ಕಲಬುರಗಿ : ಫೋಟೋ ಶೂಟ್ ಮಾಡಿ ಅಕ್ರಮದಲ್ಲಿ ಗೆದ್ದ ಖುಷಿಗೇ ಪೋಸ್ ನೀಡಿದವರೆಲ್ಲ, ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದ ಅಕ್ರಮ ಪಿಎಸ್ ಐ ನೇಮಕಾತಿಯ ರೂವಾರಿಗಳು. ಕಳೆದ ವರ್ಷ ಅಕ್ಟೋಬರ್ 3 ರಂದು ನಡೆದ ಪಿಎಸ್ ಐ ಪರೀಕ್ಷೆಯ ಗೋಲ್ ಮಾಲ್ ಈ ಫೋಟೋದಲ್ಲಿ ಇರುವವರೆ ಹಲವು ಆರೋಪಿತರಾಗಿದ್ದು, ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಆ ದಿನ ಪೊಲೀಸರ ಸಹಾಯದೊಂದಿಗೆ ತನ್ನ ಸ್ಟಾಫ್ ಬಳಸಿ ಓಎಂಆರ್ ಉತ್ತರ ಪತ್ರಿಕೆ ಸರಿಯಾದ ಉತ್ತರ ಹಾಕಿದ್ರೆ, ಇನ್ನು ಕೆಲವರು ಅಲ್ಲಿನ ಅಭ್ಯರ್ಥಿಗಳಿಗೆ ಡಿವೈಸ್ ನೀಡಿ ಅಕ್ರಮದ ಮೂಲಕ ಪರೀಕ್ಷೆ ಪಾಸಾಗಲು ಸಹಕರಿಸಿದ್ದಾರೆ.
ಇನ್ನು ಇದೇ ಖುಷಿಯಲ್ಲಿ ಏನೋ ಸಾಧನೆ ಮಾಡಿದಂತೆ ದಿವ್ಯಾ&ಟೀಂ ಶಾಲೆಯ ಆವರಣದಲ್ಲಿ ಫೋಟೋ ಶೂಟ್ ನಡೆಸಿದ್ದಾರೆ. ಇನ್ನು ದುರಂತ ಅಂದ್ರೆ ಈ ಫೋಟೋ ಶೂಟ್ ನಲ್ಲಿ ಮೇಲ್ವಿಚಾರಕರ ಜೊತೆಗೆ ಬಂಧಿತ ಆರೋಪಿ ಸಿಪಿಐ ಆನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಪೋಸ್ ನೀಡಿದ್ದು, ಅದರಲ್ಲಿ ಆನಂದ ಸಿಐಡಿ ಬಲೆಗೆ ಬಿದ್ದರೆ ಡಿವೈಎಸ್ ಪಿ ಹೊಸಮನಿ, ಸಿಪಿಐ ದಿಲೀಪ್ ಸಾಗರನನ್ನು ಗೃಹ ಅಮಾನತು ಮಾಡಲಾಗಿದೆ. ಇನ್ನು ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆ ಝರಾಕ್ಸ್ ಮಾಡಿ ಕಿಂಗ್ ಪಿನ್ಗಳಿಗೆ ನೀಡಿದೆ ಕಾಶಿನಾಥ್ ಚಿಲ್ ಎಂಬುದು ಸಹ ಸಿಐಡಿ ತನಿಖೆ ವೇಳೆ ಪತ್ತೆಯಾಗಿದೆ.
ಅದುವಲ್ಲದೇ, ಬಂಧಿತ ದಿವ್ಯಾ ಹಾಗರಗಿಯ 11 ದಿನಗಳ ಸಿಐಡಿ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನಲೆಯಲ್ಲಿ, ಸಿಐಡಿ ತಂಡ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಿದ್ದಾರೆ. ಇಡೀ ಅಕ್ರಮದ ಕೇಂದ್ರ ಸ್ಥಾನ ಹಾಗೂ ಡಿಲ್‌ರಾಣಿ ದಿವ್ಯಾ ಹಾಗರಗಿಯ ಅಕ್ರಮದ ಸಂಪೂರ್ಣ ತನಿಖೆ ಮುಕ್ತಾಯವಾದ ಹಿನ್ನಲೆಯಲ್ಲಿ, ಇಂದೇ ದಿವ್ಯಾಳನ್ನ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ. ಇನ್ನೂ ಇದೇ ಪ್ರಕರಣದಲ್ಲಿ ಕಳೆದ ತಿಂಗಳು18 ರಂದು ಬಂಧನಕ್ಕೊಳಗಾಗಿದ್ದ ಪತಿ ರಾಜೇಶ್ ಹಾಗರಗಿಯನ್ನ ಇಂದು ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಪತ್ನಿ ದಿವ್ಯಾ ಸೇರಿಕೊಳ್ಳಲಿದ್ದಾಳೆ.
ಸದ್ಯ ಪಿಎಸ್ ಐ ಅಕ್ರಮದ ಪ್ರಕರಣಕ್ಕೆ ಶಾಲೆಯಲ್ಲಿ ನಡೆದ ಫೋಟೋ ಶೂಟ್ ಸಿಐಡಿ ತನಿಖೆಗೆ ಸಹಾಯವಾಗಿದ್ದು, ಅಕ್ರಮದಲ್ಲಿ ಯಾರೆಲ್ಲ ಇದ್ರು ಎಂಬುದಕ್ಕೆ ಈ ಒಂದು ಫೋಟೋನೆ ಸಿಐಡಿ ತನಿಖೆಗೆ ಸಹಕಾರಿಯಾಗಿದೆ. ಇನ್ನು ಅಕ್ರಮಕ್ಕು ಈ ರೀತಿ ಫೋಟೋ ಶೂಟ್ ಮಾಡಿಕೊಂಡಿರುವದು ನಿಜಕ್ಕು ದಿವ್ಯಾ & ಟೀಂಗೇ ನಾಚಿಕೆಯಾಗಬೇಕು.