ಚಿಕ್ಕೋಡಿ : ಸಚಿವ ಅಶ್ವತ್ಥನಾರಾಯಣ್ ಅವರನ್ನ ಯಾರು ಎನು ಮಾಡಲು ಸಾಧ್ಯವಿಲ್ಲ ಅಶ್ವತ್ಥನಾರಾಯಣ್ ಪವರ್ ಫುಲ್ ವ್ಯಕ್ತಿ ಪಿಎಸ್ಐ ಅಕ್ರಮದಲ್ಲಿ ಅವರು ಭಾಗಿ ಆಗಿಲ್ಲ ಅವರು ಕ್ಲೀನ್ ಹ್ಯಾಂಡ್ ಚಿಕ್ಕೋಡಿಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಅಶ್ವತ್ಥನಾರಾಯಣ ರಕ್ಷಣೆಗೋಸ್ಕರ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ. ಯಾರಾರು ಯಾರನ್ನ ಭೇಟಿ ಮಾಡಿದ್ರೆ ನಿವ್ಯಾಕೆ ತಲೆ ಕೆಡಸ್ಕೋತಿರಾ..? ರಾಜಕೀಯದಲ್ಲಿ ಎಲ್ಲರೂ ಒಂದೆ. ಮಂತ್ರಿಗಳು ಯಾರನ್ನು ಭೇಟಿ ಮಾಡಬಾರದಾ ಎಂದು ಅವರು ಮಾಧ್ಯಮದವರಿಗೆ ಪ್ರಶ್ನಿಸಿದರು.
ಅದುವಲ್ಲದೇ, ಯಾರಾದರೂ ನಟೋರಿಯಸ್ನ ಭೇಟಿ ಮಾಡಿದ್ರೆ ಯಾಕೆ ಭೇಟಿ ಮಾಡಿದ್ರಿ ಅಂತ ಕೇಳಿ ಎಂಬಿ ಪಾಟೀಲ್ ಕಾಂಗ್ರೆಸ್ ಪಕ್ಷ ಮುಖಂಡರು, ಅಶ್ವತ್ಥನಾರಾಯಣ ನಮ್ಮ ಮುಖಂಡರು ಶಿಕ್ಷಣ ಮಂತ್ರಿಯಾಗಿ ಅಶ್ವತ್ಥನಾರಾಯಣ ಕ್ರಾಂತಿಕಾರಿ ಕೆಲಸಗಳನ್ನ ಮಾಡುತ್ತಿದ್ದಾರೆ. ಅವರೊಬ್ಬ ಬಹಳಷ್ಟು ಪವರ್ ಫುಲ್ ವ್ಯಕ್ತಿ ಅವರಿಗೆ ಯಾರದು ರಕ್ಷಣೆ ಬೇಕಿಲ್ಲ, ರಕ್ಷಣೆ ನೀಡಲು ನಮ್ಮ ಪಕ್ಷ ಇದೆ ಅವರೇನು ತಪ್ಪು ಮಾಡಿಲ್ಲ ಅವರ ಹತ್ತಿರ ಯಾಕೆ ರಕ್ಷಣೆ ಕೇಳುತ್ತಾರೆ. ರಾಷ್ಟ್ರೀಯ ಪಕ್ಷ ಶಾಸಕರು ಮಂತ್ರಿಯಾಗಿದ್ದಾರೆ, ಬೇರೆ ಪಕ್ಷದ ರಕ್ಷಣೆ ಪಡೆಯುವ ಅವಶ್ಯಕತೆ ಇಲ್ಲ. ಪಿಎಸ್ ಐಎಸ್ ಐ ನೇಮಕಾತಿಗೂ ಹಗರಣಕ್ಕೂ ಅಶ್ವತ್ಥನಾರಾಯಣ ಅವರಿಗೆ ಸಂಬಂಧವಿಲ್ಲ ಎಂದರು.
ಇನ್ನೂ ಅವರೇನು ಗೃಹ ಮಂತ್ರಿಗಳಾ? ಚುನಾವಣೆ ಸಮಯದಲ್ಲಿ ಅವರಿಗೆ ಬೇರೆನು ಸಿಗುತ್ತಿಲ್ಲ. ಡಿಕೆಶಿವಕುಮಾರ್, ಸಿದ್ರಾಮಯ್ಯ ಕಿತ್ತಾಟ ಮಿತಿಮೀರಿ ಹೋಗಿದೆ. ರಾಮನಗರ ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದ್ದಾರೆ. ಇಬ್ಬರ ತಪ್ಪು ಮುಚ್ಚಿಕೊಳ್ಳಲು ಅಶ್ವತ್ಥನಾರಾಯಣ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಮನಗರದಲ್ಲಿ ಬೇರೆ ನಾಯಕತ್ವ ಬರುತ್ತೆ ಅಂತ ಈ ರೀತಿ ಆರೋಪ ಮಾಡುತ್ತಿದ್ದಾರೆ. ರಾಮನಗರದಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಮಾಡಲು ಹೊರಟಿದ್ದಾರೆ. ಅದೇ ಕಾರಣಕ್ಕೆ ಡಿಕೆಶಿ ಅಶ್ವತ್ಥನಾರಾಯಣ ಮೇಲೆ ಕಿಡಿ ಕಾರುತ್ತಿದ್ದಾರೆ. ಡಿಕೆ ಶಿವಕುಮಾರಗೆ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.