೇಶನ್, ಅಲ್ಲಾಳಸಂದ್ರ, ಚಿಕ್ಕಬೊಮ್ಮಸಂದ್ರದ ಸುಮಾರು ಐವತ್ತಕ್ಕೂ ಹೆಚ್ಚು ಸರ್ವೇ ನಂಬರ್ ಗಳ ಸುಮಾರು 156 ಎಕರೆ ಜಮೀನು ಬಿಡಿಎ ಸ್ವಾಧೀನಕ್ಕೊಳಪಟ್ಟಿದೆ. ಅಲ್ಲದೇ ಏಳು ಎಕರೆಯಷ್ಟು ಸರ್ಕಾರಿ ಜಾಗವೂ ಒತ್ತುವರಿಯಾಗಿರೋ ಮಾಹಿತಿ ಇದೆ. ಪಾರ್ಕ್, ಶಾಲೆ, ಆಸ್ಪತ್ರೆಗಳಿಗ ಮೀಸಲಾಗಬೇಲಿದ್ದ ಸಿಎ ಸೈಟ್ ಗಳಲ್ಲೂ ಅಕ್ರಮವಾಗಿ ಕಟ್ಟಡಗಳ ನಿರ್ಮಾಣವಾಗಿದೆ. ಒಂದ್ಕಡೆ ಎನ್ ಜಿಟಿ, ಇನ್ನೊಂದು ಕಡೆ ಬಿಡಿಎ ಕಾಯ್ದೆ ಎಲ್ಲವೂ ಉಲ್ಲಂಘನೆ ಆಗಿದೆ. ಹೀಗಾಗಿ ಲೇಔಟ್ ಗಳಿಗೆ ನಕ್ಷೆ ಅನುಮೋದನೆ ನೀಡಲು ಆಗಲ್ಲ ಅಂತಾ ಪ್ರಾಧಿಕಾರ ಹೇಳಿದೆ.
ಈ ಬಡಾವಣೆಗಳಲ್ಲಿ ರಾಜಕಾರಣಿಗಳು, ಬಿಲ್ಡರ್‌ಗಳು ಮಾತ್ರವಲ್ಲ. ದೊಡ್ಡ ದೊಡ್ಡ ವಕೀಲರು, ನ್ಯಾಯಾಧೀಶರು ಕೂಡ ಇದ್ದಾರೆ. ನ್ಯಾಯಾಂಗ ಬಡಾವಣೆ ಅಂತಾ ಹೆಸರಿಟ್ಟುಕೊಂಡರೆ ಎಲ್ಲವೂ ನ್ಯಾಯವೇ ಅನ್ನೋ ರೀತಿ ಆಗಿಬಿಟ್ಟಿದೆ. ಹಾಗಾಗಿ ಬಡವರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯವಾಗದೆ ಪ್ರಭಾವಿಗಳ ವಿರುದ್ಧ ಕ್ರಮ ಆಗಬೇಕಿದೆ.