Monday, December 23, 2024

ಹಿಂದೂಗಳ ವೋಟ್‌ಗೆ ಬಿಜೆಪಿ ಬದ್ದರಾಗಿರಿ : ಪ್ರಮೋದ ಮುತಾಲಿಕ್​

ಧಾರವಾಡ : ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ ಹೀಗಾಗಿ ನಮ್ಮ ಸುಪ್ರಭಾತ ಅಭಿಯಾನ ಮುಂದುವರೆಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ ಹೀಗಾಗಿ ನಮ್ಮ ಸುಪ್ರಭಾತ ಅಭಿಯಾನ ಮುಂದುವರೆಸುತ್ತೇವೆ. ಬೇರೆ ಬೇರೆ ಜಿಲ್ಲೆಯ ದೇವಸ್ಥಾನಗಳಲ್ಲಿ ನಿನ್ನೆ ಮಾಡಲು ಆಗಿಲ್ಲ. ಅಲ್ಲೆಲ್ಲಾ ಮುಂದುವರೆಸುತ್ತೇವೆ. ನ್ಯಾಯಾಂಗ ನಿಂದನೆ ಕೇಸ್ ಸಹ ಹಾಕುತ್ತೇವೆ. ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿದೆ. ಸಿಎಂ, ಗೃಹ ಮಂತ್ರಿ, ರಾಜ್ಯ ಕಾರ್ಯದರ್ಶಿ, ಎಲ್ಲ ಜಿಲ್ಲಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲಾಗಿದ್ದು, ಸರ್ಕಾರ ಕೂಡಲೇ ಕ್ರಮ‌ಕೈಗೊಳ್ಳಬೇಕು ಎಂದರು.

ಅದುವಲ್ಲದೇ, ಯುಪಿಯಲ್ಲಿ ತೀರ್ಪಿನ ಮರುದಿನವೇ 40 ಸಾವಿರ ಮೈಕ್ ಇಳಿಸಿದ್ದಾರೆ. ತೀರ್ಪು ಕೊಟ್ಟ ಮರುದಿನವೇ ಮಾಡಿದ್ದಾರೆ. ಆದರೆ 15 ವರ್ಷ ಆದರೂ ಯೋಜನೆ, ಯೋಚನೆ ಅಂತಿದ್ದಾರೆ. ಇಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು. ಮೀನಮೇಷ ಎಣಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇನ್ನು, ಮುಸ್ಲಿಂರಿಗೆ ಹೆದರಬೇಕಾಗಿಲ್ಲ. ನಾವೂ ಸರ್ಕಾರದ ಜೊತೆ ಇದ್ದೇವೆ. ಕೋರ್ಟ್ ಆದೇಶ ಪಾಲನೆ ಸರ್ಕಾರದ ಕರ್ತವ್ಯ. ಅದನ್ನು ವಿರೋಧಿಸುವವರ ಮೇಲೆ ಕ್ರಮಕೈಗೊಳ್ಳಲಿ ಮುಸ್ಲಿಂ ಅಂದ್ರೆ ಹೆದರೋದು. ಓಲೈಕೆ ಮಾಡುವುದು ಎಲ್ಲ ಪಕ್ಷದಲ್ಲಿ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಈ ಮಾನಸಿಕತೆ ಬಹಳ ಡೆಂಜರ್, ಬಿಜೆಪಿಯದ್ದು ಈ ಮಾನಸಿಕತೆ ಸರಿಯಲ್ಲ. ಸುಪ್ರಿಂಕೋರ್ಟ್ ಆದೇಶ ಹಿಡಿದುಕೊಂಡು ನಂಜನಗೂಡು ದೇವಸ್ಥಾನ ಒಡೆದು ಹಾಕಿದ್ರಿ. ಅದೇ ನಿಲುವು ಮೈಕ್ ವಿಷಯದಲ್ಲಿ ಯಾಕಿಲ್ಲ. ಹಿಂದೂಗಳ ದೇವಸ್ಥಾನ ಬೇಕಾದ್ದು ಮಾಡಬಹುದಾ? ಹಿಂದೂಗಳ ವೋಟ್‌ಗೆ ಬಿಜೆಪಿ ಬದ್ದರಾಗಿರಬೇಕು. ಹಿಂದೂತ್ವಕ್ಕಾಗಿಯೇ ಬಿಜೆಪಿ ಆರಿಸಿದ್ದು ಎಂದು ಹೇಳಿದರು.

RELATED ARTICLES

Related Articles

TRENDING ARTICLES