Thursday, January 23, 2025

ಲಖನೌಗೆ ಇಂದು ಗುಜರಾತ್​ ಟೈಟಾನ್​ ಮುಖಾಮುಖಿ

15ನೇ ಆವೃತ್ತಿಯ IPL ಲೀಗ್​​ನ 57ನೇ ಪಂದ್ಯದಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿಯಾಗಲಿದೆ.

ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿರುವ ಲಖನೌ ಹಾಗೂ ಎರಡನೇ ಸ್ಥಾನದಲ್ಲಿರುವ ಗುಜರಾತ್ ನಡುವಿನ ಸೆಣೆಸಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಹಾರ್ದಿಕ್ ಪಡೆ ಆಡಿರುವ 11 ಪಂದ್ಯ ಗಳಲ್ಲಿ 8 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ ಒಟ್ಟಾರೆ 16 ಪಾಯಿಂಟ್ಸ್ ಕಲೆಹಾಕಿದೆ. ಇಷ್ಟೇ ಪ್ರಮಾಣದಲ್ಲಿ ಪಾಯಿಂಟ್ಸ್ ಕಲೆ ಹಾಕಿರುವ ರಾಹುಲ್ ಪಡೆ ಗುಜರಾತ್​​​​ಗಿಂತ ನೆಟ್​​ರನ್​​ ರೇಟ್​​ನಲ್ಲಿ ಭಾರೀ ಅಂತರ ಸಾಧಿಸಿರೋದ್ರಿಂದ ಅಗ್ರಸ್ಥಾನದಲ್ಲಿದೆ.

RELATED ARTICLES

Related Articles

TRENDING ARTICLES