ಬೆಂಗಳೂರು: ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಮಂಗಳವಾರ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಆಗಬೇಕಿದೆ. ಬೆಂಗಳೂರು ದೊಡ್ಡದಾಗಿ ಬೆಳೆದಿದೆ. ಕೆಲ ವಾರ್ಡ್‌ಗಳಲ್ಲಿ ಒಂದುವರೆ ಲಕ್ಷ ಜನರಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ವಾರ್ಡ್‌ಗಳು ಸಮನಾಗಿರಬೇಕು. ಹಾಗಾಗಿ ವಾರ್ಡ್ ಮರುವಿಂಗಡಣೆ ಮಾಡಲು ಸಮಯ ತೆಗೆದುಕೊಂಡಿದ್ದೆವು. ಈಗ ಚುನಾವಣೆಗೆ ನಾವು ಸಿದ್ದರಿದ್ದೇವೆ ಎಂದರು.
ಬಿಬಿಎಂಪಿ ಚುನಾವಣೆ ಸಂಬಂಧ ಪ್ರತ್ಯೇಕ ಕೇಸ್ ಇತ್ತು. ಲೀಸ್ಟ್ ಆಗಲು ಮೂರು ತಿಂಗಳು ಇತ್ತು. ಮಧ್ಯಪ್ರದೇಶ ಆದೇಶ ಆದ್ರೂ, ಎಲ್ಲಾ ರಾಜ್ಯಕ್ಕೂ ಅನ್ವಯ ಅಂತ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಎಲ್ಲಾ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಅಂತ ಹೇಳಲಾಗಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ನಡೆಸಲು ಸೂಚಿಸಿದೆ ಎಂದಿದ್ದಾರೆ.
ನಗರದ 198 ವಾರ್ಡ್ ಪ್ರಕಾರವೇ ನಡೆಯಬೇಕಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಈ ಬಗ್ಗೆ ಸಿಎಂ ಜೊತೆ ಮಾತಾಡ್ತೀನಿ. ನಾವಂತೂ ಕರ್ನಾಟಕ ಸರ್ಕಾರ ಚುನಾವಣೆ ಮಾಡಲು ತಯಾರಿದ್ದೇವೆ. ಚುನಾವಣೆ ಯಾವಾಗ ಬಂದ್ರೂ ಮಾಡಲು ಸಿದ್ಧ. ಆದರೆ, ಚುನಾವಣೆ ಘೋಷಣೆಯಾದ್ರೆ ಸರ್ಕಾರ ತಯಾರಿದೆ. ಬಿಜೆಪಿ ಕೂಡ ತಯಾರಿದೆ. ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ ಎಂದು ಸಚಿವ ಆರ್ ಅಶೋಕ್ ಅವರು ಮಾತನಾಡಿದರು.