Thursday, January 23, 2025

ತಿಮ್ಮಪ್ಪನ ಸಾನಿಧ್ಯದಲ್ಲಿ ನಯನತಾರಾ ಕಲ್ಯಾಣೋತ್ಸವ

ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೊನೆಗೂ ವಿಘ್ನೇಶ್ ಶಿವನ್ ಕೈಹಿಡಿಯೋಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ತಿರುಪತಿಯ ತಿಮ್ಮಪ್ಪನ ಆಲಯದಲ್ಲೇ ಸಪ್ತಪದಿ ತುಳಿಯೋಕೆ ಶುಭ ಮುಹೂರ್ತ ಇಟ್ಟಿದ್ದಾರೆ. ಇಷ್ಟಕ್ಕೂ ಮದ್ವೆ ಯಾವಾಗ..? ಇವ್ರ ಸ್ನೇಹ, ಪ್ರೀತಿ ಎಷ್ಟು ವರ್ಷದ್ದು ಅನ್ನೋದ್ರ ಕಲರ್​ಫುಲ್ ಕಹಾನಿ ಇಲ್ಲಿದೆ ನೋಡಿ.

  • ತಿಮ್ಮಪ್ಪನ ಸಾನಿಧ್ಯದಲ್ಲಿ ನಯನತಾರಾ ಕಲ್ಯಾಣೋತ್ಸವ
  • ಸಪ್ತಪದಿಗೆ ಸಾಕ್ಷಿ ಆಗ್ತಿದೆ ಏಳು ವರ್ಷದ ಸ್ನೇಹ & ಪ್ರೀತಿ..!
  • ಶಿಂಬು & ಪ್ರಭುದೇವ ಕೈಕೊಟ್ರು.. ವಿಘ್ನೇಶ್ ಕೈ ಹಿಡಿದ..!
  • ಕೋಟಿ ಸಂಭಾವನೆ ಪಡೆದ ಸೌತ್ ಲೇಡಿ ಸೂಪರ್ ಸ್ಟಾರ್

ನಯನತಾರಾ.. 37ರ ಹರೆಯದ ಈ ಬ್ಯೂಟಿಗೆ ವಯಸ್ಸಾದಷ್ಟೂ ಸೊಬಗು ಜಾಸ್ತಿ. ಸೌತ್​ನ ಸೆನ್ಸೇಷನಲ್ ನಟೀಮಣಿಯಾಗಿರೋ ಈಕೆ, ಅತಿಹೆಚ್ಚು ಸಂಭಾವನೆ ಪಡೆಯೋ ಲೇಡಿ ಸೂಪರ್ ಸ್ಟಾರ್ ಕೂಡ ಹೌದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷಾ ನಟಿಯಾಗಿ ಈಕೆಯ ಅಂದ ಚೆಂದದ ಜೊತೆ ನಟನೆಗೆ ತಲೆದೂಗದವರೇ ಇಲ್ಲ.

ದಕ್ಷಿಣ ಭಾರತದ ನಾಲ್ಕೂ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್​, ಮೆಗಾಸ್ಟಾರ್​ಗಳ ಜೊತೆ ನಟಿಸಿದ ಗರಿಮೆ ನಯನತಾರಾರದ್ದು. ಅಂದಹಾಗೆ ಈ ಚೆಂದುಳ್ಳಿ ಚೆಲುವೆ ನಮ್ಮ ಬೆಂಗಳೂರಲ್ಲೇ ಜನಿಸಿದ್ದು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಕೇರಳಾ ಮೂಲದ ಕ್ರಿಶ್ಚಿಯನ್ ಕುಟುಂಬದ ನಯನ ಮೂಲ ಹೆಸ್ರು ಡಯಾನ.

ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದ ನಯನಾ, ಪಾರ್ಟ್​ ಟೈಂ ಜಾಬ್ ಮಡಿಕೊಂಡೇ ನಿಧಾನಕ್ಕೆ ಚಿತ್ರರಂಗಕ್ಕೆ ಪ್ರವೇಶ ಮಾಡ್ತಾರೆ. ಮಲಯಾಳಂ ಚಿತ್ರದಿಂದ ಬಣ್ಣ ಹಚ್ಚಿದ್ರೂ ತಮಿಳು, ತೆಲುಗಿನಲ್ಲಿ ಹೋಮ್ ಟೌನ್ ಹೋಮ್ಲಿ ಗರ್ಲ್​ ಆಗಿ ಗುರ್ತಿಸಿಕೊಳ್ತಾರೆ.

ಉಪೇಂದ್ರರ ಸೂಪರ್ ಸಿನಿಮಾದಲ್ಲಿ ಟ್ರೆಡಿಷನಲ್ ನಟೀಮಣಿಯಾಗಿ ಕನ್ನಡಿಗರ ಹಾರ್ಟ್​ಗೂ ಲಗ್ಗೆ ಇಡ್ತಾರೆ ನಯನ. ಆದ್ರೆ ಈಕೆಯ ಪರ್ಸನಲ್ ಲೈಫ್​ ಅವಲೋಕಿಸಿದ್ರೆ, ಸಿನಿಮಾದಂತೆ ಕಲರ್​ಫುಲ್ ಅನಿಸುತ್ತೆ. ಹೌದು.. 37 ವರ್ಷಗಳಾದ್ರೂ ಇನ್ನೂ ಮದ್ವೆ ಆಗಿ ಸೆಟಲ್ ಆಗದ ಈ ಲೇಡಿ ಸೂಪರ್ ಸ್ಟಾರ್, ಪ್ರೀತಿ- ಪ್ರೇಮ ಅಂತ ಅವರಿವ್ರ ಜೊತೆ ಸುತ್ತಾಡ್ತಾನೇ ಇದ್ದಾರೆ.

ವಲ್ಲಭನ್ ಚಿತ್ರದ ವೇಳೆ ನಟ ಶಿಂಬು ಮೇಲೆ ಲವ್ ಆಗಿ ಸ್ವಲ್ಪ ದಿನ ಒಟ್ಟೊಟ್ಟಿಗೆ ಸುತ್ತಾಡಿ, ಕೊನೆಗೆ ಆ ಸಂಬಂಧವನ್ನ ಒಂದು ದಿನ ಕೊನೆಗೊಳಿಸಿದ್ರು. ನಂತ್ರ ವಿಲ್ಲು ಚಿತ್ರದ ವೇಳೆ ಪ್ರಭುದೇವ ಪ್ರೇಮಪಂಜರಕ್ಕೆ ಸಿಲುಕಿದ ನಯನತಾರಾ, ಹಸೆಮಣೆ ಏರೋಕೂ ಮೊದಲೇ ಅವ್ರ ಸಂಬಂಧ ಕೂಡ ಮುರಿದು ಬಿತ್ತು.

ನಾನುಂ ರೌಡಿ ದಾನ್ ಸಿನಿಮಾದ ಬಳಿಕ ಆ ಚಿತ್ರದ ಡೈರೆಕ್ಟರ್ ವಿಘ್ನೇಶ್ ಶಿವನ್ ಜೊತೆ ಮೂರನೇ ಬಾರಿ ಪ್ರೇಮ ಪಲ್ಲಕ್ಕಿ ಏರುತ್ತಾರೆ. ಐದಾರು ವರ್ಷದಿಂದ ಒಟ್ಟೊಟ್ಟಿಗೆ ಕಾಣಿಸಿಕೊಳ್ಳೋ ಇವ್ರು ಲವ್ವಿ ಡವ್ವಿ ಜೊತೆ ಲಿವಿನ್ ರಿಲೇಷನ್​ಶಿಪ್​ನಲ್ಲೂ ಇದ್ದರು. ಅಷ್ಟೇ ಅಲ್ಲ, ಇವ್ರ ಸಂಬಂಧಕ್ಕೆ ಅಧಿಕೃತವಾಗಿ ಮುದ್ರೆ ಬೀಳೋದು ಯಾವಾಗ ಅಂದುಕೊಳ್ತಿದ್ದವ್ರಿಗೆ ಕಳೆದ ವರ್ಷ ಎಂಗೇಜ್ ಆಗಿ ಉತ್ತರ ಕೊಟ್ಟಿದ್ರು.

ಸದ್ಯ ಕಾತುವಾಕುಲ ರೆಂಡು ಕಾದಲ್ ಅನ್ನೋ ಸೂಪರ್ ಹಿಟ್ ಸಿನಿಮಾ ಮಾಡಿದ ಈ ಲವ್ ಬರ್ಡ್ಸ್, ಸಕ್ಸಸ್ ಸಂಭ್ರಮದಲ್ಲಿ ತಿರುಪತಿಗೆ ಹೋಗಿಬಂದಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್​ ತಿರುಪತಿ ಭೇಟಿ ವೇಳೆ ಮದ್ವೆಯನ್ನ ಅಲ್ಲೇ ಆಗೋದಕ್ಕೆ ಪ್ಲಾನ್ ಮಾಡ್ತಿರೋದಾಗಿ ಮಾಹಿತಿ ಹೊರಬಂದಿದೆ. ಎಲ್ಲಾ ಅಂದುಕೊಂಡಂತಾದ್ರೆ ಇದೇ ಜೂನ್ 9ಕ್ಕೆ ತಿಮ್ಮಪ್ಪನ ಆಲಯದಲ್ಲೇ ಲೇಡಿ ಸೂಪರ್ ಸ್ಟಾರ್, ತನ್ನ ಬಹುಕಾಲದ ಗೆಳೆಯ ಕಮ್ ಡೈರೆಕ್ಟರ್ ವಿಘ್ನೇಶ್ ಜೊತೆ ಸಪ್ತಪದಿ ತುಳಿಯಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES