Wednesday, January 22, 2025

ಆಜಾನ್ vs ಸುಪ್ರಭಾತ : ಸರ್ಕಾರದಿಂದ ಹೊಸ ಗೈಡ್ ಲೈನ್ಸ್

ಬೆಂಗಳೂರು : ಆಜಾನ್ ಮತ್ತು ಸುಪ್ರಭಾತ ವಿವಾದಕ್ಕೆ ತೆರೆ ಎಳೆಯಲು ಧ್ವನಿವರ್ಧಕ ವಿಚಾರದಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ 2002ರ ಆದೇಶದಂತೆ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಧ್ವನಿವರ್ಧಕ ಬಳಸಬೇಕೆಂದು ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಯಾವ ಪ್ರಮಾಣದಲ್ಲಿ ಶಬ್ದ ಬರುವಂತೆ ಧ್ವನಿ ವರ್ಧಕ ಬಳಸಿಕೊಳ್ಳಬಹುದು..? ಕರ್ನಾಟಕ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಯನ್ವಯ ಎಷ್ಟು ಡೆಸಿಬಲ್ ಬಳಸಬಹುದು..? ಮಾರ್ಗಸೂಚಿಯಲ್ಲಿ ಕೊಟ್ಟಿರುವ ಡೆಸಿಬಲ್ ಪ್ರಮಾಣ ಎಷ್ಟು..? ಕರ್ನಾಟಕ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6ವರೆಗೆ ಇಂತಿಷ್ಟೇ ಡೆಸಿಬಲ್ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರಗೆ ಇಂತಿಷ್ಟೇ ಎಂದು ನಿಗದಿ ಪಡಿಸಲಾಗಿದೆ. ಅದರನ್ವಯ ಶಬ್ದ ಬರುವಂತೆ ನೋಡಿಕೊಳ್ಳಬೇಕಿದೆ.

  • ಬೆಳಗ್ಗೆ ಕೈಗಾರಿಕಾ ವಲಯ 75 ಡೆಸಿಬಲ್ ರಾತ್ರಿ 70 ಡೆಸಿಬಲ್
  • ಬೆಳಗ್ಗೆ ವಾಣಿಜ್ಯ ವಲಯ 65 ಡೆಸಿಬಲ್ ರಾತ್ರಿ 55 ಡೆಸಿಬಲ್
  • ಬೆಳಗ್ಗೆ ನಿಶ್ಯಬ್ಧ ವಲಯ 50 ಡೆಸಿಬಲ್ ರಾತ್ರಿ 40 ಡೆಸಿಬಲ್
  • ಬೆಳಗ್ಗೆ ವಸತಿ ವಲಯ 55 ಡೆಸಿಬಲ್ ರಾತ್ರಿ 45 ಡೆಸಿಬಲ್
  • ಬೆಳಗ್ಗೆ ನಿಶ್ಯಬ್ದ ವಲಯ 50 ಡೆಸಿಬಲ್ ರಾತ್ರಿ 40 ಡೆಸಿಬಲ್

ಬೆಳಗ್ಗೆ ಕೈಗಾರಿಕಾ ವಲಯದಲ್ಲಿ ಬೆಳಗ್ಗೆ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್ ನಿಗದಿ
ಮಾಡಲಾಗಿದೆ.

ವಾಣಿಜ್ಯ ವಲಯದಲ್ಲಿ ಬೆಳಗ್ಗೆ 65 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ಹಾಗೂ ನಿಶ್ಯಬ್ಧ ವಲಯದಲ್ಲಿ ಬೆಳಗ್ಗೆ 50 ಡೆಸಿಬಲ್, ರಾತ್ರಿ ವೇಳೆ 40 ಡೆಸಿಬಲ್ ಮತ್ತು ವಸತಿ ವಲಯ ವಲಯದಲ್ಲಿ ಬೆಳಗ್ಗೆ 55 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ಫಿಕ್ಸ್ ಮಾಡಲಾಗಿದೆ.

ಒಂದೊಂದು ರೀತಿಯಲ್ಲಿ ನಿಗದಿತ ಡೆಸಿಬಲ್ ನಷ್ಟು ಪ್ರಮಾಣದಲ್ಲಿ ಶಬ್ಧ ಮಾಡುವಂತ ಅವಕಾಶವನ್ನು ನೀಡಲಾಗಿದೆ. ಇದರ ಅನ್ವಯ ಶಬ್ಧವನ್ನು ಮಾಡಬಹುದಾಗಿದೆ ಎಂದು ಸರ್ಕಾರ ತನ್ನ ಮಾರ್ಗ ಸೂಚಿಯಲ್ಲಿ ತಿಳಿಸಿದೆ.

ಧ್ವನಿವರ್ಧಕ ಬಳಕೆಗೆ ಪೊಲೀಸರ ಅನುಮತಿ ಕಡ್ಡಾಯ : ಧ್ವನಿವರ್ಧಕವನ್ನು ಬಳಸಬೇಕಾದರೇ ಸರ್ಕಾರದ ಆದೇಶ 13.08.2002 ಪೊಲೀಸ್​ರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ನಿರ್ದಿಷ್ಟ ಪ್ರಮಾಣದ ಧ್ವನಿವರ್ಧಕವನ್ನು ಹೊರತುಪಡಿಸಿ ಶಬ್ಧ ಮಾಲಿನ್ಯವನ್ನು ಉಂಟು ಮಾಡುವ ಧ್ವನಿವರ್ಧಕವನ್ನು ಮತ್ತು ಧ್ವನಿವರ್ಧಕ ಬಳಸಿದ ವ್ಯಕ್ತಿಯನ್ನು ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಬಹುದಾಗಿದೆ.

  • ಧ್ವನಿವರ್ಧಕವನ್ನು ಪೊಲೀಸರ ಅನುಮತಿ ಬಳಿಕವೇ ಬಳಸಬೇಕು.
  • ಧ್ವನಿವರ್ಧಕವನ್ನು ರಾತ್ರಿ 10ರಿಂದ ಬೆಳಗ್ಗೆ 6ರವೆರೆಗೂ ಬಳಸುವಂತಿಲ್ಲ.
  • ರಾತ್ರಿ 10 ರಿಂದ 6ರವೆರೆಗೂ ಧ್ವನಿವರ್ಧಕವನ್ನು ಬಳಸಬೇಕಾದರೆ ಅನುಮತಿ ಇರುವುದು ಕ್ಲೋಸ್ ಏರಿಯಾದಲ್ಲಿ ಮಾತ್ರವೇ ಅಂದರೆ ಆಡಿಟೋರಿಯಂ, ಕಾನ್ಫರೆನ್ಸ್ ರೂಂ, ಇತರೆ ಹಾಲ್ ಗಳಲ್ಲಿ ಮಾತ್ರ.

ಈಗಾಗಲೇ ಅಳವಡಿಸಿರುವ ಧ್ವನಿವರ್ಧಕಗಳನ್ನು ಏನು ಮಾಡಬೇಕು..?

  1. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿದ್ದರೇ ಅರ್ಜಿಯೊಂದಿಗೆ 15 ದಿನಗಳಲ್ಲಿ ಅನುಮತಿ ಪಡೆಯಬೇಕು.
  2. ಯಾರು ಧ್ವನಿವರ್ಧಕ ಅಳವಡಿಸಲು ಅನುಮತಿ ಪಡೆದಿಲ್ಲವೋ ಅವರು ಸ್ವಯಂ ಪ್ರೇರಿತವಾಗಿ ಧ್ವನಿವರ್ಧಕ ತೆರವು ಮಾಡಬೇಕು. 15 ದಿನಗಳಲ್ಲಿಯೇ ತೆರವನ್ನು ಮಾಡಬೇಕು.
  3. ಸಮತಿಯು ಲೌಡ್ ಸ್ಪೀಕರ್ ಅಳವಡಿಕೆಯ ಅನುಮತಿ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತದೆ.(ಕಮಿಷನರೇಟ್ ಪ್ರದೇಶದಲ್ಲಿ ಎಸಿಪಿ , ಕಾರ್ಯಪಾಲಕ ಇಂಜಿನಿಯರ್ ಮತ್ತು ಪಲ್ಯೂಷನ್ ಕಂಟ್ರೋಲ್ ಬೋರ್ಡ್ ಸದಸ್ಯರು ಮತ್ತು ಜಿಲ್ಲೆಗಳಲ್ಲಿ ಡಿವೈಎಸ್ಪಿ, ತಹಸೀಲ್ದಾರ್, ಪಲ್ಯೂಷನ್ ಕಂಟ್ರೋಲ್ ಬೋರ್ಡ್ ಸದಸ್ಯರು ತೀರ್ಮಾನಿಸುತ್ತಾರೆ).
  4. ಧ್ವನಿವರ್ಧಕ ವಿಚಾರದಲ್ಲಿ ಸಿಕ್ಕಿಬಿದ್ದರೆ ದಂಡ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯಡಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

RELATED ARTICLES

Related Articles

TRENDING ARTICLES