Friday, November 22, 2024

ಗಗನಕ್ಕೇರಿದ ಗೋಧಿ ಬೆಲೆ

ಬೆಂಗಳೂರು : ಪೆಟ್ರೋಲ್, ಡೀಸೆಲ್ ಆಯ್ತು. ಅಡುಗೆ ಸಿಲಿಂಡರ್ ದರ ಮುಗೀತು. ಅಡುಗೆ ಎಣ್ಣೆ ದರವೂ ಆಕಾಶಕ್ಕೆ ಮುಟ್ಟಿದ್ದು ಆಯ್ತು. ಈಗ ದೇಶದಲ್ಲಿ ಗೋಧಿ ಹಿಟ್ಟಿನ ಸರದಿ ಬಂದಿದೆ.

12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ಗೋಧಿ ತಲುಪಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಗೋಧಿ ಹಿಟ್ಟಿನ ಮಾಸಿಕ ಸರಾಸರಿ ಚಿಲ್ಲರೆ ಮಾರಾಟ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆಯು 32.38 ಪೈಸೆ ಆಗಿರುವುದೇ ಹೊಸ ದಾಖಲೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಏರಿಕೆ ಕಂಡಿದೆ.

ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲೂ ಗೋಧಿಯ ಬೆಲೆಯು ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ಗೋಧಿಯ ಚಿಲ್ಲರೆ ಬೆಲೆಗಳು 2021ರ ಮಾರ್ಚ್ ತಿಂಗಳ ವೇಳೆಯಲ್ಲಿ 27.90 ರೂಪಾಯಿಯಿಂದ 2022ರ ಮಾರ್ಚ್ ವೇಳೆಗೆ ಕೆಜಿಗೆ 32.38 ಪೈಸೆ ಏರಿಕೆಯಾಗಿದೆ.

ಇನ್ನು, ದೇಶದಲ್ಲಿ ಗೋಧಿ ಬೆಲೆ ಏರಿಕೆಗೆ ಕಾರಣವೇನೆಂದು ನೋಡುವುದಾದರೆ,  ಭಾರತದಲ್ಲಿ ಅಟ್ಟಾ ಬೆಲೆಗಳು ಕಳೆದ ತಿಂಗಳು ಜನವರಿ 2010 ರಿಂದ ಅತ್ಯಧಿಕ ಏರಿಕೆ ಕಂಡಿತು, ಏಕೆಂದರೆ ದೇಶದಲ್ಲಿ ಗೋಧಿಯ ಉತ್ಪಾದನೆ ಮತ್ತು ದಾಸ್ತಾನುಗಳು ಪ್ರಮಾಣದಲ್ಲಿ ಅತಿಹೆಚ್ಚು ಕುಸಿತ ಕಂಡು ಬಂದಿದೆ. ಕಳೆದ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತವು 70 LMT ಗೋಧಿಯನ್ನು ರಫ್ತು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕವಾಗಿ ಪೂರೈಕೆಯ ಕೊರತೆಯನ್ನು ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES