Wednesday, January 22, 2025

ಹಾಲಿವುಡ್ ‘ಡಾಕ್ಟರ್ ಸ್ಟ್ರೇಂಜ್’​ಗೆ ಯಶ್ ಟಫ್ ಫೈಟ್

ನಮ್ಮ ಕನ್ನಡದ ಆಲ್​ಟೈಮ್ ಮಾಸ್ಟರ್​ಪೀಸ್ ಕೆಜಿಎಫ್ ಬರೀ ಬಾಲಿವುಡ್ ಮಂದಿಗಷ್ಟೇ ನಿದ್ದೆ ಕೆಡಿಸಿಲ್ಲ. ಹಾಲಿವುಡ್ ಮಂದಿಗೂ ಟಫ್ ಫೈಟ್ ಕೊಡ್ತಿದೆ. ರಾಕಿಭಾಯ್ ಆರ್ಭಟಕ್ಕೆ ರೀಸೆಂಟ್ ರಿಲೀಸ್ ಆದ ಡಾಕ್ಟರ್ ಸ್ಟ್ರೇಂಜ್ ಥಂಡಾ ಹೊಡೆದಿದೆ.

  • ಹಾಲಿವುಡ್ ‘ಡಾಕ್ಟರ್ ಸ್ಟ್ರೇಂಜ್’​ಗೆ ಯಶ್ ಟಫ್ ಫೈಟ್
  • ಹಿಂದಿ ಬಾಕ್ಸ್ ಆಫೀಸ್​ನಲ್ಲಿ ನಿಂತಿಲ್ಲ ತೂಫಾನ್ ರಾಕಿ..!
  • ಸೂಪರ್ ಹೀರೋ ಬೆನೆಡಿಕ್ಟ್ v/s ಮಾನ್​ಸ್ಟರ್ ಯಶ್
  • KGF ಚಿನ್ನದ ಎದುರು ಪ್ರೇಕ್ಷಕರಿಗೆ ಸ್ಟ್ರೇಂಜ್ ಆದ ಡಾಕ್ಟರ್

ಧೂಳು, ರಕ್ತ, ನೋವಿನಿಂದ ಕೂಡಿದ ನರಾಚಿ ಸಾಮ್ರಾಜ್ಯಕ್ಕೆ ರಾಕಿಭಾಯ್ ಹೊಸ ರೂಪ ಕೊಟ್ಟಂತೆ, ಭಾರತೀಯ ಚಿತ್ರರಂಗಕ್ಕೂ ಈ ಕೆಜಿಎಫ್ ಸಿನಿಮಾ ಹೊಸ ಆಯಾಮ ತಂದುಕೊಟ್ಟಿದ್ದು ಸುಳ್ಳಲ್ಲ. ಪ್ರಶಾಂತ್ ನೀಲ್, ಯಶ್ ಹಾಗೂ ವಿಜಯ್ ಕಿರಗಂದೂರು ಅವ್ರ ವರ್ಷಾನುಗಟ್ಟಲೆ ತಪಸ್ಸಿಗೆ ಪ್ರತಿಫಲ ಸಿಕ್ಕೇಬಿಡ್ತು.

ನಿರೀಕ್ಷೆಗೂ ಮೀರಿ ವಿಶ್ವ ಸಿನಿದುನಿಯಾದಲ್ಲಿ ಕೆಜಿಎಫ್ ಸಿನಿಮಾ ಅದ್ರಿಂದ ಹೊರಬಂದ ಚಿನ್ನದ ರೀತಿ ಫಳ ಫಳ ಹೊಳೆಯುತ್ತಿದೆ. ಸೌತ್ ಸಿನಿಮಾಗಳಷ್ಟೇ ಅಲ್ಲ, ಬಾಲಿವುಡ್ ಸಿನಿಮಾಗಳು, ಸ್ಟಾರ್ಸ್​ ಕೂಡ ಹುಬ್ಬೇರಿಸಿಬಿಟ್ರು. ಅಷ್ಟರ ಮಟ್ಟಿಗೆ ಕಂಪ್ಲೀಟ್ ಎಂಟರ್​ಟೈನರ್ ಆಗಿ, ಬಾಕ್ಸ್ ಆಫೀಸ್ ದೋಚಿಬಿಡ್ತು. ಕನ್ನಡದ ಸಿನಿಮಾವೊಂದು ಸಾವಿರ ಕೋಟಿ ಗಳಿಸೋದು ಅಂದ್ರೆ ತಮಾಷೆಯ ಮಾತಲ್ಲ.

ಅಂದಹಾಗೆ ಕೆಜಿಎಫ್ ಚಾಪ್ಟರ್-2 ಬರೀ ಬಾಲಿವುಡ್​ನಷ್ಟೇ ಶೇಕ್ ಮಾಡಿಲ್ಲ. ಹಾಲಿವುಡ್ ಮಂದಿಗೂ ಶಾಕ್ ನೀಡಿದೆ. ಬಾಕ್ಸ್ ಆಫೀಸ್​​ನಲ್ಲಿ ಮಾನ್​ಸ್ಟರ್ ತೂಫಾನ್ ಹವಾ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇಂಡಿಯನ್ ಸಿನಿಮಾಗಳು ರಾಕಿಭಾಯ್ ಮುಂದೆ ಮಂಕಾಗಿರೋದು ಓಕೆ. ಆದ್ರೆ ಹಾಲಿವುಡ್ ಸಿನಿಮಾಗಳು ಕೂಡ ಕೆಜಿಎಫ್ ಎದುರು ಅಲ್ಲಾಡ್ತಿರೋದು ಹೆಮ್ಮೆಯ ವಿಚಾರ.

ಹಾಲಿವುಡ್​ನ ಸೂಪರ್ ಹೀರೋ ಎಂಟರ್​ಟೈನರ್ ಡಾಕ್ಟರ್ ಸ್ಟ್ರೇಂಜ್ ಮೇ ಮೊದಲ ವಾರ ತೆರೆಗಪ್ಪಳಿಸಿದೆ. ವಿಶ್ವದಾದ್ಯಂತ ರಿಲೀಸ್ ಆಗಿರೋ ಈ ಸಿನಿಮಾ ಇಂಡಿಯಾದಲ್ಲೂ ಬಿಗ್ ಓಪನಿಂಗ್ ಪಡ್ಕೊಂಡಿದೆ. ಆದ್ರೆ ನಮ್ಮ ಇಂಡಿಯನ್ ಮಾನ್​ಸ್ಟರ್ ಮುಂದೆ ಬೆನೆಡಿಕ್ಟ್ ಕಂಬರ್​ಬ್ಯಾಚ್ ಅಂತಹ ಸೂಪರ್ ಹೀರೋನೇ ಡಲ್ ಹೊಡೆದಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಡಾಕ್ಟರ್ ಸ್ಟ್ರೇಂಜ್ ಮೂವಿಗೆ ರಾಕಿಭಾಯ್ ಟಫ್ ಫೈಟ್ ಕೊಡ್ತಿರೋದು ಇಂಟರೆಸ್ಟಿಂಗ್.

ಈ ಮಾತನ್ನ ನಾವು ಹೇಳ್ತಿರೋದಲ್ಲ. ಬಾಲಿವುಡ್​ನ ಸಿನಿಪಂಡಿತ ಅನಿಸಿಕೊಂಡಿರೋ ತರಣ್ ಆದರ್ಶ್​ ಅವ್ರೇ ಸಾಮಾಜಿಕ ಜಾಲತಾಣದ ಮೂಲಕ ಖಚಿತ ಪಡಿಸಿದ್ದಾರೆ. ಬಾಲಿವುಡ್ ಮಂದಿಯನ್ನ ಮಕಾಡೆ ಮಲಗಿಸಿ, ಹಾಲಿವುಡ್ ಮಂದಿಯ ಬುಡ ಕೂಡ ಅಲ್ಲಾಡಿಸ್ತಿರೋ ನಮ್ಮ ಕಲಾವಿದರ, ತಂತ್ರಜ್ಞರ ಕಾರ್ಯವನ್ನ ನಿಜಕ್ಕೂ ಮೆಚ್ಚಲೇಬೇಕು.

ಕ್ಲೈಮ್ಯಾಕ್ಸ್​ನಲ್ಲಿ ಚಾಪ್ಟರ್-3 ಹಿಂಟ್ ನೀಡಿದ್ದ ಚಿತ್ರತಂಡದ ಮೇಲೆ ಎಲ್ಲರಿಗೂ ಕೆಜಿಎಫ್​ನ ಮುಂದುವರೆಯದ ಅಧ್ಯಾಯದ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿದೆ. ಫಾಸ್ಟ್ ಅಂಡ್ ಫ್ಯೂರಿಯಸ್, ಸ್ಪೈಡರ್ ಮ್ಯಾನ್ ಸೇರಿದಂತೆ ಹಲವು ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳ ರೀತಿ ಕೆಜಿಎಫ್ ಕೂಡ ವರ್ಲ್ಡ್​ ಸಿನಿದುನಿಯಾದಲ್ಲಿ ಕ್ರೇಜ್ ಹುಟ್ಟಿಸಿರೋದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ವಿಚಾರವಾಗಿದೆ. ರಾಕಿಯ ಗೋಲ್ಡ್ ಕಹಾನಿ ಮುಂದುವರೆಯಲಿದ್ದು, ಸದ್ಯದಲ್ಲೇ ಬಿಗ್ ಬ್ರೇಕಿಂಗ್ ನ್ಯೂಸ್​ ಕೊಡಲಿದೆ ಚಿತ್ರತಂಡ .

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES