Monday, December 23, 2024

ಮುತಾಲಿಕ್​ನ ಒದ್ದು ಒಳಗೆ ಹಾಕದೇ ಹೋದ್ರೆ ಶಾಂತಿ ತೋಟ ನೆಲೆಸಲು ಸಾಧ್ಯವಿಲ್ಲ – ಹೆಚ್ಡಿಕೆ

ಬಾಗಲಕೋಟೆ: ಸುಪ್ರೀಂಕೋರ್ಟ್​ ನಿಗದಿ ಮಾಡಿದ ಶಬ್ಧದಂತೆ ಇರಲಿ, ಸಕಾ೯ರ ಇದಕ್ಕೆ ಪರ್ಮಿಷನ್ ಕೊಟ್ಟು ಬಿಡಲಿ. ಇದಕ್ಕೇನು ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

ರಾಜ್ಯಾದಾದ್ಯಂತ ಪಕ್ಷ ಸಂಘಟನೆ ಮುಂದಾಗಿರುವ ಹೆಚ್ಡಿಕೆ ಅವರು ಸದ್ಯ ಬಾಗಲಕೋಟೆಯಲ್ಲಿದ್ದಾರೆ. ಜಿಲ್ಲೆಯ ಬಾದಾಮಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಓ ಹಿಂದುತ್ವ ಉಳಿಸೋಕೆ ಹನುಮಾನ ಚಾಲೀಸ್ ಹೇಳುತ್ತಿದ್ದಾರೆ ಅಂತ ಏನಿಲ್ಲ. ಪ್ರತಿದಿನ ಮನೆಯಲ್ಲಿ ನಾವು ಹೇಳೋದಿಲ್ವೇ. ಏನಾದ್ರೂ ಸಮಸ್ಯೆಯಾದ್ರೆ, ಆರೋಗ್ಯ ತೊಂದರೆಯಾದ್ರೆ ಹನುಮಾನ ಚಾಲೀಸ್ ಹೇಳ್ತೀವಿ. ಇದೇನು ದೊಡ್ಡ ಸಾಧನೆ ಏನಲ್ಲ ಎಂದು ಹನುಮಾನ್​ ಚಾಲೀಸ್​​​ ಪಠಿಸುವವರ ವಿರುದ್ಧ ಟಾಂಗ್​ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ರಾಮಸೇನೆಯೋ, ರಾವಣ ಸೇನೆಯೋ… ಮುತಾಲಿಕ್ ಅಂತವರನ್ನು ಒದ್ದು ಒಳಗಡೆ ಹಾಕದೇ ಹೋದರೆ ರಾಜ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಇಂತಹ ವಿಷಯಗಳು ಬೃಹದಾಕಾರವಾಗಿ ಬೆಳೆಯಲಿಕ್ಕೆ ಸರ್ಕಾರ ಮೌನವಾಗಿ ಒಪ್ಪಿಗೆ ಸೂಚಿಸೋದು ನಿಲ್ಲಿಸಬೇಕು. ಸಮಾಜ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡಲಿಕ್ಕಾಗುತ್ತಾ(?) ಎಂದು ಜೆಡಿಎಸ್​​ ಶಾಸಕ ಹೆಚ್ಡಿಕೆ ಅವರು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್ ವಿರುದ್ಧ ಹರಿಹಾಯ್ದರು.

ಇನ್ನು ಕಳೆದ ವರ್ಷದ ಬೆಳೆ ವಿಮೆ ದುಡ್ಡೇ ಬಂದಿಲ್ಲ ಇದಕ್ಕೆ ನಮ್ಮ ಹೋರಾಟ ಇರಬೇಕು. ಏನು ಗಂಟೆ ಬಾರಿಸಿದರೆ ನಿಮಗೆಲ್ಲಾ ಸಿಕ್ಕಿ ಬಿಡುತ್ತಾ(?) ಈ ಮಧ್ಯೆ 120 ರೂ.ಪೆಟ್ರೋಲ್, 100 ಡೀಸೆಲ್​, ಸಾವಿರ ರೂಪಾಯಿ ಗ್ಯಾಸ್ ರೇಟ್ ಇದೆ. ಈ ಬಗ್ಗೆ ನೀವ್ಯಾರು ಮಾತನಾಡೋಕೆ ರೆಡಿ‌ ಇಲ್ಲ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯಿತ್ತಿದ್ದಾರೆ, ಜನರ ಜೀವನ ಜೊತೆ ಆಟಬೇಡಿ ಇದನ್ನು ಸರಿಪಡಿಸಬೇಕಾಗಿರೋದು ಹೋರಾಟಗಾರರು, ಸಂಘಟನೆಗಳ ಕರ್ತವ್ಯ ಎಂದು ಹೆಚ್ಡಿಕೆ ಮಾತನಾಡಿದರು.

RELATED ARTICLES

Related Articles

TRENDING ARTICLES