ಕಲಬುರಗಿ : ಆರ್ಯ-ಈಡಿಗ ಸಮುದಾಯ. ರಾಜ್ಯದಲ್ಲಿ ಅತ್ಯಂತ ಹಿಂದೂಳಿದ ಸಮುದಾಯಗಳಲ್ಲಿ ಒಂದು. ಈ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ. ಅದಕ್ಕಾಗಿ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ನಡೆಸ್ತಿರೋ ಪಾದಯಾತ್ರೆ, ಅಂತಿಮ ಘಟಕ್ಕೆ ಬಂದು ತಲುಪಿದೆ. ಚಿಂಚೋಳಿ ಪಟ್ಟಣದಿಂದ ಆರಂಭವಾದ ಪಾದಯಾತ್ರೆ ಬರೋಬ್ಬರಿ 100 ಕಿಮೀ ತಲುಪ ಉದ್ದದ ಬೃಹತ್ ಪಾದಯಾತ್ರೆ ಇದೀಗ ಇಂದು ಶಹಬಾದ್ ಪಟ್ಟಣ ಮಾರ್ಗವಾಗಿ ಕಲಬುರಗಿ ನಗರ ಸಮೀಪ ಬಂದಿದೆ. ನಾಳೆ ಕಲಬುರಗಿ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಡಿಸಿಯವರಿಗೆ ಶ್ರೀ ಪ್ರಣವಾನಂದ ಸ್ವಾಮೀಜಿ ಮನವಿ ಸಲ್ಲಿಸಲಿದ್ದಾರೆ. ಇನ್ನೂ ಇದೇ ವೇಳೆ ಪವರ್ ಟಿವಿ ಜೊತೆ ಮಾತನಾಡಿದ ಶ್ರೀ ಪ್ರಣವಾನಂದ ಸ್ವಾಮೀಜಿ, ಸಮಾಜದ ಇಬ್ಬರು ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್‌ಕುಮಾರ ದಾರಿ ತಪ್ಪಿಸುವ ಕೆಲಸ ಮಾಡ್ತಿದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಾಳೆ ಪಾದಯಾತ್ರೆ ಸಮಾರೋಪಗೊಳ್ಳಲಿದ್ದು, ಸುಮಾರು ಐದು ಸಾವಿರ ಸಮಾಜದ ಜನ ಭಾಗವಹಿಸಲಿದ್ದಾರೆ ಅಂತಾ ಹೇಳಿದರು.
ಇನ್ನೂ ಶ್ರೀ ಪ್ರಣವಾನಂದ ಸ್ವಾಮೀಜಿಗಳ ಪಾದಯಾತ್ರೆ ಬಗ್ಗೆ ಸರ್ಕಾರ ಹಗುರವಾಗಿ ಪರಿಗಣಿಸಿದ್ದಕ್ಕೆ ವ್ಯಾಪಾಕ ಆಕ್ರೋಶ ವ್ಯಕ್ತವಾಗ್ತಿದೆ. ರಣಬಿಸಿಲು ಲೆಕ್ಕಿಸದೇ ಕಳೆದ ಆರು ದಿನಗಳಿಂದ ಆರೋಗ್ಯ ಪಣಕ್ಕಿಟ್ಟು ಪಾದಯಾತ್ರೆ ಮಾಡ್ತಿರೋ ಶ್ರೀಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲವೆ ಅನ್ನೊ ಪ್ರಶ್ನೆ ಕಾಡುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ನಿಗಮಕ್ಕೆ ಐನೂರು ಕೋಟಿ ರೂಪಾಯಿ ಅನುದಾನ ಮತ್ತು ಸಮಾಜದ ಕುಲಕಸುಬು ಸೇಧಿ ಇಳಿಸುವುದು ಮತ್ತು ಮಾರಾಟ ಮಾಡುವುದಕ್ಕೆ ಅನುಮತಿ ಸಿಗುವರೆಗೆ ಹೋರಾಟ ನಿಲ್ಲಲ್ಲ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ವೇಳೆ ಮಾತನಾಡಿದ ಆರ್ಯ ಈಡಿಗಾ ಸಮಾಜದ ಮುಖಂಡರಾದ ರಾಘವೇಂದ್ರ ಗೌಡ, ಸರ್ಕಾರ ಒಂದು ವೇಳೆ ಶ್ರೀ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಗೆ ಸ್ಪಂದಿಸದೇ ಇದ್ರೆ, ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಅಂತಾ ಎಚ್ಚರಿಕೆ ನೀಡಿದರು.
ಅದೆನೇ ಇರಲಿ ಈಗಾಗಲೇ ರಾಜ್ಯದಲ್ಲಿ ಅನೇಕ ಸಮುದಾಯಗಳಿಗೆ ಅನೇಕ ಅಭಿವೃದ್ಧಿ ನಿಗಮಗಳಿದ್ದು, ನಮ್ಮ ಸಮಾಜಕ್ಕೂ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕೆಂದು ಶ್ರೀ ಪ್ರಣವಾನಂದ ಸ್ವಾಮೀಜಿಗಳ ಪಾದಯಾತ್ರೆಗೆ ಸರ್ಕಾರ ಸ್ಪಂದಿಸುತ್ತಾ ಅನ್ನೊದು ಕಾದು ನೋಡಬೇಕು.