Thursday, January 23, 2025

ಹಸರಂಗ ಕೈಚಳಕ: ಐಪಿಎಲ್​ನಲ್ಲಿ ಚೊಚ್ಚಲ 5 ವಿಕೆಟ್​ ಸಾಧನೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​)ನ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್​ಸಿಬಿ) ತಂಡದ ಸ್ಪಿನ್ನರ್ ವನಿಂದು ಹಸರಂಗ ಅವರು ಇದೇ ಮೊದಲ ಬಾರಿಗೆ 5 ವಿಕೆಟ್ ಸಾಧನೆ ಮಾಡಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಬೆಂಗಳೂರು ಪಾಲಿಗೆ ಪ್ರಮುಖ ಆಟಗಾರ ಎನಿಸಿರುವ ಶ್ರೀಲಂಕಾ ಮೂಲದ ಹಸರಂಗ ಅವರು, ಸನ್​ ರೈಸರ್ಸ್​​ ಹೈದರಾಬಾದ್ ತಂಡ ವಿರುದ್ಧ​ 5 ವಿಕೆಟ್ ಪಡೆಯುವ ಮೂಲಕ ಆರ್​ಸಿಬಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಹೈದರಾಬಾದ್​ ವಿರುದ್ಧ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ನಾಯಕ ಫಫ್ ಡುಪ್ಲೆಸಿ ಬಿರುಸಿನ ಅರ್ಧಶತಕ (73*) ಮತ್ತು ರಜತ್ ಪಾಟಿದಾರ್ (48), ಗ್ಲೆನ್ ಮ್ಯಾಕ್ಸ್‌ವೆಲ್ (33) ಹಾಗೂ ದಿನೇಶ್ ಕಾರ್ತಿಕ್ (30*) ಉಪಯುಕ್ತ ಬ್ಯಾಟಿಂಗ್ ನರೆವಿನಿಂದ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು.

ಇನ್ನು ಬೌಲಿಂಗ್​ ವಿಭಾಗದಲ್ಲಿ ಹಸರಂಗ ಜಾದೂ ಮಾಡಿದ ಪರಿಣಾಮ ಹೈದರಾಬಾದ್ 19.2 ಓವರ್‌ಗಳಲ್ಲಿ 125 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಏಡನ್ ಮಾರ್ಕರಮ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಶಶಾಂಕ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ವಿಕೆಟ್‌ಗಳನ್ನು ಪಡೆದು ಹಸರಂಗ ಮೋಡಿ ಮಾಡಿದರು.

ವನಿಂದು ಹಸರಂಗ ಅವರು ಎಸೆದ ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸೇರಿದಂತೆ 18 ರನ್ ಮಾತ್ರ ಬಿಟ್ಟುಕೊಟ್ಟ ಹಸರಂಗ ಐದು ವಿಕೆಟ್ ಕಿತ್ತು ಮಿಂಚಿದರು.

RELATED ARTICLES

Related Articles

TRENDING ARTICLES