Thursday, December 19, 2024

ರ‍್ಯಾಗಿಂಗ್‌​​ಗೆ ಪಿಯುಸಿ ವಿದ್ಯಾರ್ಥಿ ಬಲಿ

ಆನೇಕಲ್ : ಸಮೃದ್ಧಿ ಕಾಲೇಜಿನ ವಿದ್ಯಾರ್ಥಿ ರ‍್ಯಾಗಿಂಗ್​​ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಸೋಮನಾಥ್ ( 19 ) ಮೃತ ದೈರ್ದವಿ ವಿದ್ಯಾರ್ಥಿ. ಈತ ಹೊಸಕೋಟೆಯಲ್ಲಿರುವ ಸಮೃದ್ಧಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇವನು ಕಾಲೇಜು ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್​​ನಲ್ಲಿ ಯುವತಿಯೊಂದಿಗೆ ಚಾಟ್ ಮಾಡಿದ್ದ ಸಂದೇಶಗಳನ್ನ ಶೇರ್ ಮಾಡಿ ಬೇರೆ ವಿದ್ಯಾರ್ಥಿಗಳು ರ‍್ಯಾಗ್‌ ಮಾಡುತ್ತಿದ್ದರು. ಈ ಸಂಬಂಧ ಕೆಲ ವಿದ್ಯಾರ್ಥಿಗಳು ಹಾಗೂ ಸೋಮನಾಥ್ ನಡುವೆ ವಾಕ್ಸಮರ ಸಮರವಾಗಿದ್ದು, ಬಳಿಕ ಕಾಲೇಜಿಗೆ ಬಾ ನೋಡಿಕೊಳ್ತೇವೆ ಎಂದು ಕೆಲ ವಿಧ್ಯಾರ್ಥಿಗಳು ಬೆದರಿಕೆ ಹಾಕಿದ್ದರು.

ಇದರಿಂದ ಮನನೊಂದ ವಿದ್ಯಾರ್ಥಿ ಮೇ 5 ರಂದು ಸ್ಯೂಸೈಡ್ ನೋಟ್ ಬರೆದಿಟ್ಟು, ಮನೆ ಬಿಟ್ಟು ಹೋಗಿದ್ದ. ಈತನ ಪೋಷಕರು ಹೊಸಕೋಟೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಎರಡು ದಿನಗಳ ಬಳಿಕ ತಮಿಳುನಾಡಿನಿಂದ ಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯಲ್ಲಿ ಶವವಾಗಿ ಪತ್ತೆಯಾಗಿದೆ.

ಇನ್ನು ಮಾರತ್​​ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಮಿಳುನಾಡು ಕ್ವಾರಿ ಮತ್ತು ಕೆಆರ್ ಪುರಂ ಸ್ಟಾಂಡ್​​ನಲ್ಲಿ ಎಲ್ಲರ ವಿಚಾರಣೆಯನ್ನು ಮಾಡಲಾಗಿದೆ.

ಯಾವುದೇ ಸುಳಿವು ಸಿಗದ ಹಿನ್ನಲೆ ಮಾಸ್ಕ್ ಮೇಲಿನ ಹೆಸರು ನೋಡಿ ಮೃತನ ಮಾಹಿತಿ ಪತ್ತೆ ಮಾಡಲಾಗಿದೆ. ಆದರೆ ಅನುಮನಾಸ್ಪದ ಸಾವು ಹಿನ್ನಲೆ ಮಾರತಹಳ್ಳಿ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.

RELATED ARTICLES

Related Articles

TRENDING ARTICLES