Monday, December 23, 2024

ರಿಲೀಸ್​ಗೂ ಮೊದ್ಲೇ ವಿಶ್ವದಾದ್ಯಂತ ರೋಣ ಮ್ಯಾಜಿಕ್

ಆಲ್ ಇಂಡಿಯಾ ಕಟೌಟ್ ಕಿಚ್ಚನ ಫ್ಯಾಂಟಮ್ ವರ್ಲ್ಡ್,​ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ರಿಲೀಸ್​ಗೂ ಮೊದಲೇ ವಿದೇಶಿ ಡಿಸ್ಟ್ರಿಬ್ಯೂಟರ್ಸ್​ಗೆ ದಾಖಲೆ ಮೊತ್ತಕ್ಕೆ ಸಿನಿಮಾ ಸೋಲ್ಡ್ ಔಟ್ ಆಗಿದೆ.

  • ರಿಲೀಸ್​ಗೂ ಮೊದ್ಲೇ ವಿಶ್ವದಾದ್ಯಂತ ರೋಣ ಮ್ಯಾಜಿಕ್
  • 10 ಕೋಟಿಗೆ ವಿದೇಶಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟ..!
  • ಕಿಚ್ಚನ ರೋಣ ಪ್ಯಾನ್ ಇಂಡಿಯಾ ಅಲ್ಲ.. ಪ್ಯಾನ್ ವರ್ಲ್ಡ್​
  • ಜುಲೈ 28ಕ್ಕೆ ಆಲ್ ಇಂಡಿಯಾ ಕಟೌಟ್ ಕಿಚ್ಚನ ಕರಾಮತ್ತು

ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸೌತ್ ಇಂಡಿಯನ್ ಮೂವೀಸ್​ನಲ್ಲಿ ವಿಕ್ರಾಂತ್ ರೋಣ ಕೂಡ ಒಂದು. ಟೈಟಲ್, ಟೀಸರ್ ಹಾಗೂ ಮೇಕಿಂಗ್​ನಿಂದಲೇ ಪ್ರೇಕ್ಷಕರನ್ನ ಹೊಸದೊಂದು ಪ್ರಪಂಚಕ್ಕೆ ಕೊಂಡೊಯ್ಯೋ ಮನ್ಸೂಚನೆ ನೀಡಿರೋ ಚಿತ್ರ. ಅದ್ರಲ್ಲಿ ಅಭಿನಯದಲ್ಲಿ ಚಕ್ರವರ್ತಿ ಅನಿಸಿಕೊಂಡಿರೋ ಕಿಚ್ಚನ ಬಹುಕೋಟಿ ಸಿನಿಮಾ ಇದಾಗಿರೋದ್ರಿಂದ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

ಶಾಲಿನಿ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಸಿನಿಮಾ ಈಗಿನ ಟ್ರೆಂಡ್​ನ ಬ್ರೇಕ್ ಮಾಡಿ ಹೊಸ ಬ್ರ್ಯಾಂಡ್ ಆಗಿದೆ. ಎಲ್ರೂ ಪ್ಯಾನ್ ಇಂಡಿಯಾ ಸಿನಿಮಾಗೆ ಜೋತು ಬೀಳೋ ಸಮಯದಲ್ಲಿ ಇವ್ರು ವಿಕ್ರಾಂತ್ ರೋಣನನ್ನ ಪ್ಯಾನ್ ವರ್ಲ್ಡ್​ ಸಿನಿಮಾ ಆಗಿಸ್ತಿದ್ದಾರೆ.

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್​ನಲ್ಲೂ ಸಿನಿಮಾ ಬಿಗ್​ಸ್ಕ್ರೀನ್​ಗೆ ಲಗ್ಗೆ ಇಡಲಿದೆ. ಈಗಾಗ್ಲೇ ಜುಲೈ 28ನೇ ತಾರೀಖ್​ನ ಲಾಕ್ ಮಾಡಿರೋ ಚಿತ್ರತಂಡ, ಅಂದು ಸಾವಿರಾರು ತೆರೆಗಳನ್ನ ಆವರಿಸಿಕೊಳ್ಳೋ ಮೂಲಕ ಸಿನಿಪ್ರಿಯರಿಗೆ ಮಸ್ತ್ ಮನರಜಂನೆ ನೀಡೋ ಯೋಜನೆಯಲ್ಲಿದೆ.

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರದ ಈ ಸಿನಿಮಾ ಕೆಜಿಎಫ್ ರೀತಿ ಬೇರೆಯದ್ದೇ ಶೈಲಿಯ ಟಿಂಟ್​ ಹಾಗೂ ಕಥೆಯಿಂದ ವಿಭಿನ್ನತೆ ಕಾಯ್ದುಕೊಂಡಿದೆ. ಫ್ಯಾಂಟಸಿ ಅಡ್ವೆಂಚರ್ ಜಾನರ್​ನ ಈ ಸಿನಿಮಾ ಅಜ್ಜಿ ಪುಸ್ತಕದಲ್ಲಿರೋ ಕಥೆಯನ್ನ ಹೇಳಲಿದೆ. ಕಿಚ್ಚನ ಕಾಸ್ಟ್ಯೂಮ್ಸ್, ಲುಕ್ಸ್, ಖಡಕ್ ವಾಯ್ಸ್, ನೈಟ್ ಮೋಡ್ ಸೀನ್ಸ್ ಹೀಗೆ ಎಲ್ಲವೂ ಚಿತ್ರದ ಗಮ್ಮತ್ತು ಹೆಚ್ಚಿಸಲಿದೆ.

2ಡಿ ಜೊತೆ ತ್ರೀಡಿಯಲ್ಲೂ ಸಿನಿಮಾ ರಿಲೀಸ್ ಆಗಲಿದ್ದು, ಟೆಕ್ನಿಕಲಿ ಸಖತ್ ಸ್ಟ್ರಾಂಗ್ ಇರಲಿದೆ ವಿಕ್ರಾಂತ್ ರೋಣ. ವಿಲಿಯಮ್ ಡೇವಿಡ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸಿನಿಮಾಗೆ ಪ್ಲಸ್ ಆಗಲಿದ್ದು, ಈಗಾಗ್ಲೇ ಸ್ಯಾಂಪಲ್ಸ್ ಮಜಭೂತಾಗಿರೋ ಫೀಲ್ ಕೊಟ್ಟಿವೆ.

ಆಲ್ ಇಂಡಿಯಾ ಕಟೌಟ್ ಕಿಚ್ಚನ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ ನಟಿಸಿದ್ದು, ಬಾಲಿವುಡ್​ನ ಬ್ಯೂಟಿ ಜಾಕ್ವೆಲಿನ್ ಫಾರ್ನಾಂಡಿಸ್ ಗಡಾಂಗ್ ರಕ್ಕಮ್ಮನಾಗಿ ಬಣ್ಣ ಹಚ್ಚಿರೋದು ಸಿನಿಮಾದ ಗ್ರಾಮರ್ ಜೊತೆ ಗ್ಲಾಮರ್ ಹೆಚ್ಚಿದಂತಿದೆ. ಇನ್ನು ಸಿನಿಮಾದ ಓವರ್​ಸೀಸ್ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿವೆ. ಈ ಮೂಲಕ ವಿಕ್ರಾಂತ್ ರೋಣ ಹೊಸ ದಾಖಲೆ ಬರೆದಿದೆ.

ಬರೀ ಕನ್ನಡ ಅವತರಣಿಕೆ ಮಾತ್ರವೇ ವಿದೇಶಗಳಲ್ಲಿ ರಿಲೀಸ್ ಮಾಡೋಕೆ ವಿತರಕರು ಬರೋಬ್ಬರಿ ಹತ್ತು ಕೋಟಿ ದೊಡ್ಡ ಮೊತ್ತ ನೀಡಿ ರೈಟ್ಸ್​ನ ಖರೀದಿಸಿರೋದು ಖುಷಿಯ ವಿಚಾರ. ನಮ್ಮ ಕನ್ನಡಿಗರ ಗತ್ತು ವಿಶ್ವಕ್ಕೆ ಒಂದೊಂದೇ ಸಿನಿಮಾದಿಂದ ಗೊತ್ತಾಗ್ತಿದ್ದು, ಆ ನಿಟ್ಟಿನಲ್ಲಿ ರೋಣನ ಫ್ಯಾಂಟಮ್ ವರ್ಲ್ಡ್​ ಪ್ರೇಕ್ಷಕರಿಗೆ ಹೊಸ ಪ್ರಪಂಚದ ದರ್ಶನ ಮಾಡಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES