Saturday, November 2, 2024

ಡಿಕೆಶಿಯಂತಹ ನೂರು ಜನ ಬಂದ್ರು ನನಗೆ ಮಸಿ ಬಳಿಯಲು ಆಗಲ್ಲ – ಸಚಿವ ಅಶ್ವತ್ಥ್​ ನಾರಾಯಣ್

ರಾಮನಗರ : ನಮಗೆ ಗೌರವ ಹೆಚ್ಚಿಸುವ ರೀತಿ ಮೊದಲು ಕರ್ನಾಟಕದಿಂದ ತಿಹಾರ್ ಜೈಲಿಗೆ ಹೋಗಿದ್ದು ಡಿ.ಕೆ.ಶಿವಕುಮಾರ್ ಎಂದು ಸಚಿವ ಸಿ.ಎನ್​ ಅಶ್ವತ್ಥ್​ ನಾರಾಯಣ್​ ವ್ಯಂಗವಾಡಿದ್ದಾರೆ.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರನ್ನು ಟಾರ್ಗೆಟ್ ಮಾಡುವುದಿಲ್ಲ, ಅದೊಂದು ಜೈಲು ಹಕ್ಕಿ ಈಗ ಬೇಲ್​ನಲ್ಲಿ ಆಚೆ ಇದೆ. ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಡಿ.ಕೆ ಶಿವಕುಮಾರ್. ಅವರು ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಡಿಕೆಶಿ ಎಂದರು.

ಅಷ್ಟೇಅಲ್ಲದೇ ಜೈಲಿನ ಹಕ್ಕಿಗೆ ಯಾವುದೇ ರೂಪುರೇಷೆ ಮಾಡಬೇಕಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಸಿಕ್ಕಿದ್ದೆಲ್ಲಾ ಲೂಟಿ ಹೊಡೆಯೋದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಆಗಿದೆ. ತಾವು ಗಲೀಜು ಇನ್ನೊಬ್ಬರ ಮೇಲೂ ಮಸಿ ಬಳಿಯಲು ಪ್ರಯತ್ನ ಮಾಡಿದ್ದಾರೆ. ಹಣಕ್ಕೆ, ಅಧಿಕಾರಕ್ಕೆ, ಕುಟುಂಬ ರಾಜಕಾರಣಕ್ಕೆ ಬಂದಿಲ್ಲ. ಜನರಿಗಾಗಿ ಬಂದಿರುವವನು, ಸ್ಪಷ್ಟತೆ ಇದೆ. ಅಲ್ಲದೇ ನಾನು ರಾಜಕೀಯಕ್ಕೆ ಬಂದಿರೋದು ಕೊಡೋದಕ್ಕೆ, ಹೊರತು ಅವರ ಹಾಗೇ ತಗೊಳ್ಳಿಕ್ಕೆ ಅಲ್ಲ. ಇಂತಹ ನೂರು ಜನ ಹುಟ್ಟಿ ಬಂದರೂ, ನನಗೆ ಮಸಿ ಬಳಿಯಲು ಆಗುವುದಿಲ್ಲ. ಸ್ವಲ್ಪ ಆದರೂ ಮಾನ ಮರ್ಯಾದೆ ಇದ್ದರೆ ದಾಖಲೆ ಬಿಡುಗಡೆ ಮಾಡಲಿ. ಪಕ್ಷಕ್ಕಾದರೂ ಮಾನ ಮರ್ಯಾದೆ ಬೇಡ್ವಾ? ಎಂದು ಗುಡುಗಿದರು.

ಮಾನ ಮರ್ಯಾದೆ ಇಲ್ಲದೇ ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ಹೊರಟ್ಟಿದ್ದಾರೆ ಇದು ಎಷ್ಟು ಸರಿ(?) ಸಿದ್ದರಾಮಯ್ಯ ಜೈಲಿಗೆ ಹೋದವರು ಅಂತಾರೆ. ಆದರೆ, ಅವರ ಅಧ್ಯಕ್ಷನೇ ಜೈಲಿಗೆ ಹೋದವನು, ಬೆಳಗ್ಗೆ ಎದ್ದರೆ ಏನ್ ಸಿಗುತ್ತೆ ಜೇಬಿಗೆ ಕೈ ಹಾಕೋಣ, ಲೂಟಿ ಮಾಡೋಣ ಅಂತಾ ಇರಬಾರದು. ರಾಜಕಾರಣಿ ಅಂದರೆ ಸ್ವಲ್ಪವಾದರೂ ಗೌರವ ಇರಬೇಕು. ಜೈಲು ಹಕ್ಕಿಯ ಮಾತನ್ನ ಯಾರು ನಂಬೋದಿಲ್ಲ, ಕೇಳೋದು ಇಲ್ಲ ಎಂದು ಸಚಿವ ಡಾ.ಸಿ.ಎನ್​ ಅಶ್ವತ್ಥ್​ ನಾರಾಯಣ್ ಅವರು ಡಿಕೆಶಿ ಹಾಗೂ ಅವರ ಪಕ್ಷದ ವಿರುದ್ಧ ಗುಡುಗಿದರು.

RELATED ARTICLES

Related Articles

TRENDING ARTICLES