Monday, December 23, 2024

ವೈನ್​ಶಾಪ್​ಗಳ ವಿರುದ್ಧ ಪಟ್ಟಣ ಪಂಚಾಯ್ತಿ ಸದಸ್ಯ ಸಮರ

ಹಾವೇರಿ : ವೈನ್ ಶಾಪ್​​ಗಳು ಗ್ರಾಹಕರಿಗೆ ಮೋಸ ಮಾಡುತ್ತೀವೆ ಎಂದು ಪಟ್ಟಣ ಪಂಚಾಯತಿ ಸದಸ್ಯರೊಬ್ಬರು ವಿನೂತನ ಪ್ರತಿಭಟನೆ ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಅಬಕಾರಿ ಇಲಾಖೆಯ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಸರ್ಕಾರದ ಗೈಡ್ ಲೈನ್ಸ್ ಪಾಲನೆ ಮಾಡದೇ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವ ಬಾರ್​​​ಗಳಿಗೆ ಬಿಸಿ ಮುಟ್ಟಿಸೋಕೆ ಈ ಸದಸ್ಯ ಹೋರಾಟಕ್ಕೆ ಮುಂದಾಗಿದ್ದು, ರಮೇಶ್ ತೋರಣಗಟ್ಟಿ ಎಂಬುವವರು ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಪೋಟೊ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.

ರಮೇಶ್​​ ತೋರಣಗಟ್ಟಿ ಅವರು ಕಳೆದ ಒಂದು ವಾರದಿಂದ ಹಿರೇಕೇರೂರು ಅಬಕಾರಿ ಆಫೀಸ್ ಮುಂದೆ ಧರಣಿಗೆ ಕುಳಿತಿದ್ದಾರೆ. ಪ್ರತಿಭಟನೆಗೆ ಕಾರಣವೇನು ಅಂತಾ ತಿಳಿದಿರಿ ತಮಾಷೆ ಅಂತಾ ಅನ್ನಿಸಬಹುದು. ಇವರು ಮಧ್ಯದ ದರ ಹೆಚ್ಚಳ ಖಂಡಿಸಿ ಈ ರೀತಿ ಧರಣಿಗೆ ಕುಳಿತಿದ್ದಾರೆ. ಇದೀಗ ತಾಲ್ಲೂಕು ಅಲ್ಲದೇ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾರೆ.

ಸಿಎಲ್ – 2 ಲೈಸೆನ್ಸ್ ಹೊಂದಿದ ವೈನ್ ಶಾಪ್​​ಗಳು, ಸರ್ಕಾರ ನಿಗದಿಪಡಿಸಿದ ದರಗಿಂತ ಹೆಚ್ಚಿನ ಹಣಕ್ಕೆ ಮಾರಾಟಕ್ಕೆ ಮಾರುತ್ತಿದ್ದಾರೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಬ್ಯುಸಿನೆಸ್​​ ಮಾಡ್ತಾ ಇದಾರೆ ಎಂದು ಆರೋಪಿಸಿದರು.

ಇನ್ನು ತಾಲೂಕಿನಲ್ಲಿ ಒಟ್ಟು 16 ಸಿಎಲ್-2 ವೈನ್ ಶಾಪ್​​ಗಳಿವೆ. ಎಲ್ಲಿಯೂ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ರಮೇಶ್ ಅವರ ಆರೋಪ.ಈ ಹಿಂದೆಯೂ ಇಲಾಖೆಗೆ ಹಲವು ಬಾರಿ ದೂರುಗಳನ್ನು ನೀಡಿದ್ದಾರೆ.ಆದರೆ, ಯಾವುದೇ ಪ್ರಯೋಜನವಾಗದ ಕಾರಣ ಅಧಿಕಾರಿಗಳ ಹಾಗೂ ಸಮಾಜದ ಗಮನ ಸೆಳೆಯಲು ಮೆಂಬರ್ ರಮೇಶ್‌ ಹೋರಾಟ ಮಾಡುತ್ತಿದ್ದಾರೆ.ಇದು ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ ನೀವು ಇಲ್ಲಿಂದ ಎದ್ದು ಹೋಗಿ ಎಂದು ಅಧಿಕಾರಿಗಳು ಇವರಿಗೆ ಹೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನ್ಯಾಯ ಸಿಗುವವರೆಗೂ ಹೋಗೊದಿಲ್ಲಾ ಎಂದಿದ್ದಕ್ಕೆ ಇವರ ವಿರುದ್ದ ಪೋಲಿಸರಿಗೆ ದೂರು ನೀಡಲಾಗಿದೆ.

ಸರ್ಕಾರಕ್ಕೆ ಅತಿಹೆಚ್ಚು ಆದಾಯ ತರುವಲ್ಲಿ ಮೊದಲ ಇಲಾಖೆ ಎಂದರೆ ಅದು ಅಬಕಾರಿ ಇಲಾಖೆ. ಆದರೆ, ರೂಲ್ಸ್ ಎಂಬ ವಿಚಾರಕ್ಕೆ ಬಂದರೆ ಎಲ್ಲರಿಗೂ ಒಂದೇ ನ್ಯಾಯ ಒಂದೇ ಕಾನೂನು.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇವರ ಅಹವಾಲು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES