Monday, December 23, 2024

ಖಾನ್ ಜೊತೆ ರಣ್​ವೀರ್ ಕೂಡ ಯಶ್​ಗೆ ಬೋಲ್ಡ್

ಭಾಯ್.. ಭಾಯ್.. ಭಾಯ್.. ಎಲ್ಲೆಲ್ಲೂ ರಾಕಿಭಾಯ್​ದೇ ಹವಾ. ಅದ್ರಲ್ಲೂ ಬಾಲಿವುಡ್ ಸೂಪರ್ ಸ್ಟಾರ್ಸ್​ ಅಂತೂ ನಮ್ಮ ನ್ಯಾಷನಲ್ ಸ್ಟಾರ್ ಯಶ್ ಸ್ಟೈಲು ಮ್ಯಾನರಿಸಂಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಮೊನ್ನೆ ಆಮೀರ್ ಖಾನ್ ಕೆಜಿಎಫ್ ಬಗ್ಗೆ ಮಾತನಾಡಿದ್ರು. ಇದೀಗ ರಣ್​ವೀರ್ ಸಿಂಗ್ ನೀಡಿರೋ ಸ್ಟೇಟ್​ಮೆಂಟ್ ಕೇಳಿದ್ರೆ ನೀವು ಶಾಕ್ ಆಗ್ತೀರಾ.

  • ಖಾನ್ ಜೊತೆ ರಣ್​ವೀರ್ ಕೂಡ ಯಶ್​ಗೆ ಬೋಲ್ಡ್
  • ಕೆಜಿಎಫ್ ಜೊತೆ ರಾಕಿಭಾಯ್ ಸ್ಟೈಲ್​ಗೆ ಸಿಂಗ್ ಫಿದಾ
  • ಮಾನ್​ಸ್ಟರ್ ರಾಕಿಭಾಯ್ ಅವತಾರದಲ್ಲಿ ರಣ್​ವೀರ್
  • 25 ದಿನ ಕಂಪ್ಲೀಟ್.. ಪ್ರತೀ ದಿನ ನೂತನ ದಾಖಲೆ..!

ಕೆಜಿಎಫ್ ಅನ್ನೋ ತೂಫಾನ್ ಹಾಲಿವುಡ್ ಸಿನಿಮಾಗೇ ಚಮಕ್ ಕೊಡ್ತಿದೆ ಅಂದ್ರೆ ಅದ್ರ ಕ್ರೇಜ್, ಮೇಕಿಂಗ್ ಮಸಲತ್ತು ಎಂಥದ್ದು ಅನ್ನೋದನ್ನ ನೀವೇ ಊಹಿಸಿ. ಯೆಸ್.. ಸದ್ಯ ಭಾರತೀಯ ಚಿತ್ರರಂಗ ಅಂದ್ರೆ ಯಶ್ ಅಂತಾರೆ. ಕೆಜಿಎಫ್ ಅಂತಾರೆ. ಇಡೀ ವಿಶ್ವವೇ ನಮ್ಮ ಸಿನಿಮಾನ ಕೊಂಡಾಡ್ತಿದೆ. ಒಂದ್ಕಡೆ ಬಾಕ್ಸ್ ಆಫೀಸ್ ಸೌಂಡ್, ಮತ್ತೊಂದ್ಕಡೆ ರಾಕಿಭಾಯ್ ಸ್ವ್ಯಾಗ್ ಟ್ರೆಂಡ್.

ಅಬ್ಬಬ್ಬಾ.. ಈ ಸಿನಿಮಾದಲ್ಲಿನ ಯಶ್ ಸ್ಟೈಲು ಮ್ಯಾನರಿಸಂಗೆ ಸ್ಟೈಲ್ ಕಾ ಬಾಪ್ ಅನಿಸಿಕೊಂಡ ಸೂಪರ್ ಸ್ಟಾರ್​ಗಳೇ ಫಿದಾ ಆಗಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಯಶ್ ಮ್ಯಾನರಿಸಂ ಕ್ಯಾರಿ ಆಗಿದೆ. ಬಾಲಿವುಡ್ ಸ್ಟಾರ್ಸ್​ ಅಂತೂ ಹೊಟ್ಟೆ ಉರಿದುಕೊಳ್ತಿದ್ದಾರೆ. ಆ ರೀತಿಯ ಪಾತ್ರಗಳು, ಕಥೆ ಹಾಗೂ ಮೇಕಿಂಗ್ ಮಾಡಿದ್ದಾರೆ ನಮ್ಮ ಮಾನ್​ಸ್ಟರ್ ಡೈರೆಕ್ಟರ್ ನೀಲ್.

ಯಶಸ್ವೀ 25 ದಿನ ಪೂರೈಸಿರೋ ಕೆಜಿಎಫ್ ಚಾಪ್ಟರ್-2, ಪ್ರತೀ ದಿನ ಒಂದಿಲ್ಲೊಂದು ನೂತನ ದಾಖಲೆ ಬರೆಯುತ್ತಲೇ ಇದೆ. ಭಾರತೀಯ ಚಿತ್ರರಂಗವನ್ನ ಕೆಜಿಎಫ್​ಗೂ ಮುನ್ನ, ಕೆಜಿಎಫ್​ನ ನಂತ್ರ ಅಂತ ವಿಭಾಗಿಸಿ ನೋಡೋ ರೇಂಜ್​ಗೆ ಹವಾ ಇಟ್ಟಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್.

ರೀಸೆಂಟ್ ಆಗಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್, ತಮ್ಮ ಲಾಲ್​​ಸಿಂಗ್ ಚಡ್ಡಾ ಸಿನಿಮಾನ ಕೆಜಿಎಫ್ ಎದುರು ರಿಲೀಸ್ ಮಾಡೋಕೆ ಭಯ ಆಗಿದ್ದು ನಿಜ. ಹಾಗಾಗಿಯೇ ರಿಲೀಸ್​ ಡೇಟ್​ನ ಮುಂದೂಡಿದ್ವಿ ಅಂತ ಬಹಿರಂಗವಾಗಿ ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ರು. ಅಲ್ಲಿಗೆ ನಮ್ಮ ಕೆಜಿಎಫ್​ಗೆ ಹೆದರಿದ್ದು ಅಕ್ಷರಶಃ ನಿಜ ಅನ್ನೋದು ಅವ್ರೇ ಒಪ್ಪಿಕೊಂಡಾಯ್ತು.

ಇದೀಗ ರಣ್​ವೀರ್ ಸಿಂಗ್ ಕೂಡ ನಮ್ಮ ಕೆಜಿಎಫ್ ಸಿನಿಮಾ ಹಾಗೂ ಯಶ್​ ಬಗ್ಗೆ ಕೊಂಡಾಡಿದ್ದಾರೆ. ಒಬ್ಬನೇ ಕೂತು ಸಿನಿಮಾ ನೋಡಿ ಚಪ್ಪಾಳೆ ತಟ್ಟುತ್ತೀನಿ ಅಂದಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡಿದಾಗ ನನಗೆ ತುಂಬಾ ಖುಷಿ ಆಯ್ತು. ಅದ್ಭುತ ಅನಿಸಿತು. ಸಿನಿಮಾ ಪೂರ ‘ಯಶ್ ಅವನನ್ನ ಕೊಂದುಬಿಡು’ ಅಂತಿದ್ದೆ. ಇಂತಹ ಚಿತ್ರಗಳು ನನ್ನ ಫಸ್ಟ್ ಲವ್ ಅಂತೆಲ್ಲಾ ವೇದಿಕೆಯೊಂದರಲ್ಲಿ ಗುಣಗಾನ ಮಾಡಿದ್ದಾರೆ.

ರೀಸೆಂಟ್ ಆಗಿ ತಮ್ಮ ಜೋರ್​ದಾರ್ ಸಿನಿಮಾದ ಪ್ರಮೋಷನ್ಸ್ ವೇಳೆ ಕೆಜಿಎಫ್ ಹೀರೋ ತರಹ ಌಕ್ಷನ್ ಹೀರೋ ಆಗೋಣ ಅಂದ್ಕೊಂಡೆ. ಆದ್ರೆ ಜಿಎಫ್ ಇರಲಿಲ್ಲ ನನಗಿಲ್ಲಿ. ಮಗು ಇದೆ ಅಂತೆಲ್ಲಾ ಶಾಕಿಂಗ್​ ಸ್ಟೇಟ್​ಮೆಂಟ್ ನೀಡಿದ್ರು ದೀಪಿಕಾ ಪತಿ ರಣ್​ವೀರ್ ಸಿಂಗ್.

ಇವೆಲ್ಲದರ ಹೊರತಾಗಿ ರಾಕಿಭಾಯ್ ವೈಬ್ಸ್ ಅಂತ ಸದಾ ಡಿಫರೆಂಟ್ ಕಾಸ್ಟ್ಯೂಮ್ಸ್​ನಿಂದ ಮಿಂಚೋ ರಣ್​ವೀರ್, ಯಶ್ ರೀತಿ ಫೋಟೋಶೂಟ್ ಮಾಡಿಸಿ, ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ರಣ್​ವೀರ್ ಸಿಂಗ್ ಅಂತಹ ಸೂಪರ್ ಸ್ಟಾರ್​​ಗಳನ್ನ ಇಂಪ್ರೆಸ್ ಮಾಡ್ತಿದ್ದಾರೆ ನಮ್ಮ ನ್ಯಾಷನಲ್ ಸ್ಟಾರ್ ಅಂದ್ರೆ ಕೆಜಿಎಫ್ ಸಿನಿಮಾ ಇನ್ಯಾವ ಪರಿ ಎಲ್ಲರನ್ನ ಗುಂಗಿಡಿಸಿರಬೇಕು ಅಲ್ಲವೇ. ಒಟ್ಟಾರೆ ನಮ್ಮ ಕೆಜಿಎಫ್ ನಮ್ಮ ಹೆಮ್ಮೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES