ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಒಂದುವಾರದಿಂದ ಮಳೆರಾಯ ಬಿಟ್ಟು ಬಿಡದೆ ಕಾಡ್ತಿದೆ. ಇತ್ತ ಆಸಾನಿ ಚಂಡಮಾರುತ ಎಫೆಕ್ಟ್ನಿಂದ ಬೆಳಗ್ಗೆಯಿಂದ ರಾಜಧಾನಿಯಲ್ಲಿ ಮೋಡಕವಿದ ವಾತಾವರಣ ಜೊತೆ ಮಳೆ ಬಿಳ್ತಿದೆ. ಇನ್ನೂ ಎರಡು ದಿನಗಳ ಕಾಲ ನಗರದಲ್ಲಿ ಗುಡುಗು ಮಿಂಚು ಸಹಿತ ಬಾರಿ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.
ಆಸಾನಿ ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ಭಾರಿ ಗಾಳಿ ಸಹಿತ ಮಳೆಯಾಗುತ್ತಿದೆ. ಇಂದು ನಗರದಲ್ಲಿ ಬೆಳಗ್ಗೆಯಿಂದ ಮೋಡಕವಿದ ವಾತಾವರಣ ಜೊತೆಗೆ ಮಳೆ ಆಬ್ಬರ ಜೋರಾಗಿತ್ತು. ರಾಜಾಜಿನಗರ, ಶಿವಾಜಿನಗರ, ಮೆಜೆಸ್ಟಿಕ್, ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಮಳೆಯಿಂದ ವಾಹನಸವಾರರಂತೂ ಹೈರಾಣಗಿ ಹೋಗಿದ್ರು. ಮತ್ತೆ ಕೆಲ ಜನರು ಛತ್ರಿಯನ್ನ ಅವಲಂಬಿಸಿದ್ರು. ಮತ್ತೊಂದು ಕಡೆ ಬಿಸಿಲಿನಿಂದ ಬಳಲಿದ ಸಿಟಿ ಜನರು ಈ ವೆದರ್ ಎಂಜಾಯ್ ಮಾಡಿದ್ರು.
ಇನ್ನೂ ಈ ಬಗ್ಗೆ ಮಾತನಾಡಿದ ಹವಮಾನ ಇಲಾಖೆ ವಿಜ್ಞಾನಿ ಪ್ರಸಾದ್, ಅಸಾನಿ ಚಂಡಮಾರುತ ಈಗ ತೀವ್ರ ಚಂಡಮಾರುತ ಆಗಿದೆ. ಬೆಂಗಳೂರಿನಲ್ಲಿ ಇನ್ನೇರಡು ದಿನ ಗುಡುಗು ಹಾಗೂ ಮಿಂಚಿನ ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ಬೆಂಗಳೂರಿನ ಮೇಲೆ ಅಸಾನಿ ಚಂಡಮಾರುತ ಎಫೆಕ್ಟ್ ಜಾಸ್ತಿ ಇದಿದೆ. ಇನ್ನೂ ಸೈಕ್ಲೋನ್‌ನಿಂದಲೇ ಬೆಂಗಳೂರಿನಲ್ಲಿ ಕ್ಲೌಡ್ ಇದೆ. ನಾಳೆಯೂ ವೆದರ್ ಹೀಗೇ ಇರಲಿದೆ ಎಂದು ಹೇಳಿದ್ರು.
ಇತ್ತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ ಬೀದರ್ನಲ್ಲಿ ಇಂದು ರಾತ್ರಿ ಭಾರಿ ಮಳೆ ಆಗುವ ಸಾಧ್ಯತೆ ಇದಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ.
ಒಟ್ನಲ್ಲಿ ಬೆಂಗಳೂರು ಮಂದಿಗೆ ಇನ್ನೇರಡು ದಿನ ಮಳೆರಾಯನ್ನ ಕಾಟ ಇರಲಿದೆ.ಆದ್ರೆ ಜಾಸ್ತಿ ಮಳೆ ಆದ್ರೆ ತಗ್ಗು ಪ್ರದೇಶದ ಜನರಿಗೆ ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಮನೆಗಳಿಗೆ ಟೆನ್ಷನ್ ಜಾಸ್ತಿಯಾಗಿದ್ದು, ಮತ್ತೇನು ಅವಘಡ ಸೃಷ್ಟಿ ಆಗುತೋ ಎಂಬ ಭಯ ನಿರ್ಮಾಣವಾಗಿದೆ.