Monday, December 23, 2024

ತಿಪ್ಪೆಗಾಗಿ ಜಗಳ : ಏಳು ಮಂದಿ ಮೇಲೆ ಎಫ್​ಐಆರ್​

ಮೈಸೂರು: ಕಸದ ತಿಪ್ಪೆ ತೆರವು ವಿಚಾರದಲ್ಲಿ ಅಧಿಕಾರಿಗಳ ಹೈಡ್ರಾಮ ನಡೆದಿದ್ದು, ಒಂದೇ ಕುಟುಂಬದ 7 ಮಂದಿ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿ‌ನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ಪೌರ ಕಾರ್ಮಿಕ ಮುರುಗನ್​​ಗೆ ಸೇರಿದ ನಿವೇಶನದ ಮುಂದೆ ಅದೇ ಊರಿನ ಶಿವಕುಮಾರ್ ಎಂಬುವರರ ಕುಟುಂಬ ಪ್ರತಿದಿನವೂ ಮುರುಗನ್​ ಮನೆ ಮುಂದೆ ಕಸವನ್ನು ಸುರಿಯುತ್ತಿದ್ದರು.

ಮನೆ ಮುಂದೆ ಹಾಕಿರುವ ಕಸದ ತಿಪ್ಪೆಯನ್ನು ತೆರವು ಮಾಡಿಸಿಕೊಂಡವಂತೆ ಬಿಳಿಗೆರೆ ಗ್ರಾಮಪಂಚಾಯ್ತಿ ಸದಸ್ಯ ಶಿವರಾಜ್​ ಎಂಬವವರ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಪರಿಣಾಮ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ದೊಡ್ಡ ಹೈಡ್ರಾಮವೇ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಬಿಳಿಗೆರೆ ಪೊಲೀಸ್​ ಠಾಣೆ ಪೋಲಿಸರು ಶಿವಕುಮಾರ್ ಸೇರಿದಂತೆ ಏಳು ಜನರ ಮೇಲೆ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES