Monday, December 23, 2024

ಫೈವ್ ಸ್ಟಾರ್ ಹೋಟೆಲ್​ನಲ್ಲಿ ಕಳ್ಳತನಕ್ಕೆ ಸ್ಕೆಚ್​..!

ಬೆಂಗಳೂರು: ಕಳೆದ ಭಾನುವಾರ ಮಧ್ಯರಾತ್ರಿ 12.30ರ ಸಮಯ. ಬೆಂಗಳೂರಿನಲ್ಲಿ ಜೋರಾದ ಗಾಳಿ, ತುಂತುರು ಮಳೆ. ಅದೇ ತುಂತುರು ಮಳೆಯಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಮಾಡ್ಕೊಂಡು ಕೊಳ್ಳಿ ದೆವ್ವದಂತೆ ಬಂದ ಕಿಲಾಡಿ ಕಳ್ಳ, ಅಭಿಷೇಕ್ ಎಂಬುವರ ಫೈವ್ ಸ್ಟಾರ್ ಚಿಕನ್ ಸೆಂಟರ್​ಗೆ ಸ್ಕೆಚ್ ಹಾಕಿದ್ದ. ಅಂಗಡಿ ಮೇಲಿದ್ದ ಸೀಟ್ ಹೊಡೆದು, ಪಿಓಪಿ ಕಟ್ ಮಾಡಿ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಆತ ಸೀಟ್ ಹೊಡೆದು ಒಳ ಬರ್ತಿದ್ದಂತೆ ಮಳೆ ಹನಿ ಕೂಡ ಬೀಳತೊಡಗಿತು.

ಸೀಟ್ ಹೊಡೆದು ಬಂದ ಆಸಾಮಿಗೆ ತಕ್ಷಣ ಸಿಸಿಟಿವಿ ಇರೋದು ಕಂಡಿದೆ. ತಕ್ಷಣ ಮಾಸ್ಕ್ ನಿಂದ ಮುಖ ಮುಚ್ಕೊಂಡು ಕ್ಯಾಶ್ ಕೌಂಟರ್ ಹುಡುಕಾಡಿದ್ದ. ಆದ್ರೆ, ಆತ ಅಂದುಕೊಂಡಷ್ಟು ಹಣ ಆ ಕ್ಯಾಶ್ ಕೌಂಟರ್​ನಲ್ಲಿ ಇರಲಿಲ್ಲ. ಇದ್ದ ಸಾವಿರ ರೂಪಾಯಿ ಚಿಲ್ಲರೆ ಹಣ ಜೇಬಿಗಿಳಿಸಿಕೊಂಡಿದ್ದ. ಬರೋದು ಬಂದಿದಿನಿ, ಚಿಕನ್ ಆದ್ರು ಸಿಕ್ರೆ. ಟೇಸ್ಟಿ ಚಿಕನ್ ತಿಂದು ಹೊಟ್ಟೆ ತುಂಬಿಸಿಕೊಳ್ಳೋಣ ಅಂತಾ ಕಿಚನ್ ಎಲ್ಲಾ ಹುಡುಕಾಡಿದ್ದಾನೆ. ಆದ್ರೆ ಆತನಿಗೆ ಚಿಕನ್​ ಸಿಗಲಿಲ್ಲ. ರಾತ್ರಿ 10.30ಕ್ಕೆ ಅಂಗಡಿ ಕ್ಲೋಸ್ ಮಾಡಿ ಹೋಗಿದ್ದ ಮಾಲೀಕ, ಬೆಳಗ್ಗೆ ಬಂದು ಓಪನ್ ಮಾಡಿದಾಗ ವಿಚಾರ ಗೊತ್ತಾಗಿದೆ.

ವಿಷಯ ಗೊತ್ತಾಗ್ತಿದ್ದಂತೆ ಅಂಗಡಿ ಮಾಲೀಕ ಬ್ಯಾಡರಹಳ್ಳಿ ಪೊಲೀಸಿರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಬಂದು ಮಾಹಿತಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES