ರಾಜ್ಯದಲ್ಲೂ ಅಸಾನಿ ಚಂಡಮಾರುತದ ಅಬ್ಬರ ಜೋರಾಗಿದೆ. ಅರಬ್ಬೀ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಉಂಟಾಗಿದ್ದು, ರಕ್ಕಸ ಅಲೆಯ ನಡುವೆಯೂ ಕಾರವಾರದ ಕಡಲತೀರದಲ್ಲಿ ಪ್ರವಾಸಿಗರು ಜೀವದ ಹಂಗನ್ನ ತೊರೆದು ಸಮುದ್ರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಈಗಾಗಲೇ ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಕಾರವಾರದ ರವೀಂದ್ರನಾಥ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಚಂಡಮಾರುತದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲು ಕಡಲತೀರದಲ್ಲಿ ಯಾವುದೇ ಪೊಲೀಸರಾಗಲಿ ಅಥವಾ ಲೈಫ್ ಗಾರ್ಡ್ ಸಿಬ್ಬಂದಿ ಕಡಲತೀರದಲ್ಲಿ ಕಂಡು ಬರುತ್ತಿಲ್ಲ. ಹೀಗಾಗಿ ಸಮುದ್ರಕ್ಕೆ ಇಳಿದು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಇನ್ನೂ ಮೂರು ನಾಲ್ಕು ದಿನ ಕರಾವಳಿಯಲ್ಲಿ ಭಾರೀ ಚಂಡಮಾರುತದ ಉಂಟಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದ್ದು, ಇನ್ನಾದ್ದರೂ ಜಿಲ್ಲಾಡಳಿತ ಕಡಲ ತೀರದಲ್ಲಿ ಸಿಬ್ಬಂದಿಯನ್ನ ನೇಮಕ ಮಾಡುವ ಮೂಲಕ ಬರುವ ಪ್ರವಾಸಿಗರಿಗೆ ಮುನ್ಸೂಚನೆ ನೀಡಬೇಕಿದೆ.