Sunday, December 22, 2024

ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳ ಕಾರ್​ ರ‍್ಯಾಲಿ ಪ್ರದರ್ಶನ

ಚಿಕ್ಕಮಗಳೂರು : ಧೂಳೆಬ್ಬಿಸ್ತಾ ಸಾಗ್ತಿರೋ ಕಾರುಗಳು ತಿರುವುಗಳಲ್ಲಿ ಗಾಡಿ ಬ್ಯಾಲೆನ್ಸ್ ಮಾಡುತ್ತಲೇ ಧೂಳೆಬ್ಬಿಸ್ತಾ ಎಕ್ಸಲೇಟರ್ ತುಳಿಯುತ್ತಿರೋ ಚಾಲಾಕಿ ಚಾಲಕರು. ತಿರುವುಗಳಲ್ಲಿ ನೋಡ್ದೋರ ತಲೆ ತಿರುಗಿಸ್ತಿರೋ ಕಾರುಗಳು, ಮಿಂಚಿನ ವೇಗದಲ್ಲಿ ನುಗ್ತಿರೋ ಕಾರುಗಳನ್ನು ಕಂಡು ನೆರೆದಿದ್ದವರು ಕೇಕೆ ಹಾಕುತ್ತಾ ಶಿಳ್ಳೆ ಹೊಡೆಯುತ್ತಿರುವುದು. ಹೌದು. ಚಿಕ್ಕಮಗಳೂರಿನ ಅಬ್ಲೈಸ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿರೋ ಎಫ್.ಎಂ.ಎಸ್.ಸಿ. ರ್ಯಾಲಿ ಕಾಫಿನಾಡಿಗರಿಗೆ ಭಾನುವಾರದ ಭರ್ಜರಿ ಮನರಂಜನೆ ನೀಡಿದೆ. ಡರ್ಟ್ ಟ್ರ್ಯಾಕ್ ರ್ಯಾಲಿಯ ಮೊದಲೆರಡು ರೌಂಡ್ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಮುಗಿದಿದ್ದು, ಕಾಫಿನಾಡಲ್ಲಿ ಮೂರನೇ ರೌಂಡ್ ಆಯೋಜನೆಗೊಂಡಿದೆ.

ಈ ರ್ಯಾಲಿಯಲ್ಲಿ 56 ಜನ ಕಾಂಪಿಟೇಟರ್ಸ್‌ ಇದ್ದು 196 ಜನರಿಗೆ ಎಂಟ್ರಿ ಇದೆ. ಏಕ ಕಾಲದಲ್ಲಿ 10 ರೀತಿಯ ವಿಭಾಗಗಳಿಗೆ ನಡೆದ ರ್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದ್ವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ವು. ಕೆಲವು ಕಾರ್ ಕ್ರೇಜ್ ಪ್ರಿಯರು ಮಿನಿಜಿಬ್ಸಿ, ಆಲ್ಟೋ ಹಾಗೂ 800 ಕಾರನ್ನೂ ತಂದು ರ್ಯಾಲಿಯಲ್ಲಿ ಡ್ರೈವ್ ಮಾಡಿ ಖುಷಿ ಪಟ್ರು.

ನೋಡುಗರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು. 3 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು. ಈ ರ್ಯಾಲಿಗೆ ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹಾಸನ, ಮೂಡಿಗೆರೆ ಸೇರಿ ರಾಜ್ಯದ ವಿವಿಧ ಭಾಗದ ನ್ಯಾಷನಲ್, ಇಂಟರ್​ನ್ಯಾಪ್​ನಲ್​ ಸ್ಪರ್ಧಾಳುಗಳು ಭಾಗವಹಿಸಿದ್ದರು. ಚೆನ್ನೈ, ಕೇರಳ, ತಮಿಳುನಾಡಿನಿಂದಲೂ ಸ್ಪರ್ಧಾಳುಗಳು ಬಂದಿದ್ದರು.

ಹೊರ ಜಿಲ್ಲೆ-ರಾಜ್ಯದ ಸ್ಪರ್ಧಾಗಳುಗಳಿಗೆ ಸ್ಥಳಿಯ ಪ್ರತಿಭೆಗಳು ತೊಡೆ ತಟ್ಟಿದ್ದು ರ್ಯಾಲಿಯ ವಿಶೇಷವಾಗಿತ್ತು.
ಪ್ರೇಕ್ಷಕರ ರಂಜನೆಗೆಂದೇ ಆಯೋಜಿಸಿದ್ದ ರ್ಯಾಲಿಯಲ್ಲಿ ರಾಷ್ಟ-ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದ್ರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನ ನೋಡಿ ಜನ ಫಿದಾ ಆಗಿದ್ದಾರೆ. ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡೋ ಕಾರುಗಳು ನೋಡುಗರಿಗೆ ಮತ್ತಷ್ಟು ಮನರಂಜನೆ ನೀಡಲಿದೆ.

RELATED ARTICLES

Related Articles

TRENDING ARTICLES